ಆ.25ರಿಂದ 27ರವರೆಗೆ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಟ್ರಾವೆಲ್ ಎಕ್ಸ್‍ಪೋ

ಮೈಸೂರು, ಜು.24 (ಆರ್‍ಕೆ)- ಆಗಸ್ಟ್ 25ರಿಂದ 27ರವರೆಗೆ ಬೆಂಗಳೂ ರಿನ ದಿ ಲಲಿತ ಅಶೋಕ ಹೋಟೆಲಿನಲ್ಲಿ ಕರ್ನಾಟಕ ಇಂಟರ್‍ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ-2019(ಏIಖಿಂ) ಏರ್ಪಡಿ ಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ತಿಳಿಸಿದ್ದಾರೆ.

ಎಕ್ಸ್‍ಪೋ ಹಿನ್ನೆಲೆಯಲ್ಲಿ ಮೈಸೂರಿನ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಪೂರ್ವಭಾವಿ `ಕನೆಕ್ಟ್’ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಏSಖಿಆಅ) ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ(ಏಖಿS) ಸಂಯುಕ್ತಾಶ್ರಯದಲ್ಲಿ 3 ದಿನಗಳ ವಸ್ತು ಪ್ರದರ್ಶನದಲ್ಲಿ 200 ಮಂದಿ ವಿದೇಶಿ ಹಾಗೂ 300 ಮಂದಿ ದೇಶದ ವಿವಿಧ ರಾಜ್ಯಗಳ ಖರೀದಿದಾ ರರು ಬರಲಿದ್ದು, ರಾಜ್ಯದ ಪ್ರವಾಸೋ ದ್ಯಮದಲ್ಲಿ ಭಾಗಿಗಳಾಗಿರುವ ಟ್ರಾವೆಲ್ ಆಪರೇಟರ್‍ಗಳು, ಹೋಟೆಲ್ ಮಾಲೀ ಕರು, ಹೋಂ ಸ್ಟೇ ನಡೆಸುವವರಿಗೆ ಅನು ಕೂಲವಾಗಲಿದೆ ಎಂದು ತಿಳಿಸಿದರು.

ದೇಶ ಹಾಗೂ ವಿದೇಶಗಳಲ್ಲಿ ಈಗಾ ಗಲೇ ರೋಡ್ ಶೋಗಳನ್ನು ನಡೆಸಿ ಎಕ್ಸ್ ಪೋದಲ್ಲಿ ಭಾಗವಹಿಸುವಂತೆ ಪ್ರಚಾರ ನಡೆಸಲಾಗಿದೆ. ಕೊಳ್ಳುವವರು-ಮಾರು ವವರಿಗೆ ಈ ಎಕ್ಸ್‍ಪೋ ಉತ್ತಮ ವೇದಿಕೆ ಯಾಗಲಿದೆ. 2 ವರ್ಷಕ್ಕೊಮ್ಮೆ ಟ್ರಾವೆಲ್ ಎಕ್ಸ್‍ಪೋ ನಡೆಸಲು ಉದ್ದೇಶಿಸಲಾಗಿದ್ದು, ಟ್ರಾವೆಲ್ ಏಜೆಂಟರು, ಪ್ರವಾಸಿ ಮಾರ್ಗ ದರ್ಶಿಗಳು, ಹೋಟೆಲ್ ಮಾಲೀಕರು, ಹೋಂ ಸ್ಟೇ ಮಾಲೀಕರುಗಳು ಭಾಗ ವಹಿಸಿ ಸದುಪಯೋಗಪಡಿಸಿಕೊಳ್ಳುವಂತೆ ಅವರು ನುಡಿದರು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇ ಶಕ ಕುಮಾರ ಪುಷ್ಕರ್, ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್. ಮಂಜುನಾಥ್, ಮೃಗಾಲಯ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಕುಲ ಕರ್ಣಿ, ಕರ್ನಾಟಕ ಟೂರಿಸಂ ಸೊಸೈಟಿ ಅಧ್ಯಕ್ಷ ಅಯ್ಯಪ್ಪ, ಜಂಟಿ ಕಾರ್ಯದರ್ಶಿ ರವೀಂದ್ರ, ಜಂಗಲ್ ಲಾಡ್ಜಸ್ ಅಂಡ್ ರೆಸಾಟ್ರ್ಸ್ ವ್ಯವಸ್ಥಾಪಕ ನಿರ್ದೇಶಕ ವಿಜಯ ಶರ್ಮ ಹಾಗೂ ಪ್ರವಾಸೋದ್ಯಮ ಇಲಾಖೆ ಮೈಸೂರು ಜಿಲ್ಲಾ ಸಹಾಯಕ ನಿರ್ದೇಶಕ ಹೆಚ್.ಜನಾರ್ಧನ ಅವರು ಕನೆಕ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು. ಮೈಸೂರು ಹೋಟೆಲ್ ಮಾಲೀ ಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ಮೈಸೂರು ಟ್ರಾವೆಲ್ಸ್ ಅಸೋ ಸಿಯೇಷನ್ ಗೌರವಾಧ್ಯಕ್ಷ ಬಿ.ಎಸ್. ಪ್ರಶಾಂತ್, ಮೈಸೂರು ಟ್ರಾವೆಲ್ ಮಾರ್ಟ್ ಗೌರವ ಅಧ್ಯಕ್ಷ ಸಿ.ಎ.ಜಯಕುಮಾರ್ ಸೇರಿದಂತೆ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳ ಹಲವು ಪ್ರವಾ ಸೋದ್ಯಮ ಕ್ಷೇತ್ರದ 50 ಮಂದಿ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಎಕ್ಸ್‍ಪೋ ಕುರಿತಂತೆ ತಮ್ಮ ಸಲಹೆ ಅಭಿಪ್ರಾಯ, ಮಾರ್ಗದರ್ಶನಗಳನ್ನು ನೀಡಿದರು.

