ಇಂದಿನಿಂದ ಮೈಸೂರಲ್ಲಿ ಹಲಸಿನ ಹಬ್ಬ

ಮೈಸೂರು, ಆ.2 (ಎಂಟಿವೈ)-ಗ್ರಾಹಕರಿಗೆ ಒಂದೇ ಸೂರಿನಡಿ ಹಲವು ಬಗೆಯ ಹಲಸಿನ ಹಣ್ಣು ದೊರಕಿಸಿಕೊಡುವ ನಿಟ್ಟಿನಲ್ಲಿ ಮೈಸೂರಿನ ನಂಜ ರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ಆ.3 ಮತ್ತು 4ರಂದು `ಹಲಸಿನ ಹಬ್ಬ’ ಆಯೋ ಜಿಸಲಾಗಿದೆ ಎಂದು ಸಹಜ ಸಮೃದ್ಧ ಸಂಸ್ಥೆ ಮುಖ್ಯಸ್ಥ ಜಿ.ಕೃಷ್ಣ ಪ್ರಸಾದ್ ತಿಳಿಸಿದ್ದಾರೆ. ಹಲಸಿನ ಮಹತ್ವವನ್ನು ಗ್ರಾಹಕರಿಗೆ ಮತ್ತು ರೈತರಿಗೆ ತಿಳಿಸಿ ಕೊಡುವ ಉದ್ದೇಶದಿಂದ ಸಹಜ ಸಮೃದ್ಧ ಸಂಸ್ಥೆ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ‘ಹಲಸಿನ ಹಬ್ಬ’ದಲ್ಲಿ 25 ಮಳಿಗೆ ತೆರೆಯಲಾಗುತ್ತದೆ. ಮೈಸೂರು, ಮಂಗ ಳೂರು, ಕೊಡಗು, ಮೂಡುಬಿದ್ರೆ, ಉಡುಪಿ, ಚಿಕ್ಕಮಗಳೂರು, ಮಂಡ್ಯ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆ ಬೆಳೆಯುವ 25 ತಳಿಯ ಹಲಸಿನ ಹಣ್ಣುಗಳ ಮಾರಾ ಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಕೆಂಪು ಹಲಸಿನ ತಳಿಯ ಗಿಡಗಳು ಸೇರಿದಂತೆ 15 ತಳಿಗಳ ಗಿಡಗಳನ್ನು ಮಾರಾಟಕ್ಕಿಡ ಲಾಗುತ್ತದೆ. ಹಲಸಿನ ಸಾಗುವಳಿ ಮತ್ತು ಮೌಲ್ಯವರ್ಧನೆ ಕುರಿತ ಪುಸ್ತಕ ಹಾಗೂ ಹಲಸು ಹೆÀಚ್ಚುವ ಯಂತ್ರವೂ ಗ್ರಾಹಕ ರಿಗೆ ಈ ಮೇಳದಲ್ಲಿ ಸಿಗುತ್ತದೆ ಎಂದು ತಿಳಿಸಿದರು.

ಮೇಳದಲ್ಲಿ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ಹಣ್ಣು ಗಳು ತಿನ್ನಲು ಸಿಗಲಿವೆ. ಹಲಸಿನ ಐಸ್ ಕ್ರೀಂ, ಚಿಪ್ಸ, ಚಾಕೋ ಲೇಟ್, ಹಪ್ಪಳ, ಹಲ್ವ, ಕಬಾಬ್, ಹೋಳಿಗೆ, ವಡೆ, ದೋಸೆ, ಪಲ್ಯ , ಬಿರಿಯಾನಿಯ ಮಳಿಗೆ, ಹಲಸಿನ ಬೀಜದ ಪೇಯ ‘ಕಾಫಿ’ ಮಳಿಗೆಯೂ ಇರಲಿದೆ ಎಂದು ತಿಳಿಸಿದರು.

