ಪಾಲಿಕೆಯಿಂದ ಪ್ಲಾಸ್ಟಿಕ್ ಕಸ ಖರೀದಿಗೆ ಐಟಿಸಿ ಕಂಪನಿ ಒಡಂಬಡಿಕೆ

ಮೈಸೂರು: ಮೈಸೂರು ನಗರದಲ್ಲಿ ಪ್ರತಿ ದಿನ ಸಂಗ್ರಹವಾಗುವ ಪ್ಲಾಸ್ಟಿಕ್ ಕಸದ ಸಮಸ್ಯೆ ನೀಗಿಸು ವುದಕ್ಕಾಗಿ ಮೈಸೂರು ನಗರಪಾಲಿಕೆ ಮತ್ತೊಂದು ಹೆಜ್ಜೆ ಯೊಂದನ್ನು ಇಟ್ಟಿದ್ದು, ಐಟಿಸಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಪ್ಲಾಸ್ಟಿಕ್ ಕಸ ನೀಡುವುದಕ್ಕೆ ಮುಂದಾಗಿದೆ. ಮೈಸೂರು ನಗರದಲ್ಲಿ ಪ್ರತಿದಿನ 400 ರಿಂದ 450 ಟನ್ ಕಸ ಸಂಗ್ರಹವಾಗುತ್ತಿದ್ದು, ಅದರಲ್ಲಿ 120ರಿಂದ 130 ಟನ್ ಪ್ಲಾಸ್ಟಿಕ್ ಕಸ ಸಂಗ್ರಹವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕಸಗಳನ್ನು ನಿರ್ವಹಣೆ ಮಾಡು ವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಈ ಹಿನ್ನೆಲೆ ಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿತ್ತಾದರೂ ಕದ್ದುಮುಚ್ಚಿ ಪ್ಲಾಸ್ಟಿಕ್ ಬಳಸುವುದು ಹೆಚ್ಚಾಗಿದೆ. ಅಲ್ಲದೆ ತಿಂಡಿ ತಿನಿಸು ಗಳ ಪ್ಯಾಕೆಟ್‍ಗಳು ಪ್ಲಾಸ್ಟಿಕ್‍ನಿಂದಲೇ ತಯಾರಿಸಿರುವು ದರಿಂದ ಎಂದಿನಂತೆ ಪ್ಲಾಸ್ಟಿಕ್ ಕಸ ಉತ್ಪಾದನೆಯಾಗು ತ್ತಿದೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯಗಳ ವೈಜ್ಞಾನಿಕ ನಿರ್ವಹಣೆಯೇ ನಗರ ಪಾಲಿಕೆಗೆ ದೊಡ್ಡ ಸವಾಲಾಗಿ ಪರಿಣ ಮಿಸಿದೆ. ಈ ಸಮಸ್ಯೆಯನ್ನು ಹೋಗ ಲಾಡಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ರುವ ಎಲ್ಲಾ ಮನೆಗಳಿಗೂ ಎರಡು ಡಸ್ಟ್‍ಬಿನ್ ನೀಡಿ, ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ನೀಡುವಂತೆ ಪಾಲಿಕೆ ಜನರ ಮೊರೆ ಹೋಗಿತ್ತು. ಆದರೂ ಬಹುತೇಕ ಮನೆಗಳಲ್ಲಿ ಹಸಿ ಹಾಗೂ ಒಣಕಸವನ್ನು ವಿಂಗಡಣೆ ಮಾಡದೆ ನೀಡುತ್ತಿರುವುದರಿಂದ ಕಸದ ಸಮಸ್ಯೆ ಹೆಮ್ಮರವಾಗಿ ಬೆಳೆಯಲಾರಂಭಿಸಿದೆ.

ಹಲವಾರು ವರ್ಷಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಮಿಶ್ರಿತ ಕಸವನ್ನು ವಿದ್ಯಾರಣ್ಯಪುರಂನಲ್ಲಿರುವ ಸೀವೇಜ್ ಫಾರಂ ನಲ್ಲಿ ಸಂಗ್ರಹಿಸಲಾಗಿದ್ದು, ಈ ಕಸದ ರಾಶಿ ಯಿಂದ ಹೊರಬರುತ್ತಿರುವ ದುರ್ನಾತ ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿರುವುದಲ್ಲದೆ ಆರೋ ಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್ ಕಸ ಕೊಳೆಯದೆ ಇರುವುದರಿಂದ ಕಸದ ರಾಶಿ ಹಲವಾರು ವರ್ಷಗಳಿಂದಲೂ ಬೆಟ್ಟದಂತೆ ಬೆಳೆದು ನಿಂತಿದೆ. ಇದೀಗ ಕಸದ ರಾಶಿಯನ್ನು ಗುಂಡಿ ತೋಡಿ ಮುಚ್ಚುವು ದಕ್ಕೆ(ಕ್ಯಾಪಿಂಗ್) ಪಾಲಿಕೆ ಮುಂದಾಗಿದೆ.

