ಮೈಸೂರು: ಸಮಯ ವನ್ನು ಬಂಡವಾಳವಾಗಿ ಬಳಸಿಕೊಂಡು, ಮಾಡುವ ಕೆಲಸದ ಮೇಲೆ ನಂಬಿಕೆ ಇಟ್ಟು ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧ್ಯ ಎಂದು ಅಂತರರಾಷ್ಟ್ರೀಯ ಭಾಷಣಕಾರ ಡಾ.ವಿವೇಕ್ ಬಿಂದ್ರಾ ಅಭಿಪ್ರಾಯಪಟ್ಟರು. ನಗರದ ಕಲಾಮಂದಿರದಲ್ಲಿ ರುಪಿಟ್ರೀ ಫೌಂಡೇಷನ್ ಸಂಸ್ಥೆ ವತಿಯಿಂದ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೊರೆತ ಸಮಯ ವ್ಯರ್ಥ ಮಾಡಿ ಕೊಳ್ಳಬಾರದು. ಪ್ರತಿ ವ್ಯಕ್ತಿಗೂ ಪ್ರೇರೇಪಣೆ ನೀಡಬೇಕು. ಭಗವದ್ಗೀತೆಯಲ್ಲಿ ಕೃಷ್ಣ ಅರ್ಜು ನನ್ನು ಪ್ರೇರೇಪಿಸುವಂತೆ ಸಾಧನೆ ಮಾಡು ವವರಿಗೆ ಪ್ರೇರಣೆ ಅಗತ್ಯವಾಗಿದೆ ಎಂದರು. ಪ್ರತಿಯೊಬ್ಬರು ತಾವು ಮಾಡುವ ಕೆಲಸ ದಲ್ಲಿ…