ವೈಜ್ಞಾನಿಕ ಸಂಶೋಧನಾ ಲೇಖನಗಳ ವಿಷಯದಲ್ಲಿ ಭಾರತಕ್ಕೆ 3ನೇ ಸ್ಥಾನ

ಮೈಸೂರು,ಮಾ.12(ಎಂಟಿವೈ)- ಹೊಸ ಹೊಸ ಕ್ರಿಯಾತ್ಮಕ ಆವಿಷ್ಕಾರಗಳೇ ಸಂಶೋ ಧನೆಗೆ ಮೂಲವಾಗಿರುವುದರಿಂದ ಭಾರತ ವೈಜ್ಞಾನಿಕ ಸಂಶೋಧನಾ ಲೇಖನಗಳ ವಿಷಯದಲ್ಲಿ 3ನೇ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದಲಿಂಗೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಸಂತ ಫಿಲೋಮಿನಾ ಕಾಲೇ ಜಿನ ಯುಜಿ ಸಭಾಂಗಣದಲ್ಲಿ ಕಾಲೇಜಿನ ಸಂಶೋಧಕರ ಕೇಂದ್ರ, ಸಮಾಜ ಕಾರ್ಯ ವಿಭಾಗ ಹಾಗೂ ಹೈದರಾಬಾದ್‍ನ ಎಲ್‍ಸಿ ವಿಆರ್ ರಿಸರ್ಚ್ ಇಂಟಲಿಜೆನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿರುವ `ಎಮ ರ್ಜಿಂಗ್ ಟ್ರೆಂಡ್ಸ್ ಇನ್ ರಿಸರ್ಚ್, ರೈಟಿಂಗ್ ಅಂಡ್ ಪಬ್ಲಿಷಿಂಗ್ ಸ್ಕಿಲ್’ ವಿಷಯ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿದ್ದ ರೆವ ರೆಂಡ್ ಫಾದರ್ ಲೆಸ್ಲಿ ಮೋರೆಸ್ ಮಾತ ನಾಡಿ, ಸಂಶೋಧನೆಗೆ ಮಾರ್ಗದರ್ಶಕರ ಕೊರತೆ ಕಾಡುತ್ತಿದೆ ಎಂದರು.

ಕಾಲೇಜಿನ ರೆಕ್ಟರ್ ರೆವರೆಂಡ್ ಫಾದರ್ ಬರ್ನಾಡ್ ಪ್ರಕಾಶ್ ಬಾರ್ನಿಶ್, ಆಡಳಿ ತಾಧಿಕಾರಿ ರೆವರೆಂಡ್ ಫಾದರ್ ರೊಕ್ಸನ್ ಥಾಮಸ್ ಬರೋಸ್, ಪಿಜಿ ಡೈರೆಕ್ಟರ್ ಪ್ರೊ.ಅರ್ತ್‍ಬರ್ಟ್ ಪಿಂಟೋ, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ನೂರ್ ಮುಬಾಷಿರ್ ಕಾರ್ಯಕ್ರಮದಲ್ಲಿದ್ದರು.