ಐಟಿಸಿಯಿಂದ ಒಪ್ಪಂದ: ಮೈಸೂರು ನಗರ ದಲ್ಲಿ ಪ್ರತಿದಿನ ಉತ್ಪಾದನೆಯಾಗುತ್ತಿರುವ ಪ್ಲಾಸ್ಟಿಕ್ ಕಸವನ್ನು ಖರೀದಿಸಲು ಐಟಿಸಿ ಸಂಸ್ಥೆ ಮುಂದಾಗಿದೆ. ಇದಕ್ಕಾಗಿ ನಗರ ಪಾಲಿಕೆಯೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳು ತ್ತಿದೆ. ನಗರದ ಎಲ್ಲಾ 65
ವಾರ್ಡ್‍ಗಳಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿಕೊಳ್ಳುವು ದಕ್ಕೆ ಖರೀದಿಸಲು ಮುಂದೆ ಬಂದಿದೆ. ಇದರಿಂದ ಪ್ರತಿದಿನ ಉತ್ಪತ್ತಿಯಾಗುವ 450 ಟನ್ ಕಸದಲ್ಲಿ 130 ಟನ್ ಪ್ಲಾಸ್ಟಿಕ್ ಕಸಕ್ಕೆ ಮುಕ್ತಿ ದೊರೆತಂತಾಗುತ್ತದೆ. ಉಳಿ ದಂತೆ 50ಕೆಜಿಗೂ ಹೆಚ್ಚಿನ ಪ್ರಮಾಣದ ಹಸಿ ಕಸ ಉತ್ಪಾದನೆಯಾಗುವ ಸ್ಥಳದಲ್ಲಿಯೇ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ನಿರ್ಮಾಣ ಮಾಡುವಂತೆ ಸೂಚನೆ ನೀಡಿರುವುದರಿಂದ ಸುಮಾರು 250 ಟನ್ ಹಸಿಕಸ ಕಡಿಮೆಯಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಕಸದ ಸಮಸ್ಯೆ ನಿವಾರಣೆಯಾಗುವ ಆಶಯವಿದೆ.

ಮನೆ ಮನೆಗಳಿಗೆ ಬ್ಯಾಗ್ ವಿತರಣೆ: ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿ ಯುವ ನಿಟ್ಟಿನಲ್ಲಿ ಮೈಸೂರು ನಗರ ಪಾಲಿಕೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸು ತ್ತಿದೆ. ಇದರ ಅಂಗವಾಗಿ ಐಟಿಸಿ ಕಂಪನಿ ಪ್ಲಾಸ್ಟಿಕ್ ಕಸ ಖರೀದಿಗೆ ಮುಂದೆ ಬಂದಿದೆ. ಇದಕ್ಕಾಗಿ ಸುಮಾರು 20 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುವ ಸಾಮಥ್ರ್ಯ ವಿರುವ ಬ್ಯಾಗ್‍ಗಳನ್ನು ಮೈಸೂರಿನಲ್ಲಿರುವ 2 ಲಕ್ಷ ಮನೆಗಳಿಗೆ ಐಟಿಸಿ ಕಂಪನಿ ಸಿಎಸ್‍ಆರ್ ಯೋಜನೆಯಡಿ ವಿತರಿಸುತ್ತಿದೆ. ಈಗಾಗಲೇ ಇದಕ್ಕೆ ನಗರ ಪಾಲಿಕೆಯಿಂದ ಸಮ್ಮತಿ ದೊರೆತಿದ್ದು, ಈ ತಿಂಗಳ ಅಂತ್ಯದಲ್ಲಿ ಎಲ್ಲಾ ಮನೆಗಳಿಗೂ ಬ್ಯಾಗ್ ವಿತರಿಸಿ ಕಡ್ಡಾಯವಾಗಿ ಪ್ಲಾಸ್ಟಿಕ್ ಕಸವನ್ನು ಬ್ಯಾಗ್‍ನಲ್ಲಿ ತುಂಬಿಡುವಂತೆ ಸೂಚನೆ ನೀಡಲಾಗುತ್ತದೆ.