ಟ್ರಾವೆಲ್ ಎಕ್ಸ್‍ಪೋದಲ್ಲಿ ಭಾಗವಹಿಸ ಲಿಚ್ಛಿಸುವವರಿಗೆ ಬುಧವಾರ `ಕನೆಕ್ಟ್’ ಕಾರ್ಯಕ್ರಮದಲ್ಲಿ ಅರ್ಜಿ ನಮೂನೆ ಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ವಿತರಿಸಲಾಯಿತು.

ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ಟೇಕ್ ಹೋಲ್ಡರ್‍ಗಳ ಸಲಹೆ
ಮೈಸೂರು, ಜು.24(ಆರ್‍ಕೆ)- ಬೆಂಗ ಳೂರಿನಲ್ಲಿ ನಡೆಯಲಿರುವ ಕರ್ನಾಟಕ ಇಂಟರ್‍ನ್ಯಾಷನಲ್ ಟ್ರಾವೆಲ್ ಎಕ್ಸ್‍ಪೋ ಪೂರ್ವಭಾವಿಯಾಗಿ ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಹೋಟೆಲಿನಲ್ಲಿ ನಡೆದ ಕನೆಕ್ಟ್ ಕಾರ್ಯಕ್ರಮದಲ್ಲಿ ಪ್ರವಾಸೋದ್ಯ ಮದಲ್ಲಿ ಭಾಗಿಗಳಾಗಿರುವ ಸ್ಟೇಕ್ ಹೋಲ್ಡರ್ ಗಳು ಸಲಹೆಗಳನ್ನು ನೀಡಿದ್ದಾರೆ.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಸಾಂಪ್ರ ದಾಯಿಕ ಜಟಕಾಗಳನ್ನು ಓಡಿಸಲು ಅವ ಕಾಶ ನೀಡಿದಲ್ಲಿ ಪ್ರವಾಸಿಗರು ಟಾಂಗಾ ಪಯಣದ ವಿಶಿಷ್ಟ ಅನುಭವ ಪಡೆಯುವ ರಲ್ಲದೇ, ಹಲವರಿಗೆ ಜೀವನಾಧಾರವಾಗ ಲಿದೆ ಎಂದು ಚಂದನ್ ಅಭಿಪ್ರಾಯಪಟ್ಟರು.

ಒಂದೇ ಟಿಕೆಟ್ ಪಡೆದು ಹಲವು ಪ್ರವಾಸಿ ಕೇಂದ್ರಗಳಿಗೆ ಪ್ರವೇಶಾವಕಾಶ ದೊರೆಯುವಂತೆ ಮಾಡಿದಲ್ಲಿ ಪ್ರವಾಸಿ ಗರು ಅರಮನೆ, ಮೃಗಾಲಯ, ಕಾರಂಜಿ ಕೆರೆಯಂತಹ ಹಲವು ತಾಣಗಳಲ್ಲಿ ಟಿಕೆಟ್ ಗಾಗಿ ಸಾಲುಗಟ್ಟಿ ನಿಂತು ಸಮಯ ವ್ಯರ್ಥ ವಾಗುವುದು ತಪ್ಪುತ್ತದೆ ಎಂದು ಬಿ.ಎಸ್. ಪ್ರಶಾಂತ್ ಅಭಿಪ್ರಾಯಪಟ್ಟರು.

