ನಿವೃತ್ತಿ ಹಿನ್ನೆಲೆಯಲ್ಲಿ ಮಾನಸಗಂಗೋತ್ರಿ ಭೂ ವಿಜ್ಞಾನ ಪ್ರಾಧ್ಯಾಪಕ ಪ್ರೊ. ಬಾಲಸುಬ್ರಹ್ಮಣಿಯನ್ ದಂಪತಿಗೆ ಅಭಿನಂದನೆ

ಮೈಸೂರು: ಯಾವುದೇ ಕಷ್ಟದ ಕೆಲಸವನ್ನಾದರೂ ಹಿಂಜರಿಯದೆ ಮಾಡುತ್ತಿದ್ದ ಪೆÇ್ರ.ಎ.ಬಾಲಸುಬ್ರಮಣಿ ಯನ್ ಅವರು, ಮಾದರಿ ಶಿP್ಷÀಕರು ಹೇಗಿ ರಬೇಕು ಎಂಬುದನ್ನು ತೋರಿಸಿಕೊಟ್ಟಿ ದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪೆÇ್ರ.ಜಿ. ಹೇಮಂತಕುಮಾರ್ ಹೇಳಿದರು.

ನಾಳೆ ಸೇವೆಯಿಂದ ನಿವೃತ್ತರಾಗಲಿರುವ ಮಾನಸ ಗಂಗೋತ್ರಿಯ ಭೂ ವಿe್ಞÁನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪೆÇ್ರ. ಎ. ಬಾಲಸುಬ್ರಹ್ಮಣಿಯನ್ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ಕುಲಪತಿಗಳು, ವಿವಿಗೆ ಸೇರಿದಾಗಲೇ ತಂತ್ರಾಂಶಕ್ಕೆ ಮತ್ತು ಕಂಪ್ಯೂಟರ್‍ಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರು. 2020ಕ್ಕೆ ಮೈಸೂರು ವಿವಿ ಡಿಜಿಟಲೀಕರಣವಾಗುತ್ತಿದ್ದು, ಈ ಹಿನ್ನೆಲೆ ಯಲ್ಲಿ ವಿವಿಯಲ್ಲಿ ಮೊದಲು ಕಂಪ್ಯೂ ಟರ್ ಬಳಸಿದ್ದು ಬಾಲಸುಬ್ರಮಣಿಯನ್ ಅವರೆ. ನ್ಯಾಕ್ ಆರಂಭವಾದಾಗ ಅದರ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇರಲಿಲ್ಲ. ಅದನ್ನು ಎಲ್ಲರಿಗೂ ಪಿಪಿಟಿ ಮೂಲಕ ಅರ್ಥ ಮಾಡಿಸಿದರು. ಮೈಸೂರು ವಿವಿ ನ್ಯಾಕ್‍ನಲ್ಲಿ ಗ್ರೇಡ್ ಪಡೆದು ಅಭಿ ವೃದ್ಧಿ ಹೊಂದಲು ಸಾಕಷ್ಟು ಶ್ರಮಿಸಿದ್ದಾರೆ. ಮುಂದೆಯೂ ನಮ್ಮೊಂದಿಗೆ ಇರುತ್ತಾರೆ ಎಂಬ ನಂಬಿಕೆ ಇದೆ ಎಂದರು.

ವಿದ್ಯಾರ್ಥಿಗಳು ಕಂಪ್ಯೂಟರ್ ಅಧ್ಯ ಯನಕ್ಕೆ ಬೇರೆ ಬೇರೆ ಕಾಲೇಜಿಗೆ ಹೋಗು ತ್ತಿದ್ದ ವೇಳೆ ವಿವಿಯಲ್ಲಿ ಕಂಪ್ಯೂಟರ್ ಅಧ್ಯ ಯನ ಮತ್ತು ತಾಂತ್ರಿಕ ಕೋರ್ಸ್ ಆರಂ ಭಿಸಲು ಇವರೂ ಕೂಡ ಕಾರಣಕರ್ತರು. ಬಹಳ ಶಿಸ್ತಿನಿಂದ ಕೆಲಸ ಮಾಡುತ್ತಿದ್ದರು. ತಾಂತ್ರಿಕ, ಆಡಳಿತ ವಿಚಾರದಲ್ಲಿ ಅವರ ಮತ್ತು ನನ್ನ ನಡುವೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ವಿವಿಯ ಅಭಿವೃದ್ಧಿಗೆ ಹಮ್ಮಿಕೊಳ್ಳಲಾಗುತ್ತಿದ್ದ ಯೋಜನೆಗಳಿಗೂ ನೆರವು ನೀಡುತ್ತಿದ್ದರು ಎಂದು ಶ್ಲಾಘಿಸಿದರು.

