ಜ್ಯುಯಲರ್ಸ್‍ಗೆ ಕನ್ನ: 2 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಹಂಪಾಪುರ: ಜ್ಯುಯಲರಿ ಅಂಗಡಿಗೆ ಕನ್ನ ಕೊರೆದು ಸುಮಾರು ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಇಲ್ಲಿಗೆ ಸಮೀಪದ ಹೊಮ್ಮರಗಳ್ಳಿಯಲ್ಲಿ ನಡೆದಿದೆ.

ಗ್ರಾಮದ ಕಾವೇರಿ ಜ್ಯುವಲರಿ ಗೋಡೆ ಕೊರೆದು ಒಳ ನುಗ್ಗಿರುವ ಖದೀಮರು ಚಿನ್ನಾಭರಣ ಕಳವು ಮಾಡಿದ್ದಾರೆ. ಇದಕ್ಕೂ ಮುನ್ನ ಖದೀಮರು ಸಮೀಪದ ರೈಸ್‍ಮಿಲ್ ಬಾಗಿಲು ಮೀಟಿ ಒಳ ನುಗ್ಗಿ ಅಲ್ಲಿಂದ ಹಲಗೆಗಳನ್ನು ತಂದು ಜ್ಯುವಲರಿ ಅಂಗಡಿಯ ಗೋಡೆ ಪಕ್ಕದಲ್ಲಿಟ್ಟು ಗೋಡೆ ಕೊರೆದಿದ್ದಾರೆ. ಖದೀಮರ ಚಲನವಲನ ಗಳು ರೈಸ್ ಮಿಲನ್ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಈ ಸಂಬಂದ ಹಂಪಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿಸಿ ಕ್ಯಾಮರಾ ಪುಟೇಜ್‍ಗಳನ್ನು ವಶಪಡಿಸಿ ಕೊಂಡು ತನಿಖೆ ಮುಂದುವರೆಸಿದ್ದಾರೆ.