`ವಿಕ್ರಮ್’ ಲ್ಯಾಂಡರ್ ಪತ್ತೆ ಹಚ್ಚಿದ ಇಸ್ರೋ

ಬೆಂಗಳೂರು,ಸೆ.8-ಭಾರತದ ಮಹತ್ವದ ಯೋಜನೆ ಯಾಗಿದ್ದ ಚಂದ್ರಯಾನ-2 ಕೊನೆಯ ಹಂತದಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. ಇದೀಗ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚುವಲ್ಲಿ ಇಸ್ರೋ ಯಶಸ್ವಿಯಾಗಿದೆ.

ಚಂದಿರನಲ್ಲಿ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್‍ನ ಚಿತ್ರಗಳು ಇಸ್ರೋಗೆ ಲಭ್ಯವಾಗಿವೆ. ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ವಿಕ್ರಮ್ ಲ್ಯಾಂಡರ್‍ನ ಛಾಯಾ ಚಿತ್ರಗಳನ್ನು ಬೆಂಗಳೂರಿನ ಇಸ್ರೋ ನಿಯಂತ್ರಣ ಕೊಠ ಡಿಗೆ ರವಾನಿಸಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಿರೋದು ಪತ್ತೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ. ಸದ್ಯ ಆರ್ಬಿಟರ್ ಸೆರೆ ಹಿಡಿದಿರುವ ವಿಕ್ರಮ್ ಲ್ಯಾಂಡರ್‍ನ ಫೆÇೀಟೋಗಳು ಹಾಗೂ ಮಾಹಿತಿ ಯನ್ನು ಪರಿಶೀಲನೆ ನಡೆಸುತ್ತೇವೆ. ಆದಷ್ಟು ಬೇಗ ವಿಕ್ರಮ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲಾಗು ವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಚಂದ್ರಕಕ್ಷೆಯಲ್ಲಿ ಇರುವ ಆರ್ಬಿಟರ್ ಕಾರ್ಯಾವಧಿ ಏಳೂವರೆ ವರ್ಷಗಳಾಗಿದ್ದು, ಅಲ್ಲಿಯವ ರೆಗೂ ತನ್ನ ನಿಗದಿತ ಕಾರ್ಯವನ್ನು ಸಮರ್ಥವಾಗಿ ನಿಭಾ ಯಿಸಲು ಅದು ಸಾಕಷ್ಟು ಇಂಧನವನ್ನು ಹೊಂದಿದೆ ಎಂದು ಶಿವನ್ ತಿಳಿಸಿದರು. ಚಂದ್ರಯಾನ-2 ಯೋಜ ನೆಯು ಶೇ.100ರಷ್ಟು ಯಶಸ್ವಿಯಾಗಿದೆ. ಸಾಫ್ಟ್ ಲ್ಯಾಂಡಿಂಗ್ ವೇಳೆ ಲ್ಯಾಂಡರ್ ಜೊತೆ ಸಂಪರ್ಕ ಕಡಿತಗೊಂಡಿದೆ. ಮುಂದಿನ 14 ದಿನಗಳಲ್ಲಿ ಲ್ಯಾಂಡರï ಮರು ಸಂಪರ್ಕ ಸಾಧಿಸಲು ಯತ್ನಿಸುತ್ತೇವೆ. ಇನ್ನು ಮೂರು ದಿನಗಳಲ್ಲಿ ಅದು ಪತ್ತೆಯಾಗಿ ನಮ್ಮ ಸಂಪರ್ಕಕ್ಕೆ ಬರುವ ಸಾಧ್ಯತೆ ಇದೆ ಎಂದು ಕೆ.ಶಿವನ್ ದೂರದರ್ಶನಕ್ಕೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಚಂದ್ರನ ಕಕ್ಷೆಯಲ್ಲಿ ನಿಗದಿತವಾಗಿ ಕಾರ್ಯ ನಿರ್ವಹಿ ಸುತ್ತಿರುವ ಕಕ್ಷಾಗಾರ (ಆರ್ಬಿಟರ್) ಅತ್ಯಂತ ಸುರಕ್ಷಿತ ಮತ್ತು ಆರೋಗ್ಯಕರವಾಗಿದೆ. ಇದರಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಮಾಧ್ಯಮಗಳಲ್ಲಿ ಇದರ ಕಾರ್ಯಾ ವಧಿ ಒಂದು ವರ್ಷ ಎಂದು ತಿಳಿಸಲಾಗಿದೆ. ಆದರೆ ಇದು ತಪ್ಪು. ಆರ್ಬಿಟರ್ ಚಂದ್ರ ಕಕ್ಷೆಯಲ್ಲಿ ಏಳೂವರೆ ವರ್ಷ ಗಳ ಕಾಲ ನಿಖರವಾಗಿ ಕಾರ್ಯ
ನಿರ್ವಹಿಸುತ್ತದೆ. ಅಲ್ಲದೆ, ಇಷ್ಟು ದೀರ್ಘಾವಧಿಗೆ ಅಗತ್ಯವಾಗಿರುವ ಪರಿಶುದ್ಧ ಇಂಧನ ಅದರಲ್ಲಿದೆ ಎಂದರು. ಈ ಆರ್ಬಿಟರ್‍ನಲ್ಲಿ ಡ್ಯುಯಲ್ ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೇಡಾರ್ (ಸಾರ್)ಎಂಬ ಅತ್ಯಾಧುನಿಕ ಸಾಧನವನ್ನು ಅಳವಡಿಸಲಿದ್ದು, ಇದು ಚಂದ್ರನ ಧೃವ ಪ್ರದೇಶದ ಉಪ ಮೇಲ್ಮೈ ಮೇಲೆ 10 ಮೀಟರ್‍ಗಳವರೆಗೂ ನುಸುಳಿ ಅಲ್ಲಿನ ವಿದ್ಯಮಾನಗಳ ಬಗ್ಗೆ ಅಂದರೆ ನೀರು, ಹಿಮ, ಮಣ್ಣು ಇತ್ಯಾದಿ ಸಂಗತಿಗಳ ಬಗ್ಗೆ ನಿಖರ ಮಾಹಿತಿಯನ್ನು ರವಾನಿಸಲಿದೆ. ಆರ್ಬಿಟರ್ ನಮ್ಮ ನಿರೀಕ್ಷೆಯಂತೆ ಅತ್ಯಂತ ಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷರು ವಿವರಿಸಿದರು. ಮೊದಲ ಹಂತದ ಕಾರ್ಯಾಚರಣೆ ಎಲ್ಲವೂ ನಿರೀಕ್ಷೆಯಂತೆ ನಡೆಯಿತು. ಆದರೆ, ಕೊನೆಯ ಹಂತದ ಕಾರ್ಯಾಚರಣೆ ವೇಳೆ ನಾವು ಸಂವಹನ ಕಳೆದುಕೊಂಡೆವು ಎಂದು ಅವರು ವಿವರಿಸಿದರು.

