ರಂಗಾಯಣದಲ್ಲಿ ಚಿಣ್ಣರೊಂದಿಗೆ ಅಂತಾರಾಷ್ಟ್ರೀಯ ಸರ್ಫಿಂಗ್ ಕ್ರೀಡಾಪಟು ತನ್ವಿ ಜಗದೀಶ್ ಸಂವಾದ

ಮೈಸೂರು: ಸರ್ಫಿಂಗ್ ಕ್ರೀಡೆಯಲ್ಲಿ ನಾನು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ನನ್ನ ತಾತ ಅವರೇ ಸ್ಫೂರ್ತಿ… ಇದು ಸ್ಟ್ಯಾಂಡ್ ಅಪ್ ಪ್ಯಾಡ್ಲಿಂಗ್ ಮತ್ತು ಸರ್ಫಿಂಗ್‍ನ ಅಂತಾರಾಷ್ಟ್ರೀಯ ಕ್ರೀಡಾಪಟು ತನ್ವಿ ಜಗದೀಶ್ ಮನದಾಳದ ಮಾತು.
ರಂಗಾಯಣದ ಚಿಣ್ಣರ ಮೇಳದಲ್ಲಿ ಶನಿವಾರ ಆಯೋಜಿಸಿದ್ದ ಚಿಣ್ಣರೊಂದಿಗೆ ಸಂವಾದದಲ್ಲಿ ಸ್ಟ್ಯಾಂಡ್‍ಅಪ್ ಪ್ಯಾಡ್ಲಿಂಗ್ ಮತ್ತು ಸರ್ಫಿಂಗ್‍ನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕøತೆ ತನ್ವಿ ಜಗದೀಶ್, ನಾನು ಸರ್ಫಿಂಗ್ ಕ್ರೀಡೆಗೆ ಪಾದಾರ್ಪಣೆ ಮಾಡಲು ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ನಮ್ಮ ತಾತನವರ ಪ್ರೋತ್ಸಾಹವೇ ಕಾರಣ ಎಂದು ಸ್ಮರಿಸಿದರು.

ಓರ್ವ ಹೆಣ್ಣು ಸರ್ಫಿಂಗ್ ಕ್ರೀಡೆಯಲ್ಲಿ ಗುರುತಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆರಂಭದಲ್ಲಿ ನನ್ನ ಪಯಣ ಕಠಿಣ ವಾಗಿತ್ತು. ಆದರೂ ನಾನು ಛಲಬಿಡದೆ ಮುನ್ನುಗ್ಗಿದೆ. ನನ್ನ ಕ್ರೀಡಾಸಕ್ತಿಗೆ ತಾತ ಮತ್ತು ಪೋಷಕರು ಪ್ರೋತ್ಸಾಹ ನೀಡಿ ದರು. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಇದುವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 6 ಚಿನ್ನದ ಪದಕ ಪಡೆದಿದ್ದೇನೆ. ರಾಜ್ಯ-ರಾಷ್ಟ್ರಮಟ್ಟದಲ್ಲೂ ಹಲವು ಪ್ರಶಸ್ತಿಗಳು ಲಭಿಸಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ: ಸಮುದ್ರ ನಮ್ಮ ತಾಯಿ ಇದ್ದಂತೆ. ಇಂದು ಈ ತೀರದಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ತ್ಯಾಜ್ಯ ಕಂಡುಬರುತ್ತಿದ್ದು, ಇದನ್ನು ತಪ್ಪಿಸಬೇಕು. ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಚಿಣ್ಣರ ಪ್ರಶ್ನೆಗಳು: ಅಚ್ಚುತಾ-ಕಶ್ಯಪ್-ಶ್ರೀಲಕ್ಷ್ಮಿ-ಕೌಸ್ತುಭ-ಲಿಖಿತ್-ಸಮನ್ವಿತಾ ಎಂಬ ಚಿಣ್ಣರು, `ಸರ್ಫಿಂಗ್ ಕ್ರೀಡೆಗೆ ಮಾರ್ಗದರ್ಶಕರ್ಯಾರು?. ಈ ಕ್ರೀಡೆಯನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣವೇನು?. ನಿತ್ಯ ಎಷ್ಟು ಗಂಟೆ ಕ್ರೀಡಾಭ್ಯಾಸ ಮಾಡು ತ್ತೀರಿ?. ಕ್ರೀಡೆ ಜತೆಗೆ ವಿದ್ಯಾಭ್ಯಾಸವನ್ನು ಹೇಗೆ ನಿಭಾಯಿಸಿದಿರಿ?. ಕ್ರೀಡಾಭ್ಯಾಸಕ್ಕೆ ಯಾವ ಕಾಲಮಾನ ಸೂಕ್ತ? ಎಂಬಿತ್ಯಾದಿ ಪ್ರಶ್ನೆಗಳ ಸುರಿಮಳೆಗೈದರು.

