ಸಿಎಎ ಬೆಂಬಲಿಸದ ವಿದ್ಯಾರ್ಥಿಗಳು: ಜಯಪ್ರಕಾಶ್ ಬೇಸರ

ಮೈಸೂರು, ಫೆ.6- ನಗರದ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿ ಯರ್ಸ್ ಸಭಾಂಗಣದಲ್ಲಿ ಮೈಸೂರು ನಗರ ವಿದ್ಯಾರ್ಥಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಸಭೆ ನಡೆಯಿತು. ಸಮಿತಿ ಗೌರವಾಧ್ಯಕ್ಷ ಎಸ್.ಜಯಪ್ರಕಾಶ್ (ಜೆಪಿ) ಮಾತನಾಡಿ, ವಿದ್ಯಾರ್ಥಿಗಳು ಪಠ್ಯದೊಂ ದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಸಾಹಿತ್ಯ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳ ಶಕ್ತಿ ದೊಡ್ಡದು. ದೇಶ, ರಾಜ್ಯ ಮತ್ತು ನಗರದಲ್ಲಿ ಜರುಗುವ ಎಲ್ಲಾ ಘಟನೆಗಳನ್ನು ಗಮನಿಸಬೇಕು. ಯಾವುದಾದರೂ ತಪ್ಪು ಕಂಡರೆ ಪ್ರಶ್ನಿಸಬೇಕು ಎಂದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ ಬಹಳಷ್ಟು ವಿದ್ಯಾರ್ಥಿಗಳು ಬೆಂಬಲ ನೀಡದಿರುವುದು ಬೇಸರದ ಸಂಗತಿ ಎಂದು ಹೇಳಿದರು. ಕಲಾವಿದರಾದ ಮಾದೇಶ್, ಸಂಜೀವಮೂರ್ತಿ, ಬೇಬಿ, ಮೈಸೂರು ನಗರ ವಿದ್ಯಾರ್ಥಿ ಕ್ರಿಯಾ ಸಮಿತಿ ಅಧ್ಯಕ್ಷ ನಂದೀಶ್, ಬೇಬಿ, ಶಿವಮೂರ್ತಿ ಇತರರಿದ್ದರು.
.