ಜ್ಞಾನದ ಆಧಾರದಿಂದ ಬರುವ ಆದಾಯಕ್ಕೆ ಮಾತ್ರ ಸಮಾಜದಲ್ಲಿ ಬೆಲೆಯಿದೆ

ಮೈಸೂರು: ಹಣ ಸಂಪಾದಿಸಲು ವಿದ್ಯಾಭ್ಯಾಸ ಅನಿ ವಾರ್ಯವಲ್ಲ. ವಿದ್ಯಾಭ್ಯಾಸ ಮಾಡದ ಮನುಷ್ಯನೂ ಬೇರೆ ಬೇರೆ ದಾರಿಗಳಲ್ಲಿ ಹಣ ಸಂಪಾದಿಸಬಹುದು. ಆದರೆ ಜ್ಞಾನದ ಆಧಾರ ದಿಂದ ಬರುವ ಆದಾಯಕ್ಕೆ ಮಾತ್ರ ಸಮಾಜದಲ್ಲಿ ಬೆಲೆಯಿದೆ ಎನ್ನು ವುದನ್ನು ನಾವು ಅರಿಯಬೇಕು ಎಂದು ಶ್ರೀರಂಗಪಟ್ಟಣದ ಪರಿ ವರ್ತನ ಸಂಸ್ಥೆ ಡೀನ್ ಹಾಗೂ ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ಆರ್.ಎ. ಚೇತನ್‍ರಾಮ್
ಅಭಿಪ್ರಾಯಪಟ್ಟರು.

ನಗರದ ಬಿ.ಎನ್ ರಸ್ತೆಯಲ್ಲಿರುವ ಜೆಎಸ್‍ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ 2018-19ನೇ ಸಾಲಿನ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾ ರಂಭದಲ್ಲಿ ಅವರು ಮಾತನಾಡುತ್ತಿದ್ದರು. ಸಂತೋಷವಾಗಿದ್ದಾಗ, ಸಕಾರಾತ್ಮಕವಾಗಿದ್ದಾಗ, ಭಯ, ಆತಂಕ ಮತ್ತು ಉದ್ವೇಗಗಳು ಇಲ್ಲದಿರುವಾಗ ಮನಸ್ಸು, ಹೊಸ ವಿಷಯಗಳಿಗೆ ತೆರೆದುಕೊಳ್ಳು ತ್ತದೆ ಹಾಗೂ ಕಲಿಕೆ ಸುಲಭವಾಗುತ್ತದೆ.

