ಡಿಜಿಟಲ್ ತಂತ್ರಜ್ಞಾನದಿಂದ ಜನತೆ ಜೀವನ ಗುಣಮಟ್ಟ ಸುಧಾರಣೆ

ಮೈಸೂರು: ಕೈಗಾ ರಿಕೋದ್ಯಮ ಹಾಗೂ ಸಾಮಾಜಿಕ ಚಟು ವಟಿಕೆಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಪರಿ ಣಾಮಕಾರಿ ಬಳಕೆಯಾದರೆ ದೇಶದ ಆರ್ಥಿಕ ಅಭಿವೃದ್ಧಿಯೊಂದಿಗೆ ಜನತೆಯ ಜೀವನ ಗುಣಮಟ್ಟ ಸುಧಾರಣೆಯಾಗಲಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅಭಿಪ್ರಾಯಪಟ್ಟರು.

ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿ ಬಿ.ಎನ್.ಬಹದ್ದೂರ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸೈನ್ಸಸ್‍ನ (ಬಿಐಎಂಎಸ್) ವ್ಯವಹಾರ ಆಡ ಳಿತ ಅಧ್ಯಯನ ವಿಭಾಗದ ವತಿಯಿಂದ `ನಾಲ್ಕನೇ ಕೈಗಾರಿಕಾ ಕ್ರಾಂತಿ’ ಕುರಿತಂತೆ ಹಮ್ಮಿಕೊಂಡಿರುವ ಎರಡು ದಿನಗಳ ಅಂತಾ ರಾಷ್ಟ್ರೀಯ ಸಮ್ಮೇಳನಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಜಾಗತಿಕವಾಗಿ ಭಾರತ ಉತ್ಪಾದನಾ ಕ್ಷೇತ್ರ ದಲ್ಲಿ ಸಮಗ್ರ ಅಭಿವೃದ್ಧಿಯಾಗಲು ಡಿಜಿ ಟಲ್ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಅಗತ್ಯ. ಇಂದಿನ ನಾಲ್ಕನೇ ಕೈಗಾರಿಕಾ ಕ್ರಾಂತಿ ಸಂದರ್ಭದಲ್ಲಿ ಕೇವಲ ವಿದ್ಯಾರ್ಹತೆ ಗಳಿಸಿ ದರಷ್ಟೇ ಸಾಲದು ವೃತ್ತಿ ಅಪೇಕ್ಷಿಸುವ ಕೌಶಲ ಕರಗತ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲೂ ಡಿಜಿಟಲ್ ತಂತ್ರಜ್ಞಾನ ಕೌಶಲ ವೃದ್ಧಿಗೂ ನೆರವಾಗಲಿದೆ ಎಂದು ಹೇಳಿದರು.

ಮೊದಲನೇ ಕೈಗಾರಿಕಾ ಕ್ರಾಂತಿಯಲ್ಲಿ ನೀರು ಮತ್ತು ಹಬೆಯನ್ನು ಬಳಸಿ ಯಂತ್ರ ದಿಂದ ಉತ್ಪನ್ನ ತಯಾರಿಸಲು ಸಾಧ್ಯ ಮಾಡಿತು. ವಿದ್ಯುಚ್ಛಕ್ತಿ ಪರಿಣಾಮಕಾರಿ ಬಳಕೆ ಮೂಲಕ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಿದ್ದು ಎರಡನೇ ಕೈಗಾರಿಕಾ ಕ್ರಾಂತಿ. ಮೂರನೇ ಕ್ರಾಂತಿಯಲ್ಲಿ ಡಿಜಿಟಲ್ ಕ್ಷೇತ್ರಕ್ಕೆ ನಾಂದಿ ಹಾಡಲಾಯಿತು. ನಾವಿಂದು 4ನೇ ಕೈಗಾರಿಕಾ ಕ್ರಾಂತಿಯ ಹಂತದ ಲ್ಲಿದ್ದು, ಡಿಜಿಟಲ್‍ನೊಂದಿಗೆ ಮಾಹಿತಿ ತಂತ್ರಜ್ಞಾನ ದಲ್ಲಿ ಪ್ರಗತಿ ಸಾಧಿಸಿ ಹತ್ತು ಹಲವು ಮಹತ್ವದ ಸುಧಾರಣೆ ತರಲಾಗಿದೆ. ಪ್ರಸಕ್ತ ಹಂತದಲ್ಲಿ ತಂತ್ರಜ್ಞಾನದ ವ್ಯಾಪಕ ಬಳಕೆ ಮೂಲಕ ಉತ್ಪಾದನಾ ಕ್ಷೇತ್ರದಲ್ಲಿನ ಸ್ಪರ್ಧೆ ಗಳನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದು ನುಡಿದರು.

ಕೇರಳದ ಕೊಜಿಕ್ಕೋಡ್‍ನ ಇಂಡಿ ಯನ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿರ್ದೇಶಕ ಪ್ರೊ.ದೇಬಷಿಸ್ ಚಟರ್ಜಿ ಮಾತನಾಡಿ, ಕೈಗಾರಿಕಾ ಕ್ರಾಂತಿಯ ಸರ ಪಳಿಯನ್ನು ಅವಲೋಕಿಸಿದರೆ, ಈ ಹಿಂದಿನ ಮೂರು ಕ್ರಾಂತಿಗಳಿಂತಲೂ ನಾಲ್ಕನೇ ಕ್ರಾಂತಿ ಯಲ್ಲಿ ಭಾರೀ ವ್ಯತ್ಯಾಸ ಕಾಣಬಹುದು. ನಾಲ್ಕನೇ ಕ್ರಾಂತಿ ಈ ಹಿಂದಿನ ಕ್ರಾಂತಿ ಗಳಲ್ಲಿನ ಮೂಲ ರಚನೆಯನ್ನೇ ಬದಲು ಮಾಡಿದೆ ಎಂದು ಹೇಳಿದರು.

ಜಪಾನ್, ನೈಜೀರಿಯಾ ಮೊದಲಾದ ದೇಶಗಳ ವಿವಿಧ ಭಾಗದ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ. ವಿಎಸ್‍ಟಿ ಡೀಸೆಲ್ ಎಂಜಿನ್ಸ್ ಕಂಪನಿಯ ಮಿಟ್ಸುಬಿಷಿ ಹೆವಿ ಇಂಡಸ್ಟ್ರಿಯ ವ್ಯವಸ್ಥಾಪಕ ನಿರ್ದೇಶಕ ಕೆಂಜಿ ಕಾವ ಮೋಟೊ, ಬೀಮ್ಸ್‍ನ (ಬಿಐಎಂಎಸ್) ಡೀನ್ ಪ್ರೊ. ಡಿ.ಆನಂದ್, ಪ್ರಾಧ್ಯಾಪಕಿ ಪ್ರೊ.ಆಯಿಶಾ ಎಂ.ಷರೀಫ್, ವಿಭಾಗದ ಮುಖ್ಯಸ್ಥ ಪ್ರೊ. ಆರ್.ಮಹೇಶ್, ಸಮ್ಮೇಳನ ಕಾರ್ಯ ದರ್ಶಿಗಳಾದ ಪ್ರೊ.ಎಸ್.ಜೆ.ಮಂಜು ನಾಥ್, ಡಾ.ಎಂ.ಅಮೂಲ್ಯ ಮತ್ತಿತರರು ಹಾಜರಿದ್ದರು.