ಕೊರೊನಾ ಸೋಂಕಿತರ ಹೆಚ್ಚಳ ಹಿನ್ನೆಲೆ ಧನಗಹಳ್ಳಿ ಗ್ರಾಮ ಸೀಲ್‍ಡೌನ್

ಜಯಪುರ, ಮೇ 5 (ಬಿಳಿಗಿರಿ)- ಜಯಪುರ ಹೋಬಳಿಯ ಧನಗಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ 6 ಮಂದಿ ಕೊರೊನಾ ಸೊಂಕಿತರು ಮೃತಪಟ್ಟಿದ್ದರು. ಇನ್ನು ಹಲವರು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಧನಗಹಳ್ಳಿ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದ್ದು, ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ.

ಗ್ರಾಮದ ಜನರಲ್ಲಿ ಕೊರೊನಾ ಲಕ್ಷಣ ಗಳು ಕಾಣಿಸಿಕೊಂಡವರಿಗೆ ಆರೋಗ್ಯ ಸಿಬ್ಬಂದಿ ಆರ್‍ಟಿಪಿಸಿಆರ್ ಪರೀಕ್ಷೆ ಮಾಡು ತ್ತಿದ್ದಾರೆ. ಅನಗತ್ಯವಾಗಿ ಜನರು ಮನೆ ಯಿಂದ ಹೊರಬರದೆ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಮೈಸೂರು ತಾಲೂಕು ತಹಸೀಲ್ದಾರ್ ಕೆ.ಆರ್.ರಕ್ಷಿತ್ ಅವರ ನೇತೃತ್ವದ ಅಧಿಕಾರಿಗಳ ತಂಡವು ಸೋಮವಾರ ಧನಗಹಳ್ಳಿ ಗ್ರಾಮದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿ, ಎಚ್ಚರಿಕೆಯಿಂದಿರು ವಂತೆ ಜಾಗೃತಿ ಮೂಡಿಸಿದರು.

ಗೋಪಾಲಪುರ, ಧನಗಹಳ್ಳಿ, ಸೋಲಿಗರ ಕಾಲೋನಿ, ತಳೂರು ಮುಂತಾದ ಗ್ರಾಮಗಳಲ್ಲಿ 60ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಲಕ್ಷಣ ಹೊಂದಿರುವವರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಇತರರಿಗೆ ತೊಂದರೆ ಯಾಗದಂತೆ ಜನರು ಜಾಗೃತಿ ವಹಿಸಿ. 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮೈಸೂರು ತಾಲೂಕು ಆರೋಗ್ಯಾ ಧಿಕಾರಿ ಡಾ.ಮಹದೇವ ಪ್ರಸಾದ್ ಇದೇ ವೇಳೆ ತಿಳಿಸಿದರು.

ಈ ವೇಳೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಮಹದೇವ ಪ್ರಸಾದ್, ಜಯಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವೆಂಕಟೇಶ್, ಪಿಡಿಓ ಗೋಪಾಲಕೃಷ್ಣ, ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿದ್ದರು.