ಮುಂದಿನ 5 ವರ್ಷದಲ್ಲಿ ಭಾರತ ಮೂಲಭೂತ ಸೌಕರ್ಯಕ್ಕೆ 99 ಲಕ್ಷ ಕೋಟಿ ರೂ. ಖರ್ಚು

ವಾಷಿಂಗ್ಟನ್, ಅ.20- 2024ಕ್ಕೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್‍ಗೆ ಏರಿಕೆಯಾಗಬೇಕೆಂದು ಗುರಿ ಇಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಗುರಿ ಸಾಧಿ ಸಲು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ ಭಾರತ 1.4 ಟ್ರಿಲಿಯನ್ ಡಾಲರ್ (99 ಲಕ್ಷ ಕೋಟಿ ರೂ.) ನಷ್ಟು ಖರ್ಚು ಮಾಡಲು ಯೋಜನೆ ಹಾಕಿಕೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿನ್ನೆ ವಾಷಿಂಗ್ಟನ್‍ನಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತ ನಾಡಿದ ಅವರು, ಹಣಕಾಸು ಸಚಿವಾಲಯದಲ್ಲಿ ಕಾರ್ಯಪಡೆ ಯೊಂದನ್ನು ರಚಿಸಲಾಗಿದ್ದು ಮುಂದಿನ ಐದು ವರ್ಷಗಳಲ್ಲಿ ಆಗಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ನೀಲನಕ್ಷೆ ಯನ್ನು ತಯಾರಿಸಲಿದೆ ಎಂದು ಅವರು ತಿಳಿಸಿದರು.

2024-25ರ ಹೊತ್ತಿಗೆ ಭಾರತ ದೇಶದ ಆರ್ಥಿಕತೆ 5 ಟ್ರಿಲಿಯನ್ ಡಾಲರ್‍ನ ಗುರಿ ತಲುಪಬೇಕಾದರೆ ವಿಶ್ವ ದರ್ಜೆಯ ಮೂಲಭೂತ ಸೌಕರ್ಯ ನೀಡುವುದು ನಮ್ಮ ಆದ್ಯತೆಯಾಗಿದೆ. ಕಳೆದ 10 ವರ್ಷಗಳಲ್ಲಿ ನಾವು ಮೂಲಭೂತ ಸೌಕರ್ಯಗಳಿಗೆ 1.1 ಟ್ರಿಲಿಯನ್ ಡಾಲರ್‍ನಷ್ಟು ಖರ್ಚು ಮಾಡಿದ್ದರೆ ಇನ್ನು 5 ವರ್ಷಗಳಲ್ಲಿ 1.4 ಟ್ರಿಲಿಯನ್ ಡಾಲರ್‍ನಷ್ಟು ಹೂಡಿಕೆ ಮಾಡಲಿದ್ದೇವೆ ಎಂದರು. ಕ್ರಿಯಾತ್ಮಕ ಹಣಕಾಸು ಯೋಜನೆ ಗಳಾದ ಮೂಲಭೂತ ಸೌಕರ್ಯ ಸಾಲ ನಿಧಿ(ಐಡಿಎಫ್), ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್(ಆರ್‍ಇಐಟಿ), ಮೂಲ ಭೂತಸೌಕರ್ಯ ಹೂಡಿಕೆ ಟ್ರಸ್ಟ್(ಇನ್ವ್‍ಐಟಿ) ಮೊದಲಾದವು ಗಳನ್ನು ಆರಂಭಿಸಿದ್ದು ಮುನ್ಸಿಪಲ್ ಬಾಂಡ್‍ಗಳಿಗೆ ಚೌಕಟ್ಟು ರಚಿಸಲಿದೆ ಎಂದು ನುಡಿದರು. ದೇಶದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಗಳನ್ನು ಅಳವಡಿಸಲು ನಾವು ಈಗಾ ಗಲೇ ಮುಂದಾಗಿದ್ದೇವೆ. ಈಗಿರುವ ಮೂಲಭೂತ ಸೌಕರ್ಯ ಗಳನ್ನು ಆಧುನೀಕರಣಗೊಳಿಸಲು ಆಸ್ತಿ ಮರುಬಳಕೆ ಮಾದರಿ ಅಳವಡಿಸಿಕೊಳ್ಳುತ್ತಿದ್ದೇವೆ, ಈ ಮೂಲಕ ಸರ್ಕಾರದ ಹಣಕಾಸು ನೆರವನ್ನು ಖಾಸಗಿ ವಲಯದಲ್ಲಿ ಹೂಡಿಕೆ ಮಾಡಿ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ ನೋಡುತ್ತಿದ್ದೇವೆ ಎಂದು ಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.