ಸಂತೋಷಭರಿತ ಮನಸ್ಸು, ಸಕಾರಾತ್ಮಕ ಮನೋಭಾವ, ವ್ಯಕ್ತಿತ್ವ ವಿಕಸನ, ದೈಹಿಕ-ಮಾನಸಿಕ ಮತ್ತು ನೈತಿಕ ಬಲ, ಬದ್ಧತೆ, ಆತ್ಮವಿಶ್ವಾಸ, ಚಿಕ್ಕ ಚಿಕ್ಕ ಗುರಿ ಸಾಧನೆಯ ಮೂಲಕ ದೊಡ್ಡ ಗುರಿಸಾಧನೆ ಇವು ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಬೇಕಾದ ಸೂತ್ರಗಳು. ವಿದ್ಯಾರ್ಥಿಗಳು ಪರೀಕ್ಷೆಗಳ ಬಗ್ಗೆ ಸಕಾರಾತ್ಮಕ ಧೋರಣೆ ತಾಳಬೇಕು. ಪರೀಕ್ಷೆಗಳನ್ನು ಯುದ್ಧವೆಂದು ಪರಿಭಾವಿಸದೆ ಹಬ್ಬವೆಂದು ಆಚರಿಸಿದರೆ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದರು. ತನ್ನ ಸೀಮಿತಾವಧಿಯ ಬದುಕನ್ನು ಪ್ರತಿಯೊಬ್ಬ ವ್ಯಕ್ತಿಯೂ ಯಾವ ರೀತಿ ಸಾರ್ಥಕಗೊಳಿಸಿಕೊಳ್ಳ ಬೇಕು ಎನ್ನುವುದೇ ಬುದ್ಧ, ಬಸವಣ್ಣ, ಸ್ವಾಮಿ ವಿವೇಕಾನಂದ ರಂತಹ ಮಹಾಪುರುಷರ ಬೋಧನೆಯ ಸಾರವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೆಎಸ್‍ಎಸ್ ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕÀ ಪ್ರೊ ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಹಣ ಸಂಪಾದಿಸುವ ಯಂತ್ರಗಳನ್ನಾಗಿ ಮಾರ್ಪಡಿಸುವ ಕಾರ್ಖಾನೆ ಗಳಾಗಬಾರದು. ಮಾನವ ಸಂಪನ್ಮೂಲಗಳ ಅಭಿವೃದ್ಧಿಯ ಕೇಂದ್ರ ಗಳಾಗಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆಯ ಜೊತೆಗೆ ವಿವಿಧ ವಿಷಯಗಳಲ್ಲಿ ಕೌಶಲ್ಯವನ್ನು ಹೊಂದಿರುವುದು ಅತ್ಯಗತ್ಯ. ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಈಗಾಗಲೇ ಹಲವು ಕೌಶಲ್ಯಾಧಾರಿತ ಕೋರ್ಸುಗಳು ಮತ್ತು ಇತರ ಉತ್ಕøಷ್ಟ ದರ್ಜೆಯ ಶೈಕ್ಷಣಿಕ ಸೌಲಭ್ಯಗಳನ್ನು ಹೊಂದಿದೆ. ವಿದ್ಯಾರ್ಥಿ ಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ವಿದ್ಯಾರ್ಥಿಗಳು ಪ್ರೋತ್ಸಾಹ ಇಲ್ಲ ಎಂದು ನೆಪ ಹೇಳಿ ಸುಮ್ಮನೆ ಕೂರಬಾರದು. ಮುನ್ನುಗ್ಗುವ ಮನೋಭಾವ ಹೊಂದಿರÀಬೇಕು ಮತ್ತು ಸರ್ಕಾರ ಒದಗಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಯುವಜನ ಮತ್ತು ಕ್ರೀಡಾ ಇಲಾಖೆಯ ಬ್ಯಾಸ್ಕೆಟ್ ಬಾಲ್ ತರಬೇತುದಾರರಾದ ರವಿಪ್ರಕಾಶ್ ಸಿ ಅನ್ಪುರ್ ಮಾತನಾಡಿ, ವಿದ್ಯಾರ್ಥಿಗಳು ಕೀಳರಿಮೆಯನ್ನು ಬಿಟ್ಟು ಮಾನಸಿಕವಾಗಿ ಸದೃಢÀ ರಾಗಬೇಕು. ಕ್ರೀಡೆ ಸೋಲು-ಗೆಲುವುಗಳನ್ನು ಸಮಾನವಾಗಿ ತೆಗೆದುಕೊಳ್ಳುವ ಮನಃಸ್ಥೈರ್ಯವನ್ನು ಬೆಳೆಸುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ ಎಂದರು.

ಈ ಸಂದರ್ಭದಲ್ಲಿ ಸಾಂಸ್ಕøತಿಕ ಸ್ಪರ್ಧೆ ಮತ್ತು ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನಗಳನ್ನು ವಿತರಿ ಸಿದರು. ಸಾಂಸ್ಕøತಿಕ ಸಮಿತಿಯ ಸಂಚಾಲಕರಾದ ಆಂಗ್ಲ ಉಪನ್ಯಾಸಕಿ ವಿ.ವಾಣಿ ಮತ್ತು ಕ್ರೀಡಾ ಸಮಿತಿಯ ಸಂಚಾಲಕರಾದ ದೈಹಿಕ ಶಿಕ್ಷಣ ನಿರ್ದೇಶಕ ಟಿ.ಅರವಿಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಎಸ್.ಸೋಮಶೇಖರ ಗಣ್ಯರನ್ನು ಸ್ವಾಗತಿಸಿ, ಪರಿಚಯ ಮಾಡಿಕೊಟ್ಟರು. ದ್ವಿತೀಯ ಪಿಯುಸಿ ವಿದ್ಯಾರ್ಥಿ ದಾಮೋ ದರ ಪ್ರಾರ್ಥಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕು. ಅಮೃತಾ ಕಾರ್ಯಕ್ರಮ ನಿರೂಪಿಸಿದರು, ಸಿ.ಎಸ್.ಮದನ್ ವಂದಿಸಿದರು.