ಮೈಸೂರು: ಜಯ ಚಾಮರಾಜೇಂದ್ರ ಒಡೆಯರ್ ಕರ್ನಾ ಟಕದ ಏಕೀಕರಣಕ್ಕೆ ಕೊಡುಗೆ ನೀಡಿದ ವರು. ಅವರ ಜನ್ಮ ಶತಾಬ್ಧಿಯನ್ನು ರಾಜ್ಯ ಸರ್ಕಾರದಿಂದ ಆಚರಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ವತಿ ಯಿಂದ ಮೈಸೂರಿನ ಜಗನ್ಮೋಹನ ಅರ ಮನೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಜಯ ಚಾಮರಾಜೇಂದ್ರ ಒಡೆಯರ್ ಜನ್ಮ ಶತಾಬ್ಧಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕದ ಏಕೀಕರಣಕ್ಕೆ ಜಯ ಚಾಮ ರಾಜೇಂದ್ರ ಒಡೆಯರ್ ಅವರ ಕೊಡು ಗೆಯೂ ಇದೆ. ಪ್ರಜಾಪ್ರಭುತ್ವದ ಆಡಳಿತಕ್ಕೆ ಜನತೆಯನ್ನು ಸಜ್ಜುಗೊಳಿಸುವುದು ಮೈಸೂರು ಮಹಾರಾಜರ ಆಶಯವಾಗಿತ್ತೆಂದು ಜಯ ಚಾಮರಾಜೇಂದ್ರ ಒಡೆಯರ್ ಉಚ್ಛರಿಸಿ ರಾಜ ಪದವಿ ತ್ಯಾಗ ಮಾಡುತ್ತಾರೆ. ಇಂತಹ ಮಹ ನೀಯರ ಜನ್ಮಶತಾಬ್ಧಿ ಆಚರಣೆಯನ್ನು ರಾಜ್ಯ ಸರ್ಕಾರ ಮಾಡಬೇಕೆಂದು ಈ ವೇದಿಕೆ ಮೂಲಕ ಆಗ್ರಹಿಸುತ್ತೇನೆಂದು ನುಡಿದರು.
ಜು.18ರಂದು ಜನ್ಮಶತಾಬ್ಧಿ ಸಮಾರೋಪ: ಜಯ ಚಾಮರಾಜೇಂದ್ರ ಒಡೆಯರ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮೈಸೂರು ಸಂಸ್ಥಾನ ಹೊರತಾಗಿಯೂ ಕನ್ನಡ ನಾಡಿನ ಉದ್ದಗಲಕ್ಕೂ ಸುತ್ತಿ ಕನ್ನಡದ ಕೆಲಸಗಳಿಗೆ ಅನುದಾನ ಒದಗಿಸಿಕೊಟ್ಟಿದ್ದರು. ಜು.18 ಇವರ ಜನ್ಮ ದಿನವಾಗಿದ್ದು, ರಾಜವಂಶಸ್ಥರಿಂದಲೇ ಜನ್ಮ ಶತಾಬ್ಧಿಗೆ ಚಾಲನೆ ಕೊಡಿಸಬೇಕೆಂಬ ಉದ್ದೇಶದಿಂದ ಇಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜು.18ರಂದು ಪರಿ ಷತ್ತಿನ ಆವರಣದಲ್ಲಿ ಜನ್ಮ ಶತಾಬ್ಧಿಯ ಸಮಾರೋಪ ಸಮಾರಂಭ ಏರ್ಪಡಿಸ ಲಾಗುವುದು. ಈ ಮಧ್ಯೆ ಅನೇಕ ಕಾರ್ಯ ಕ್ರಮಗಳನ್ನು ಆಯೋಜಿಸಲು ಪರಿಷತ್ತು ಉದ್ದೇಶಿಸಿದೆ ಎಂದು ತಿಳಿಸಿದರು.
ನೇಪಾಳಿ ಭಾಷೆಗೆ 51 ಕನ್ನಡ ಕವನ: ವಿದ್ವಾಂಸ ಡಾ.ಎನ್.ಎಸ್.ತಾರಾನಾಥ್ ಅವರ ಮನವಿಯಂತೆ ಜಯ ಚಾಮ ರಾಜೇಂದ್ರ ಒಡೆಯರ್ ಅವರ ಭಾಷಣ, ಗ್ರಂಥಗಳನ್ನು ಪ್ರಕಟಿಸಲು ಪರಿಷತ್ತು ಸಿದ್ಧ ವಿದೆ. ಜಯ ಚಾಮರಾಜೇಂದ್ರ ಒಡೆಯರ್ ಕುರಿತು ತಾರಾನಾಥ್ ಅವರೇ ಬರೆದು ಕೊಟ್ಟರೆ ಪ್ರಕಟಿಸಲು ಪರಿಷತ್ತು ಮುಂದಾಗ ಲಿದೆ. ಮೈಸೂರು ಅರಸರ ಸದಾಶಯ ದಂತೆ ಪರಿಷತ್ತು ಮುನ್ನಡೆಯುತ್ತಿದೆ. ಜಯ ಚಾಮರಾಜೇಂದ್ರ ಒಡೆಯರ್ ಅವರು ನೇಪಾಳದಲ್ಲಿ ಕಾಮ ಕಾಮೇಶ್ವರಿ ದೇವ ಸ್ಥಾನ ನೋಡಿ ಬಂದು ಮೈಸೂರಿನಲ್ಲೂ ಕಾಮ ಕಾಮೇಶ್ವರಿ ದೇವಸ್ಥಾನ ನಿರ್ಮಿಸಿ ದರು. ಅದೇ ಮಾದರಿಯಲ್ಲಿ ಪರಿಷತ್ತು 51 ಕನ್ನಡ ಸಾಹಿತಿಗಳ ಕವನಗಳನ್ನು ನೇಪಾಳಿ ಭಾಷೆಗೂ ಹಾಗೂ 51 ನೇಪಾಳಿ ಕವಿಗಳ ಕವನಗಳನ್ನು ಕನ್ನಡ ಭಾಷೆಗೂ ಭಾಷಾಂ ತರ ಮಾಡಿಸಲಾಗಿದೆ ಎಂದು ಹೇಳಿದರು.
