ಮೈಸೂರು:ಮೈಸೂರಿನ ವಿಶ್ವೇಶ್ವರ ನಗರದಲ್ಲಿ ಸೆಂಟ್ ಥಾಮಸ್ ವಿದ್ಯಾಸಂಸ್ಥೆಯ ವಿಸ್ತೃತ ಕಟ್ಟಡವನ್ನು ಮೆಟ್ರೋಪಾಲಿಟನ್ ಆಫ್ ದಿ ಮಾರ್ ಥೋಮ ಸಿರಿಯನ್ ಚರ್ಚ್ ಹಾಗೂ ವಿದ್ಯಾಸಂಸ್ಥೆ ಪೋಷಕ ರೆ.ಡಾ.ಜೋಸೆಫ್ ಮಾರ್ಚ್‍ಥೋಮ ಶುಕ್ರವಾರ ಉದ್ಘಾ ಟಿಸಿದರು. ಮಾರ್ ಥೋಮ ಶಿಕ್ಷಣ ಸೊಸೈಟಿಯ ಸೆಂಟ್ ಥಾಮಸ್ ವಿದ್ಯಾಸಂಸ್ಥೆ ಆವರಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸೀನಿಯರ್ ಸೆಕೆಂಡರಿ ಬ್ಲಾಕ್ ಕಟ್ಟಡವನ್ನು ಮಾರ್ ಥೋಮ ಶಿಕ್ಷಣ ಸೊಸೈಟಿ ಅಧ್ಯಕ್ಷ ರೆ.ಡಾ.ಮ್ಯಾಥ್ಯೂಸ್ ಮಾರ್ ಮಕರ ರಿಯೋಸ್ ಅವರ ಉಪಸ್ಥಿತಿಯಲ್ಲಿ ರೆ.ಡಾ.ಜೋಸೆಫ್ ಮಾರ್ಚ್‍ಥೋಮ ಅವರು ಉದ್ಘಾಟಿಸಿದರು.
ಸೊಸೈಟಿಯ ಉಪಾಧ್ಯಕ್ಷ ರೆ.ಪ್ರಕಾಶ್ ಅಬ್ರಹಾಂ, ಕಾರ್ಯದರ್ಶಿ ಶ್ಯಾಮ್ ಚೆರಿಯನ್ ಕುಂಬುಕಟ್ಟು, ಖಜಾಂಚಿ ಇಬಿ ಈಫೆನ್ ಸೇರಿದಂತೆ ಮತ್ತಿತರರು ಹಾಜರಿದ್ದರು. ಇದೇ ವೇಳೆ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ಒದಗಿಸುವ ಆಶಯ ದೊಂದಿಗೆ 1964ರಲ್ಲಿ ಈ ಶಿಕ್ಷಣ ಸಂಸ್ಥೆ ಆರಂಭಿಸಲಾ ಯಿತು. ವಿದ್ಯಾಸಂಸ್ಥೆಯಲ್ಲಿ ಪ್ರಸ್ತುತ 2,700 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಬೋಧಕ ಹಾಗೂ ಬೋಧಕೇತರ ವರ್ಗದ ಒಟ್ಟು 125 ಸಿಬ್ಬಂದಿ ಶಾಲೆಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದಾರೆ. ಒಂದು ಅಂತಸ್ತಿನ ನೂತನ ಕಟ್ಟಡದಲ್ಲಿ 10 ಕೊಠಡಿಗಳಿದ್ದು, ಒಂದು ಗ್ರಂಥಾಲಯ ಸೇರಿದಂತೆ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಪದವಿಪೂರ್ವ ವಿದ್ಯಾರ್ಥಿಗಳಿಗೆ ಈ ಹೊಸ ಕಟ್ಟಡ ನಿರ್ಮಿಸಲಾಗಿದೆ.