ಮಹಾಜನದಲ್ಲಿ `ಇಂಡಿಯಾ-ಜಪಾನ್ ಸ್ನೇಹ ದಿನ’

ಮೈಸೂರು,ಫೆ.2(ವೈಡಿಎಸ್)-ಸಂಪ್ರದಾಯ, ಸಂಸ್ಕೃತಿ, ಆಚರಣೆಯಲ್ಲಿ ಜಪಾನ್‍ಗಿಂತ ಭಾರತ ಮುಂದಿದೆ ಎಂದು ಟೋಕಿಯೋದ ಹಿರೊಯುಕಿ ಹಿಶಿದಾ ಅಭಿಪ್ರಾಯಪಟ್ಟರು.

ಜಯಲಕ್ಷ್ಮಿಪುರಂನ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ `ಇಂಡಿಯಾ-ಜಪಾನ್ ಸ್ನೇಹ ದಿನ’ ಆಚÀರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿಗಿಂತ ಭಾರತದ ಸಂಸ್ಕೃತಿ ಬಹಳ ಭಿನ್ನ. ಈ ಸುಂದÀರ ಕ್ಷಣಗಳನ್ನು ಭಾರತೀಯರೊಂದಿಗೆ ಸವಿಯುವುದೇ ನಮ್ಮ ಅದೃಷ್ಟ ಎಂದರು.

ಪ್ರಮೋದ್ ಮೂದಿ ಅವರು ಮಾತನಾಡಿ, ಭಾರತ ಮತ್ತು ಜಪಾನ್‍ನ ಬಹುತೇಕ ಕ್ಷೇತ್ರಗಳು ಒಂದೇ ರೀತಿ ಇವೆ. ಕೆಲವು ಕ್ಷೇತ್ರಗಳಷ್ಟೇ ಭಿನ್ನವಾಗಿವೆ. ಈ ವಿಭಿನ್ನ ಪ್ರಕಾರಗಳನ್ನು ಅರಿಯಲು ನೀವೆಲ್ಲರೂ ಜಪಾನ್‍ಗೆ ಭೇಟಿ ನೀಡಿ, ನಮ್ಮ ವ್ಯವಹಾರ ಕ್ಷೇತ್ರಗಳ ಕುರಿತು ತಿಳಿಯಬಹುದು ಎಂದು ಹೇಳಿದರು.

ಇದೇ ಸಂದರ್ಭ ಹಿರೋಶಿಮ-ನಾಗಸಾಕಿ ಅಣ್ವಸ್ತ್ರ ದುರಂತ ಸಾಕ್ಷ್ಯ್ಯಚಿತ್ರ ಪ್ರದರ್ಶಿ ಸಲಾಯಿತು. ಕಾಲೇಜಿನ ಗೌರವ ಕಾರ್ಯದರ್ಶಿ ಮುರಳೀಧರ್ ಭಾಗವತ್, ಪ್ರಾಂಶು ಪಾಲ ಎಸ್.ವೆಂಕಟರಾಮು, ಕಾರ್ಯನಿರ್ವಾಹಣಾಧಿಕಾರಿ ಎಸ್.ಆರ್.ರಮೇಶ್, ಇಂದ್ರಾಣಿ, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ ಉಪಸ್ಥಿತರಿದ್ದರು.