ಅಂಬೇಡ್ಕರ್ ವಿಚಾರಧಾರೆ, ಚಿಂತನೆ ಅಳವಡಿಸಿಕೊಳ್ಳುವಲ್ಲಿ ಭಾರತ ವಿಫಲ

ಮೈಸೂರು, ಜ.20(ಆರ್‍ಕೆಬಿ)- ಪ್ರಸ್ತುತದಲ್ಲಿ ದೇಶ ದಲ್ಲಿ ಡಾ.ಅಂಬೇಡ್ಕರ್ ಅವರ ವಿಚಾರಧಾರೆ ಹಾಗೂ ಚಿಂತನೆಗಳನ್ನು ಅಳವಡಿಸಿಕೊಳ್ಳುವಲ್ಲಿ ವಿಫಲ ವಾಗಿದ್ದೇವೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಕರಾಮುವಿಯ ಡಾ.ಬಿ. ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸೋಮವಾರ `ಡಾ.ಅಂಬೇಡ್ಕರ್ ಅವರ ಆಲೋಚನೆಗಳು ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿ’ ಕುರಿತ ಎರಡು ದಿನದ ರಾಷ್ಟ್ರೀಯ ಸಮ್ಮೇ ಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ಅರ್ಥಶಾಸ್ತ್ರಜ್ಞ, ಸಾಮಾಜಿಕ ಚಿಂತಕ, ಕಾನೂನು ತಜ್ಞ, ಪತ್ರಿಕೋದ್ಯಮಿ, ಸಮಾಜ ಸೇವಕ ಹೀಗೆ ಎಲ್ಲಾ ಆಯಾಮಗಳಲ್ಲೂ ತಮ್ಮನ್ನು ತಾವು ತೊಡಗಿಸಿ ಕೊಂಡು ದೇಶದ ಆರ್ಥಿಕ, ಕೈಗಾರೀಕರಣಕ್ಕೆ ಒತ್ತು ನೀಡಿದ್ದವರು ಡಾ.ಬಿ.ಆರ್.ಅಂಬೇಡ್ಕರ್. ಹೊರದೇಶ ಗಳಿಗೆ ಅವಲಂಬಿತರಾಗದೆ ದೇಶದ ಕಚ್ಛಾವಸ್ತುವನ್ನೇ ಬಳಸಿ ಉತ್ಪಾದನೆ ಮಾಡಬೇಕು ಎಂಬುದನ್ನು ಪ್ರತಿ ಪಾದಿಸಿದ್ದರು. ಕಾರ್ಮಿಕರಿಗೆ ಉದ್ಯೋಗದಲ್ಲಿ ದುಡಿಮೆ ಅವಧಿಯನ್ನು 12 ಗಂಟೆಯಿಂದ 8 ಗಂಟೆಗೆ ಕಡಿತ ಗೊಳಿಸಿ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸಿ ದವರು. ಅಸಮಾನತೆಯನ್ನು ತೊಡೆದು ಹಾಕಿ, ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ರಾಜ ಕೀಯ ಅಧಿಕಾರವನ್ನು ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಹಂಬಲ ಅವರದ್ದಾಗಿತ್ತು. ಅದನ್ನು ಸಂವಿ ಧಾನದ ಮೂಲಕ ನೀಡುವಲ್ಲಿ ಯಶಸ್ವಿಯಾದರು. ಆದರೆ, ಅವರ ವಿಚಾರಧಾರೆ ಹಾಗೂ ಚಿಂತನೆಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ವಿಷಾದಿಸಿದರು.

ಇಂದಿನ ಯುವ ಪೀಳಿಗೆ ಬಾಬಾ ಸಾಹೇಬರ ಆರ್ಥಿಕ ಚಿಂತನೆಗಳ ಬಗ್ಗೆ ಗುಂಪು ಚರ್ಚೆ ಹಾಗೂ ಸೆಮಿನಾರ್‍ಗಳನ್ನು ಏರ್ಪಡಿಸಿ ಅವರ ಆರ್ಥಿಕ ಅಂಶಗಳ ಆಳವಾದ ಅಧ್ಯಯನ ನಡೆಸುವುದರ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು.

ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯ ಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪೆÇ್ರ.ಜೆ.ಸೋಮಶೇಖರ್ ಮಾತನಾಡಿ, ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ತಲುಪಿಸಬೇಕಿದೆ. ಉನ್ನತ ಶಿಕ್ಷಣದ ವಿವಿ ಗಳ ಮಟ್ಟದಲ್ಲಿ ದೇಶದ ಆರ್ಥಿಕತೆಗೆ ಅವರ ಕೊಡುಗೆ ಗಳನ್ನು ಪರಿಚಯಿಸಬೇಕು. ಅಂತಹ ಕೆಲಸಗಳು ನಮ್ಮಲ್ಲಿ ಕಡಿಮೆ ಆಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರಾಮುವಿ ಕುಲಸಚಿವ ಪ್ರೊ. ಬಿ. ರಮೇಶ್, ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಶಿವಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.