ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಬಿರುಸಿನ ಪ್ರಚಾರ

ರಾಮನಾಥಪುರ: ರಾಜ್ಯದಲ್ಲಿ ಎರಡು ಪಕ್ಷಗಳು ಒಟ್ಟಾಗಿ ಒಬ್ಬ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡುತ್ತಿರು ವುದು. ಇದೇ ಮೊದಲ ಭಾರಿಯಾಗಿದ್ದು, ಜಾತ್ಯತೀತ ಸಿದ್ಧಾಂತ ಮೇಲೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ನನಗೆ ಮತದಾರರು ಆಶೀರ್ವದಿಸಬೇಕು ಎಂದು ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮನವಿ ಮಾಡಿದರು.

ರಾಮನಾಥಪುರದ ಶ್ರೀಬಸವೇಶ್ವರ ವೃತ್ತದಲ್ಲಿ ಮತಯಾಚನೆ ಮಾಡಿ ಮಾತ ನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಜಾತ್ಯತೀತ ತತ್ವ ಮತ್ತು ಸಿದ್ಧಾಂತಗಳಡಿ ಕಾರ್ಯನಿರ್ವಹಿಸುತ್ತಿದೆ. ನಾನು ಈ ಎರಡೂ ಪಕ್ಷಗಳ ಅಭ್ಯರ್ಥಿ ಆಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಚುನಾವಣೆ ಕೋಮು ವಾದ ಮತ್ತು ಜಾತ್ಯತೀತ ತತ್ವಗಳ ನಡು ವಿನ ಯುದ್ಧ ಎಂದು ಬಣ್ಣಿಸದ ಅವರು, ಕುಟುಂಬ ರಾಜಕಾರಣದ ಬಗ್ಗೆ ಮಾತ ನಾಡಲು ಬಿಜೆಪಿ ಎ.ಮಂಜು ಅವರಿಗೆ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದರು.

ಕಾಂಗೆಸ್ ಶಾಸಕನಾಗಿ, ಸಚಿವನಾಗಿ ಅಧಿಕಾರ ಅನುಭವಿಸಿದ ಮಂಜು ಅವರು ಕೇವಲ ಅಧಿಕಾರಕ್ಕಾಗಿ ಪಕ್ಷಾಂತರ ನಡೆಸಿ ನನ್ನ ನಾಯಕ ಎನ್ನುತ್ತಿದ್ದ ಸಿದ್ದರಾಮಯ್ಯ ಅವರಿಗೆ ವಂಚನೆ ಎಸಗಿದ್ದಾರೆ. ಈ ಬಾರಿ ಮೈತ್ರಿ ಗೆಲುವು ಖಚಿತ. ಚುನಾವಣಾ ಪ್ರಚಾರಕ್ಕಾಗಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಪ್ರವಾಸ ನಡೆಸಲಿದ್ದಾರೆ ಎಂದರು.

ಶಾಸಕ ಎ.ಟಿ.ರಾಮಸ್ವಾಮಿ ಮಾತ ನಾಡಿ, ಈ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ದೇವೇ ಗೌಡ ಮತ್ತು ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಕೊಡುಗೆ ಅಪಾರವಾಗಿದೆ. ಈ ಹಿಂದೆ ನಮ್ಮ ಮುಖ್ಯಮಂತ್ರಿ ಸಿದ್ದ ರಾಮಯ್ಯ ಎಂದು ಜನರ ಮುಂದೆ ಹೇಳು ತ್ತಿದ್ದವರು, ಇಂದು ಮೋದಿ ಹಾಗೂ ಬಿಎಸ್.ಯಡಿಯೂರಪ್ಪ ಅವರ ಮುಂದೆ ಕೈಮುಗಿಯುತ್ತಿದ್ದಾರೆ. ಇಂತಹವರಿಗೆ ಜನರ ಮುಂದೆ ಹೋಗಿ ಮತ ಕೇಳಲು ಯಾವ ಅರ್ಹತೆ ಇದೆ ಎಂದರು.
ತಾಲೂಕು ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಅನಿಲ್‍ಕುಮಾರ್ ಮಾತ ನಾಡಿದರು. ಈ ಸಂದರ್ಭದಲ್ಲಿ ಮುಖಂಡ ರಾದ ಮುತ್ತಿಗೆ ರಾಜೇಗೌಡ, ಡಾ.ಮೋಹನ್, ಮುದ್ದನಹಳ್ಳಿ ರಮೇಶ್ ಇದ್ದರು.