ಇಸ್ರೋದ ಬಾಹ್ಯಾಕಾಶ ವಿಜ್ಞಾನದ ಸಾಮರ್ಥ್ಯವನ್ನು ಆರ್ಬಿಟರ್ ಮೂಲಕ ಸಾಬೀತು ಮಾಡಲಾಗಿದೆ. ಆರ್ಬಿಟರ್ ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿದೆ. ಆದರೆ, ತಂತ್ರಜ್ಞಾನದ ಪ್ರದರ್ಶನವಾಗಿದ್ದ ವಿಕ್ರಮ್ ಲ್ಯಾಂಡರ್‍ನಲ್ಲಿ ಅತ್ಯಲ್ಪ ಹಿನ್ನಡೆಯಾಗಿದೆ. ಆದಾಗ್ಯೂ ನಮಗೆ ನಿರಾಶೆಯಾಗಿದ್ದರೂ ಇನ್ನೂ 14 ದಿನಗಳ ಕಾಲ ನಮ್ಮ ಆಸೆ ಜೀವಂತವಾಗಿದೆ. ಈ ಅವಧಿಯಲ್ಲಿ ಅದರೊಂದಿಗೆ ಸಂಪರ್ಕ ಸಾಧಿಸಲು ಹಗಲು-ರಾತ್ರಿ ನಿರಂತರ ಪ್ರಯತ್ನ ನಡೆಯಲಿದೆ ಎಂದು ಶಿವನ್ ಹೇಳಿದ್ದಾರೆ.

ಸಾಫ್ಟ್ ಲ್ಯಾಂಡಿಂಗ್ ಬಿಟ್ಟರೆ ಎಲ್ಲವನ್ನೂ ಸಾಧಿಸಿದ್ದೇವೆ, ಚಂದ್ರಯಾನ-3 ಅಗತ್ಯವಿಲ್ಲ ಖ್ಯಾತ ವಿಜ್ಞಾನಿ ನಂಬಿ ನಾರಾಯಣ್
ನವದೆಹಲಿ: ಬಹು ಮಹತ್ವಾಕಾಂಕ್ಷೆಯ ಚಂದ್ರಯಾನ-2 ಕಾರ್ಯಾಚರಣೆ ಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಬಿಟ್ಟರೆ ಎಲ್ಲವನ್ನೂ ಸಾಧಿಸಿ ದ್ದೇವೆ, ಚಂದ್ರಯಾನ-3 ಅಗತ್ಯವಿಲ್ಲ ಎಂದು ಭಾರತದ ಖ್ಯಾತ ವಿಜ್ಞಾನಿ ನಂಬಿ ನಾರಾಯಣ್ ಅವರು ಹೇಳಿದ್ದಾರೆ.

