ಹೇಮಾವತಿಗೆ ಹೆಚ್ಚಿದ ಒಳಹರಿವು: ನದಿ ದಂಡೆಯ ಜನತೆಗೆ ಎಚ್ಚರಿಕೆ

ಹಾಸನ: ಹೇಮಾವತಿ ಜಲಾ ಶಯದ ಜಲಾನಯ ಪ್ರದೇಶದಲ್ಲಿ ಸತತ ವಾಗಿ ಮಳೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುತ್ತಿದರಿಂದ. ಯಾವುದೇ ಘಳಿಗೆಯಲ್ಲಾದರೂ ನದಿಗೆ ನೀರನ್ನು ಬಿಡುವ ಸಾಧ್ಯತೆಗಳಿದೆ. ಹಾಗಾಗಿ ನದಿ ದಂಡೆಯ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಲು ಕೋರಲಾಗಿದೆ.

ಜಲಾಶಯದ ಗರಿಷ್ಠ ನೀರಿನ ಮಟ್ಟ 29922 ಅಡಿಯಿದ್ದು, ಇಂದು ಬೆಳಗ್ಗೆ 6ಗಂಟೆಗೆ 20,535 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯ 2912 ಅಡಿ ದಾಟಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಲಾ ಶಯಕ್ಕೆ ನೀರು ಹರಿದು ಬರುವ ನಿರೀಕ್ಷೆಯಿದೆ.

ಆದಕಾರಣ ಅಣೆಕಟ್ಟೆಯ ಕ್ರೆಸ್ಟ್ ಗೇಟ್‍ಗಳಿಂದ ಯಾವುದೇ ಘಳಿಗೆಯಲ್ಲಾದರೂ ನದಿಗೆ ನೀರನ್ನು ಬಿಡುವ ಸಾಧ್ಯತೆಗಳಿದ್ದು, ನದಿ ದಂಡೆಯಲ್ಲಿರುವ ಗ್ರಾಮಸ್ಥರು ಮುನ್ನಚ್ಚರಿಕೆ ವಹಿಸಿ ಸುರಕ್ಷತಾ ಸ್ಥಳಗಳಿಗೆ ತೆರಳಲು ಕೋರಲಾಗಿದೆ.

ಎಲ್ಲಾ ಇಲಾಖಾ ಅಧಿಕಾರಿಗಳು ತುರ್ತು ನಿಗಾವಹಿಸಿ ನದಿ ದಂಡೆಯ ಗ್ರಾಮಸ್ಥರಿಗೆ ಸೂಕ್ತ ತಿಳುವಳಿಕೆ ಮತ್ತು ರಕ್ಷಣೆ ನೀಡಿ ಹಾನಿಯಾಗದಂತೆ ಕ್ರಮಕೈಗೊಳ್ಳಲು ಗೋರೂರಿನ ಹೇಮಾ ವತಿ ಯೋಜನಾ ವೃತ್ತದ ಸೂಪರಿಂಟೆಂ ಡಿಂಗ್ ಇಂಜಿನಿಯರ್ ತಿಳಿಸಿದ್ದಾರೆ.