ವಿದ್ಯಾರ್ಥಿಗಳು ಕೌಶಲಾಭಿವೃದ್ಧಿಯತ್ತ ಆಸಕ್ತಿ ವಹಿಸುವುದು ಅನಿವಾರ್ಯ

ಮೈಸೂರು,ಜು.1- ವಿದ್ಯಾರ್ಥಿಗಳು ಸಾಂಪ್ರದಾಯಿಕ ಶಿಕ್ಷಣದ ಜತೆಗೆ ಕೌಶಲಾಭಿವೃದ್ಧಿಯತ್ತ ಹೆಚ್ಚು ಆಸಕ್ತಿ ವಹಿಸುವುದು ಉದ್ಯೋಗದ ದೃಷ್ಟಿಯಿಂದ ಬಹಳ ಅನಿ ವಾರ್ಯ ಎಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು.

ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಹ ಯೋಗದಲ್ಲಿ ಒಂಟಿಕೊಪ್ಪಲು ಸರ್ಕಾರಿ ಪ್ರೌಢಶಾಲೆ ಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ದಲ್ಲಿ 10 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು. ಪ್ರತಿಭೆ ಎನ್ನುವುದು ಪ್ರತಿಯೊಬ್ಬ ರಲ್ಲೂ ಹುಟ್ಟಿದೊಡನೆ ಸ್ವಾಭಾವಿಕವಾಗಿ ಬಂದಿರುತ್ತದೆ. ಅದನ್ನು ವಿಕಸನಗೊಳಿಸಿಕೊಂಡು ಅರಿವಿನ ಬೆಳಕನ್ನು ತುಂಬಿಕೊಳ್ಳುವುದೇ ಶಿಕ್ಷಣ ಎಂದರು.

ಪ್ರಸ್ತುತ ನಮ್ಮ ಸಮಾಜದ ವ್ಯವಸ್ಥೆಯಲ್ಲಿ ಕೇವಲ ಶಿಕ್ಷಣವೊಂದನ್ನು ಪಡೆದರೆ ಸಾಲದು. ಇದರ ಜತಗೆ ವಿವಿಧ ರೀತಿಯ ಕೌಶಲಗಳನ್ನು ಕಲಿಯುವ ಅವಶ್ಯ ವಿದೆ. ಇಂದು ಕೌಶಲ ಇಲ್ಲದೇ ಉದ್ಯೋಗ ಪಡೆಯು ವುದು ಬಹಳ ಕಷ್ಟ. ಆದ್ದರಿಂದ ವಿದ್ಯಾರ್ಥಿಗಳು ಸರ್ಕಾರ, ಖಾಸಗಿ ಸಂಸ್ಥೆಗಳು ನೀಡುವ ಕೌಶಲ ತರಬೇತಿ ಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಯಾವತ್ತೂ ಕೀಳರಿಮೆ ಒಳಗಾಗ ಬಾರದು. ಬಹುತೇಕ ಸಾಧಕರು ಓದಿದ್ದು, ಸರ್ಕಾರಿ ಶಾಲೆಗಳಲ್ಲಿಯೇ ಎಂದ ಅವರು, ವಿದ್ಯಾರ್ಥಿಗಳು ಗ್ರಹಣ, ಧಾರಣೆ ಮತ್ತು ಸ್ಮರಣೆ ಮೂರು ವಿಚಾರ ಗಳನ್ನು ತಿಳಿದುಕೊಳ್ಳಬೇಕು ಎಂದರು.

ಒಂಟಿಕೊಪ್ಪಲು ಸರ್ಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯ ಶಿಕ್ಷಕಿ ಎಂ.ಬಿ.ಪದ್ಮಜಾ ಅಧ್ಯಕ್ಷತೆ ವಹಿಸಿದ್ದರು. ಮಂಚೇಗೌಡನಕೊಪ್ಪಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಕೆ.ಎನ್.ಕಲ್ಪನಾ, ಇಂಡಿಯನ್ ಬ್ಯಾಂಕ್ ವಿಶ್ರಾಂತ ವ್ಯವಸ್ಥಾಪಕ ವಿಜಯಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ವಿಜಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷೆ ಎಂ.ಕೆ. ಕಾವೇರಿಯಮ್ಮ, ವಿಶ್ರಾಂತ ಶಿಕ್ಷಕ ವೆಂಕಟನಾರಾಯಣ, ಓರಿಗಾಮಿ ಕಲಾವಿದ ಮುರಳೀಧರ, ಶಿಕ್ಷಕರಾದ ಮಹದೇವಪ್ಪ, ಬಸವರಾಜು, ಸುಮಿತ್ರ, ಭಾರತಿ ಎಸ್.ಶಾಸ್ತ್ರಿ ಮುಂತಾದವರು ಭಾಗವಹಿಸಿದ್ದರು.

ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು: ವಿನಾಯಕ ನಗರ ಸರ್ಕಾರಿ ಪ್ರೌಢಶಾಲೆಯ ಕೆ.ರತ್ನ (ಶೇ.93), ಮಂಚೇಗೌಡನ ಕೊಪ್ಪಲು ಪ್ರೌಢಶಾಲೆಯ ಚಂದನ (ಶೇ.88), ಲಲಿತಾ ಸರ್ಕಾರಿ ಪ್ರೌಢಶಾಲೆಯ ಎಸ್.ಭಾವನ (ಶೇ.93), ಒಂಟಿಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ಮಧುಶ್ರೀ (ಶೇ.84), ಎಂ.ಆರ್.ರೇವತಿ (ಶೇ.82), ಮೇದರ್ ಬ್ಲಾಕ್ ಸರ್ಕಾರಿ ಪ್ರೌಢಶಾಲೆಯ ಕೆ.ಅನುಷಾ (ಶೇ.84), ಎನ್.ಆರ್.ಮೊಹಲ್ಲಾ ಸರ್ಕಾರಿ ಪ್ರೌಢ ಶಾಲೆಯ ವಿಜಯಲಕ್ಷ್ಮೀ(ಶೇ.77), ನವ್ಯ (ಶೇ.77), ಕುಂಬಾರಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ನವೀನ್ (ಶೇ.75) ಪ್ರತಿಭಾ ಪುರಸ್ಕಾರ ಸ್ವೀಕರಿಸಿದರು.