ಚಂದ್ರಯಾನ-2 ಹಿನ್ನಡೆ ಕುರಿತಂತೆ ಪ್ರತಿಕ್ರಿಯೆ ನೀಡಿ ರುವ ಖ್ಯಾತ ವಿಜ್ಞಾನಿ ನಂಬಿ ನಾರಾಯಣ್ ಅವರು, ಚಂದ್ರಯಾನ-2 ಮಿಷನ್‍ನನ್ನು ಹಲವು ಆಯಾಮ ಗಳಿಂದ ನೋಡಬೇಕಾಗುತ್ತದೆ. ಲ್ಯಾಂಡರ್ ಜೊತೆಗಿನ ಸಂಪರ್ಕ ಕಡಿತಕ್ಕೆ ಸಾಫ್ಟ್‍ವೇರ್ ಕೂಡ ಕಾರಣವಾಗಿರ ಬಹುದು. ಒಂದು ವೇಳೆ ಅದೇ ನಿಜವಾಗಿದ್ದರೆ, ಅದು ಹೇಗಾಯಿತು? ಎಂಬುದನ್ನು ಆಲೋಚಿಸಬೇಕು. ಸೆನ್ಸಾರ್‍ಗಳು ಕಂಪ್ಯೂಟರ್ ಪೆÇ್ರೀಗ್ರಾಮ್‍ಗಳನ್ನು ಹೊಂದಿರುತ್ತದೆ. ಆಟೋಮೆಟಿಕ್ ಲ್ಯಾಂಡಿಂಗ್ ಅನುಕ್ರಮಗಳನ್ನು ಇಲ್ಲಿ ಬಳಸಲಾಗಿರುತ್ತದೆ. ಶೇಕಡಾ ವಾರುಗಳಲ್ಲಿ ಕಾರ್ಯಾಚರಣೆಯ ಯಶಸ್ಸನ್ನು ನಾವು ಅಳೆಯಲು ಸಾಧ್ಯವಾಗುವುದಿಲ್ಲ. ಚಂದ್ರಯಾನ-1ರಲ್ಲಿ ಯಾವುದೇ ರೀತಿಯ ಸಾಫ್ಟ್ ಲ್ಯಾಂಡಿಂಗ್ ಇರಲಿಲ್ಲ. ಆದರೆ, ಈ ಬಾರಿ ಸಾಫ್ಟ್ ಲ್ಯಾಂಡಿಂಗ್ ಇತ್ತು. ಹೀಗಾಗಿಯೇ ಇದು ಅತ್ಯಂತ ನಿರ್ಣಾಯಕ ಕಾರ್ಯಾಚರಣೆಯಾಗಿತ್ತು. ಇದೀಗ ಸಾಫ್ಟ್ ಲ್ಯಾಂಡಿಂಗ್ ಆಗದ ಕಾರಣ ರೋವರ್ ಕಾರ್ಯಾಚರಣೆ ಹಾಗೂ ಅದರ ಉಳಿವಿನ ಬಗ್ಗೆ ನಮಗೂ ತಿಳಿಯುವುದಿಲ್ಲ. ಹಾಗೆಂದ ಮಾತ್ರಕ್ಕೆ ಇಡೀ ಕಾರ್ಯಾಚರಣೆಯೇ ವಿಫಲವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಸಾಫ್ಟ್ ಲ್ಯಾಂಡಿಂಗ್ ಬಿಟ್ಟರೆ ಎಲ್ಲವನ್ನೂ ಸಾಧಿಸಿದ್ದೇವೆ.

ಚಂದ್ರನ ಅಂಗಳದಲ್ಲಿ ಈಗಲೂ ಆರ್ಬಿಟರ್ ಇದೆ. ಇತರೆ ಕಾರ್ಯಾಚರಣೆಗಳು ಈಗಲೂ ಚಂದ್ರನ ಅಂಗಳದಲ್ಲಿ ನಡೆಯುತ್ತಿವೆ. ಚಂದ್ರಯಾನ-3 ಅಗತ್ಯವಿಲ್ಲ. ಪ್ರತೀ ಚಂದ್ರ ಯಾನಕ್ಕೂ ಅತೀ ಹೆಚ್ಚು ಹಣವನ್ನು ವ್ಯಯ ಮಾಡಬೇಕಾಗುತ್ತದೆ. ಮತ್ತೊಂದು ಕಾರ್ಯಾ ಚರಣೆ ಆರಂಭ ಮಾಡುವುದಕ್ಕೂ ಮುನ್ನ ನಾವು ಚಂದ್ರಯಾನ-2ರಲ್ಲಿ ಸಾಫ್ಟ್ ಲ್ಯಾಂಡಿಂಗ್ ಏಕೆ ಆಗಲಿಲ್ಲ ಎಂಬುದನ್ನು ಮೊದಲು ಕಂಡು ಹಿಡಿಯಬೇಕು ಎಂದು ತಿಳಿಸಿದ್ದಾರೆ.