ಅಕ್ರಮ ಮದ್ಯ ಮಾರಾಟ: ದೊಡ್ಡಗದ್ದವಳ್ಳಿ ಗ್ರಾಮಸ್ಥರ ಪ್ರತಿಭಟನೆ

ಹಾಸನ: ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ಮೇಲೆ ಕೂಡಲೇ ಕ್ರಮ ಜರುಗಿಸಿ, ತಡೆಗಟ್ಟ ಬೇಕು ಎಂದು ಆಗ್ರಹಿಸಿ ಬುಧವಾರ ದೊಡ್ಡ ಗದ್ದವಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಸಮಾವೇಶಗೊಂಡ ದೊಡ್ಡಗದ್ದವಳ್ಳಿ ಗ್ರಾಮ ಸ್ಥರು ಅಕ್ರಮ ಮದ್ಯ ಮಾರಾಟ ನಿಲ್ಲಿಸು ವಂತೆ ಘೋಷಣೆ ಕೂಗಿದರು.

ತಾಲೂಕಿನ ಸಾಲಗಾಮೆ ಹೋಬಳಿ, ದೊಡ್ಡಗದ್ದವಳ್ಳಿ ಅಂಚೆಯ, ಲಕ್ಷ್ಮೀಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಮೊದಲು ಕಲ್ಕೆರೆ ಹೊಸೂರು ಗ್ರಾಮದ ಕಾಂತರಾಜು ಮೇಲೆ ದೂರು ನೀಡಲಾ ಗಿತ್ತು. ಈ ಬಗ್ಗೆ ಎರಡು ಬಾರಿ ದೂರು ನೀಡ ಲಾಗಿದ್ದರೂ ಯಾವುದೇ ಪ್ರಯೋಜನವಾ ಗಿರುವುದಿಲ್ಲ ಎಂದು ದೂರಿದರು.

ಲಕ್ಷ್ಮೀಪುರ ಗ್ರಾಮದವರು ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಯುವಕರು ದಿನ ನಿತ್ಯ ಕುಡಿದು ಬಂದು ಅವಾಚ್ಯ ಪದಗಳನ್ನು ಬಳಸುತ್ತಿದ್ದಾರೆ. ಇದರಿಂದ ಮಹಿಳೆ ಯರು, ಮಕ್ಕಳು ಹಾಗೂ ಹಿರಿಯರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.

ಲಕ್ಷ್ಮೀಪುರ ಗ್ರಾಮದಲ್ಲಿ ಶೋಭಾ ಎಂಬುವರು ಮನೆಯ ಹಿಂಭಾಗ ಹಳೆಯ ಮನೆಯಲ್ಲಿ ಅಕ್ರಮ ಮದ್ಯ ಇಟ್ಟುಕೊಂಡು ಮಾರಾಟ ಮಾಡಿದರೇ, ಮಂಜುನಾಥ್ ಎಂಬುವರು ಹುಲ್ಲುಗುಡ್ಡೆ ಮತ್ತು ಸೂರಿನ ಅಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಟಿ.ಸ್ವಾಮಿ ಎಂಬುವರು ರಾಜಾರೋಷ ವಾಗಿ ಅಂಗಡಿಯಲ್ಲಿಯೇ ಮದ್ಯ ಮಾರಾಟ ಮಾಡುತ್ತಿದ್ದಾರೆ. ಕಾಂತರಾಜು ಎಂಬು ವರು ಅಂಗಡಿಯಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 10ರವರೆಗೂ ಮದ್ಯ ಮಾರಾಟ ಮಾಡುತ್ತಿರುವುದಾಗಿ ಪ್ರತಿಭಟನಾಕಾರರು ಆರೋಪಿಸಿದರು.

ಕೂಡಲೇ ಇವರ ಬಗ್ಗೆ ಕಾನೂನು ಕ್ರಮಕೈಗೊಂಡು ಮದ್ಯ ಮಾರಾಟವನ್ನು ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಗ್ರಾಮ ಸ್ಥರಾದ ದಿವ್ಯಾ, ಬಸವರಾಜು, ಸೋಮ ಶೇಖರ್, ಮಂಜುನಾಥ್, ರವೀಶ್, ಸುಮಿತ್ರ, ಶಂಕರ್ ಹನುಮಯ್ಯ ಇತರರು ಪಾಲ್ಗೊಂಡಿದ್ದರು.