ಹಲಸಿನ ಹಬ್ಬವನ್ನು ರೋಟರಿ ಜಿಲ್ಲಾ ಗೌರ್ನರ್ ರೊ. ಜೋಸೆಫ್ ಮ್ಯಾಥ್ಯು ಉದ್ಘಾಟಿಸಲಿದ್ದಾರೆ. ಎ.ಪಿ.ಚಂದ್ರಶೇಖರ್ ರಚಿಸಿ ರುವ ‘ಹಲಸು ಬಿಡಿಸಿದಾಗ’ ಪುಸ್ತಕವನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್. ದಿನೇಶ್, ಬಿಡುಗಡೆ ಮಾಡಲಿದ್ದಾರೆ. ಕೆಂಪು ಹಲಸಿನ ಖ್ಯಾತಿಯ ತುಮಕೂರಿನ ಪರಮೇಶ್, ದೊಡ್ಡ ಬಳ್ಳಾಪುರದ ಹಲಸು ಬೆಳೆಗಾರರ ಸಂಘದ ಅಧ್ಯಕ್ಷ ರವಿ ಕುಮಾರ್ ಮತ್ತು ಹಿರೇಹಳ್ಳಿ ಫಾರಂನ ವಿಜ್ಞಾನಿ ಡಾ. ಕರು ಣಾಕರನ್ ಮುಖ್ಯ ಅತಿಥಿಗಳಾಗಿರುವರು. ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಮೇಳಕ್ಕೆ ಉಚಿತ ಪ್ರವೇಶವಿದೆ ಎಂದರು.

ಆ.3ರಂದು ಬೆಳಿಗ್ಗೆ 11ಕ್ಕೆ ತೋಟಗಾರಿಕೆ ಇಲಾಖೆ ಸಹಯೋಗ ದಲ್ಲಿ ‘ಹಲಸು ನೆಟ್ಟು, ಬರ ಅಟ್ಟು’ ತರಬೇತಿ ಕಾರ್ಯಕ್ರಮವಿದೆ. ಹಲಸಿನ ವಿವಿಧ ತಳಿಗಳ ಬಗ್ಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಕರುಣಾಕರ್, ಕೆಂಪು ಹಲಸಿನ ತಳಿಯ ವಿಶೇಷತೆಗಳ ಬಗ್ಗೆ ತುಮಕೂರು ಜಿಲ್ಲೆಯ ಚೇಳೂರಿನ ಎಸ್.ಎಸ್.ಪರಮೇಶ್, ಒಣಭೂಮಿ ತೋಟಗಾರಿಕೆ ಯಲ್ಲಿ ಹಲಸಿನ ಕೃಷಿ ಮಾಡುವ ಕುರಿತು ಮೈಸೂರಿನ ತೋಟ ಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಡಿ. ದಿನೇಶ್ ಕುಮಾರ್, ಅತಿಸಾಂದ್ರ ಪದ್ದತಿಯಲ್ಲಿ ಹಲಸು ಬೆಳೆ ಕುರಿತಂತೆ ದೇವನಹಳ್ಳಿಯ ಶಿವನಾಪುರದ ರಮೇಶ್ ಮತ್ತು ಹಲಸು ಬೆಳೆಗಾರರ ಸಂಘಟನೆಯ ಯಶಸ್ಸಿನ ಬಗ್ಗೆ ದೊಡ್ಡ ಬಳ್ಳಾಪುರದ ತೂಬನಗೆರೆಯ ರವಿಕುಮಾರ್ ಮಾಹಿತಿ ನೀಡಲಿದ್ದಾರೆ. ಆ.4ರಂದು 12 ಗಂಟೆಗೆ ‘ಹಲಸಿನ ಅಡುಗೆ ಸ್ಪರ್ಧೆ’, ಮಧ್ಯಾಹ್ನ 2ಕ್ಕೆ ‘ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ’ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8867252979 ಸಂಪರ್ಕಿಸುವಂತೆ ಕೋರಿದರು.