ಇದಕ್ಕೆ ತನ್ವಿ ಜಗದೀಶ್ ಪ್ರತಿಕ್ರಿಯಿಸಿ, ಮೈಸೂರಿನ ಶಮಂತ್‍ಕುಮಾರ್ ಎಂಬು ವರು ನನಗೆ ಮಾರ್ಗದರ್ಶಕರಾಗಿದ್ದು, ಕ್ರೀಡೆ ಆಯ್ಕೆಗೆ ನನ್ನ ತಾತ ಅವರೇ ಸ್ಫೂರ್ತಿ. ನೀರಿನಲ್ಲಿ ಆಟ ಆಡುವುದೆಂದರೆ ನನಗೆ ಇಷ್ಟ. ಆರಂಭದಲ್ಲಿ ಪ್ರತಿದಿನ 2-3 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಈಗ ಬೆಳಿಗ್ಗೆ-ಸಂಜೆ ತಲಾ 4 ಗಂಟೆ ಅಂದರೆ ದಿನಕ್ಕೆ 8 ಗಂಟೆ ಅಭ್ಯಾಸ ಮಾಡುತ್ತಿದ್ದೇನೆ. ಕ್ರೀಡೆ ಮತ್ತು ವ್ಯಾಸಂಗ ಎರಡನ್ನೂ ಯಶಸ್ವಿ ಯಾಗಿ ಪೂರೈಸಲು ಪೋಷಕರು, ಶಿಕ್ಷಕರು ಸಹಕಾರ ನೀಡಿದರು. ಅವರಿಗೆ ಋಣಿ ಯಾಗಿದ್ದೇನೆ ಎಂದು ಹೇಳಿದರು.

ನಂತರ ವಿದ್ಯಾರ್ಥಿನಿ ಲಾಸ್ಯಾ ಅವರ `ಸರ್ಫಿಂಗ್ ಕ್ರೀಡೆ ಸಂದರ್ಭ ತೊಂದರೆಗೆ ಸಿಲುಕಿಕೊಂಡ ಘಟನೆ ನಡೆದಿದೆಯೇ? ಎಂಬ ಪ್ರಶ್ನೆಗೆ ತನ್ವಿ ಪ್ರತಿಕ್ರಿಯಿಸಿ, ಹೌದು! ಚೆನ್ನೈನಲ್ಲಿ ಸರ್ಫಿಂಗ್ ಅಭ್ಯಾಸ ಮಾಡು ವಾಗ ಸುನಾಮಿ ಆಗಿತ್ತು. ಈ ವೇಳೆ ದೊಡ್ಡ ಅಲೆಯೊಂದು ಬಂದು ನನ್ನನ್ನು ಬೀಳಿಸಿತ್ತು. ಆಗ ನನ್ನ ಶ್ವಾಸಕೋಶದಲ್ಲಿ ನೀರು ಸೇರಿ ಕೊಂಡು ತೊಂದರೆ ಅನುಭವಿಸಿದ್ದೆ ಎಂದರು. ರಂಗಾಯಣ ನಿರ್ದೇಶಕಿ ಬಾಗೀರಥಿ ಬಾಯಿ ಕದಂ ಮತ್ತಿತರರು ಉಪಸ್ಥಿತರಿದ್ದರು.