ಆ.17-18 ದಲಿತ ಸಾಹಿತ್ಯ ಸಮ್ಮೇಳನ: ಜಯ ಚಾಮರಾಜೇಂದ್ರ ಒಡೆಯರ್ ದಲಿತ ರಿಗೆ ದೇವಾಲಯಗಳಲ್ಲಿ ಪ್ರವೇಶ ನೀಡು ವಂತೆ ರಾಜಾಜ್ಞೆ ಹೊರಡಿಸಿದ್ದರು. ಪರಿ ಷತ್ತು ಇದೇ ಮೊಟ್ಟ ಮೊದಲ ಬಾರಿಗೆ ಆ.17 ಮತ್ತು 18ರಂದು ಕೋಲಾರದಲ್ಲಿ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಿದ್ದು, ದಲಿತ ಸಾಹಿತ್ಯ ಸಂಪುಟವನ್ನೂ ಹೊರ ತರುತ್ತಿದೆ. ಅಲ್ಲದೆ, ಪರಿಷತ್ತಿನ ಕಾರ್ಯ ವೈಖರಿಗೆ ಸಂಬಂಧಿಸಿದಂತೆ `ಕಾಯಕ ನಿರತ’ ಮತ್ತು `ಕಾಯಕ ಪಥ’ ಎಂಬ ಎರಡು ಕೃತಿ ಗಳನ್ನು ಹೊರ ತರುತ್ತಿದೆ ಎಂದು ನಾಡೋಜ ಡಾ.ಮನು ಬಳಿಗಾರ್ ತಿಳಿಸಿದರು.
ಇದಕ್ಕೂ ಮುನ್ನ ಜಯಚಾಮ ರಾಜೇಂದ್ರ ಒಡೆಯರ್ ಕುರಿತು ವಿಶೇಷ ಉಪನ್ಯಾಸ ನೀಡಿದ ವಿದ್ವಾಂಸ ಡಾ.ಎನ್. ಎಸ್.ತಾರಾನಾಥ್, ಜಯ ಚಾಮ ರಾಜೇಂದ್ರ ಒಡೆಯರ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಬಿ.ಎಂ.ಶ್ರೀಕಂಠಯ್ಯ ಉಪಾ ಧ್ಯಕ್ಷರಾಗಿದ್ದ ಅವಧಿಯಲ್ಲಿ ಪರಿಷತ್ತು ಅನೇಕ ಸಾಧನೆಗೆ ಸಾಕ್ಷಿಯಾಯಿತು. ಜಯ ಚಾಮ ರಾಜೇಂದ್ರ ಒಡೆಯರ್ ರಾಜರಾಗಿದ್ದರೂ ಜನಸಾಮಾನ್ಯರಂತೆ ಇದ್ದರು. ಕಲೆ, ಸಾಹಿತ್ಯ ಮತ್ತು ಸಂಗೀತದ ಬಗ್ಗೆ ತೀವ್ರ ಕುತೂಹಲ ಹೊಂದಿದ್ದು ಮಾತ್ರವಲ್ಲದೆ, ಇವುಗಳಿಗೆ ಉತ್ತೇಜನ ಸಹ ನೀಡಿದ್ದರು ಎಂದರು.
ಇದಕ್ಕೂ ಮುನ್ನ ಜಯಚಾಮ ರಾಜೇಂದ್ರ ಒಡೆಯರ್ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಜನ್ಮಶತಾಬ್ಧಿಗೆ ಚಾಲನೆ ನೀಡಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮೇಯರ್ ಪುಷ್ಪಲತಾ ಜಗನ್ನಾಥ್, ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ ವೇದಿಕೆಯಲ್ಲಿದ್ದರು. ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ), ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಸೇರಿದಂತೆ ಅನೇಕ ಗಣ್ಯರು ಹಾಗೂ ವಿದ್ಯಾರ್ಥಿಗಳು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು