ವಿಜಯ ವಿಠಲ ಕಾಲೇಜಿನಲ್ಲಿ ಪರಿಸರ ಸಂಘದ ಉದ್ಘಾಟನೆ

ಮೈಸೂರು,ಜೂ.24-ನಗರದ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ 2019ನೇ ಸಾಲಿನ ಪರಿಸರ ಸಂಘದ ಉದ್ಘಾ ಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೈಸೂರಿನ ಪ್ರಾದೇಶಿಕ, ಪ್ರಾಕೃತಿಕ ಮತ್ತು ಇತಿಹಾಸ ವಸ್ತುಸಂಗ್ರಹಾಲಯದ ಶೈಕ್ಷಣಿಕ ಅಧಿಕಾರಿ ಬಿ.ಎಸ್.ಯೋಗೇಂದ್ರರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪರಿಸರ ಸಂರಕ್ಷಣೆಯ ಮಹತ್ವ ಮತ್ತು ಅದರ ಅನಿವಾರ್ಯತೆಯನ್ನು ಅರಿತು ಪರಿಶುದ್ಧ ವಾದ ಗಾಳಿ, ನೆಲ, ಜಲವನ್ನು ಸಂರಕ್ಷಿಸ ಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿ ಅದರಲ್ಲೂ ಶುದ್ಧವಾದ ನೀರಿನ ಮಹತ್ವವನ್ನು ಅರಿಯಬೇಕು. ಪ್ರಾಚೀನ ಕಾಲದಲ್ಲಿದ್ದ ಕೆರೆ, ಬಾವಿ ಮುಂತಾದ ನೀರಿನ ಸೆಲೆಗಳು ಆಧುನಿಕ ಯುಗದಲ್ಲಿ ಪರಿಸರ ಮಾಲಿನ್ಯದಿಂದಾಗಿ ಬರಿದಾಗುತ್ತಿವೆ. ಮಳೆ ನೀರು ಸಂರಕ್ಷಣೆ ಮತ್ತು ಮಿತವಾದ ನೀರಿನ ಬಳಕೆ ಇಂದಿನ ಅಗತ್ಯ ಎಂದು ಹೇಳಿದರು. ಪರಿಸರ ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ನಂತರ ನಡೆದ ಪ್ರಶ್ನೋತ್ತರದಲ್ಲಿ ಪರಿಸರ ಸಂರಕ್ಷಣೆ ಮತ್ತು ನೀರಿನ ಮಹತ್ವವನ್ನು ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು.

ಕಾಲೇಜಿನ ಪ್ರಾಂಶುಪಾಲ ಹೆಚ್. ಸತ್ಯಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಪರಿಸರ ಸಂಘದ ಕಾರ್ಯಚಟುವಟಿಕೆಗಳನ್ನು ಕುರಿತು ಮಾಹಿತಿ ನೀಡಿ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಉಂಟಾಗುವ ಹಾನಿಯ ಬಗ್ಗೆ ತಿಳಿಸಿ ದರು. ಪರಿಸರ ಸಂಘದ ಸಂಚಾಲಕರಾದ ರಮ್ಯ.ಎಸ್ ಮತ್ತು ಅನ್ನಪೂರ್ಣ ರಾವ್ ಹಾಗೂ ಮಯೂರಲಕ್ಷ್ಮಿ ಉಪಸ್ಥಿತರಿದ್ದರು. ಅನಘ ಎಂ.ಪುರೋಹಿತ್ ಪ್ರಾರ್ಥಿಸಿ, ಸಿಂಚನ ಎಸ್ ನಿರೂಪಿಸಿ, ಉನ್ನತಿ ಮುಖ್ಯ ಅತಿಥಿಗಳನ್ನು ಪರಿಚಯಿಸಿ ವಿಸ್ಮಯ ಎಸ್ ದಿನೇಶ್ ಸ್ವಾಗತಿಸಿದರೆ, ವಸುಂಧರಾ ವಂದಿಸಿದರು.