ವಿದೇಶಿಯರಿಗೆ ಹೆಚ್ಚುವರಿ ಪ್ರವೇಶ ದರ ನಿಗದಿಪಡಿಸಿರುವುದು ಹಾಗೂ ಹೊರ ರಾಜ್ಯಗಳಿಂದ ಬರುವ ಪ್ರವಾಸಿ ವಾಹನ ಗಳ ಎಂಟ್ರಿ ಟ್ಯಾಕ್ಸ್ ಹೆಚ್ಚಿಸಿರುವುದರಿಂದ ಮೈಸೂರು ಮತ್ತು ರಾಜ್ಯದ ಪ್ರವಾಸೋ ದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮೈಸೂರು ಟ್ರಾವೆಲ್ ಮಾರ್ಟ್ ಅಧ್ಯಕ್ಷ ಸಿ.ಎ.ಜಯ ಕುಮಾರ್ ತಿಳಿಸಿದರು.

ಪ್ರವಾಸಿ ಕೇಂದ್ರಗಳಲ್ಲಿ ವಾಹನ ನಿಲು ಗಡೆಗೆ ಹೆಚ್ಚು ಹಣ ವಸೂಲಿ ಮಾಡುವ ಮೂಲಕ ಒಂದು ದೊಡ್ಡ ಮಾಫಿಯಾ ನಡೆಯುತ್ತಿದೆ ಎಂದು ಪ್ರಸಾದ್ ಹೇಳಿ ದರೆ, ಪ್ರವಾಸಿಗರು ವಾಸ್ತವ್ಯ ಹೂಡುವ ಹೋಟೆಲ್‍ಗಳಲ್ಲೇ ಪ್ರವಾಸಿ ತಾಣಗಳ ಪ್ರವೇಶ ಟಿಕೆಟ್‍ಗಳನ್ನು ಕೊಟ್ಟರೆ ಅನು ಕೂಲವಾಗುತ್ತದೆ ಎಂದು ಸುಬ್ರಹ್ಮಣ್ಯ ತಂತ್ರಿ ಅಭಿಪ್ರಾಯಪಟ್ಟರು.

ಮೈಸೂರು ಮೃಗಾಲಯ, ಅರಮನೆ, ಚಾಮುಂಡಿಬೆಟ್ಟ, ಕಾರಂಜಿಕೆರೆಗಳಂತಹ ಪ್ರವಾಸಿ ತಾಣಗಳಲ್ಲಿ ಏಕರೂಪದ ಪ್ರವೇಶ ದರ ನಿಗದಿಗೊಳಿಸಬೇಕು ಹಾಗೂ ಪ್ರತೀ ವರ್ಷ ದರ ಹೆಚ್ಚಿಸುವುದನ್ನು ತಡೆಯಬೇಕು ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾ ಯಣಗೌಡ ಸಲಹೆ ನೀಡಿದರು.

ಅರಮನೆಯಲ್ಲಿ ವಾರಾಂತ್ಯದ ಎರಡು ದಿನ (ಶನಿವಾರ ಮತ್ತು ಭಾನುವಾರ) ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸ ಬೇಕು, ಟೌನ್‍ಹಾಲ್‍ನಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿದಲ್ಲಿ ಪ್ರವಾಸಿಗರನ್ನು 2 ದಿನದ ಮಟ್ಟಿಗಾದರೂ ನಗರದಲ್ಲಿ ಉಳಿಯು ವಂತೆ ಮಾಡಬಹುದು ಎಂದು ರವಿ ಇದೇ ಸಂದರ್ಭ ಅಭಿಪ್ರಾಯಪಟ್ಟರು.

ಎಲ್ಲರ ಸಲಹೆಗಳನ್ನು ಆಲಿಸಿದ ಪ್ರವಾ ಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್, ಇಲಾಖೆಯು ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸುತ್ತಿದೆ ಎಂದರು.