ಮೈಸೂರು ವಿವಿ ವಿಶ್ರಾಂತ ಕುಲಪತಿ ಪೆÇ್ರ. ಎಂ.ಮಾದಯ್ಯ ಮಾತನಾಡಿ, ಮೈಸೂರು ವಿಶ್ವವಿದ್ಯಾನಿಲಯದ ಹಲವು ವಿಭಾಗಗಳ ಅಭಿವೃದ್ಧಿಗಾಗಿ ಪೆÇ್ರ.ಎ.ಬಾಲಸುಬ್ರಹ್ಮಣಿ ಯನ್ ಶ್ರಮಿಸಿದ್ದಾರೆ. ನಾನು ಬಾಲಸುಬ್ರ ಮಣಿಯನ್ ಅವರನ್ನು ಸುಮಾರು 25 ವರ್ಷದಿಂದ ಬಲ್ಲೆ. ನಾನು ಮೈಸೂರು ವಿವಿ ಕುಲಪತಿಯಾಗಿದ್ದ ಅವಧಿಯಲ್ಲಿ ಅವರು ತಮಗಿದ್ದ ಅರ್ಹತೆಯ ಮೇಲೆ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದರು. ಅವರು ತಮ್ಮ ವಿಭಾಗಕ್ಕೆ ಮಾತ್ರ ಸೀಮಿತ ರಾಗದೆ ವಿಶ್ವವಿದ್ಯಾನಿಲಯದ ಕಾರ್ಯ ಯೋಜನೆ, ಎವಿಆರ್‍ಸಿ, ಇಎಂಎಂ ಆರ್‍ಸಿ ಸೇರಿದಂತೆ ಅನೇಕ ವಿಭಾಗಗಳ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ.

ಯಾವುದನ್ನು ಗೊತ್ತಿಲ್ಲ ಎಂದು ಹೇಳುತ್ತಿರ ಲಿಲ್ಲ. ಕಲಿತು ಮಾಡುವ ಗುಣ ಅವರಲ್ಲಿ ಇತ್ತು ಎಂದು ಅವರು ಬಣ್ಣಿಸಿದರು. ಕೆಲವು ವರ್ಷಗಳ ಬಳಿಕ ಪಾಂಡಿಚೇರಿ ವಿವಿಯಲ್ಲಿ ಅವರನ್ನು ನೋಡಿದೆ. ಅಲ್ಲಿಯೂ ಶೈP್ಷÀಣಿಕವಾಗಿ ಬಹಳಷ್ಟು ದುಡಿದಿದ್ದಾರೆ. ಮತ್ತೆ ಮೈಸೂರು ವಿವಿಗೆ ಬಂದ ಮೇಲೆ ಭೂ ವಿಜ್ಞಾನ ಅಧ್ಯಯನ ವಿಭಾಗದ ಏಳಿಗೆ ಗಾಗಿ ದುಡಿದರು. 160 ಪ್ರಬಂಧ ಮಂಡಿ ಸಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ಅವರು ಮಾರ್ಗದರ್ಶನ ನೀಡಿದ್ದಾರೆ. ಅವರ ಜೊತೆಗಾರರ ಜೊತೆ ಉತ್ತಮ ಕೆಲಸ ಮಾಡಿ ದ್ದಾರೆ. ಆಡಳಿತಾತ್ಮಕವಾಗಿ ಅವರಲ್ಲಿ ಉತ್ತಮ ಗುಣವಿತ್ತು ಎಂದರು. ಇದೇ ವೇಳೆ ಪೆÇ್ರ.ಎ. ಬಾಲಸುಬ್ರಮಣಿಯನ್ ಮತ್ತು ಇಂದಿರಾ ಬಾಲಸುಬ್ರಮಣಿಯನ್ ಅವರನ್ನು ಸನ್ಮಾನಿ ಸಲಾಯಿತು. ಕಾರ್ಯಕ್ರಮದಲ್ಲಿ ಭೂ ವಿe್ಞÁನ ವಿಭಾಗದ ಅಧ್ಯಕ್ಷ ಪೆÇ್ರ.ಎಂ.ಸೇತು ಮಾಧವ್, ಪೆÇ್ರ.ರುದ್ರಯ್ಯ, ಪೆÇ್ರ.ಇಂದು ಮತಿ ಮತ್ತಿತರರು ಉಪಸ್ಥಿತರಿದ್ದರು.