ಶ್ರವಣಬೆಳಗೊಳ: ಸದಾ ಒಗ್ಗಟ್ಟಿ ನಿಂದ ಧಾರ್ಮಿಕ ಜಾಗೃತಿ ಕಾರ್ಯ ಗಳನ್ನು ಮಾಡುವುದರೊಂದಿಗೆ ಕ್ರಾಂತಿ ಕಾರಕ ಹೆಜ್ಜೆ ಇಟ್ಟು ಶಿಕ್ಷಣ ಸಂಸ್ಥೆಗಳನ್ನು ಪ್ರಾಚೀನ ಪರಂಪರೆಯ ಗುರುಕುಲಗಳನ್ನು ಸಮಾಜಗಳ ಹಿತಕ್ಕೆ ಕೊಡುಗೆಯಾಗಿ ನೀಡಬೇಕೆಂದು ಜೈನ
ಮಠದ ಪೀಠಾ ಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭಾನುವಾರ ಹೇಳಿದರು.
ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಕ್ಷೇತ್ರದ ವತಿಯಿಂದ ಆಯೋ ಜಿಸಿದ್ದ ನಾಂದಣಿ ಕ್ಷೇತ್ರದ ನೂತನ ಪಟ್ಟಾ ಭಿಷಿಕ್ತರಾದ ಜಿನಸೇನ ಭಟ್ಟಾರಕ ಪಟ್ಟಾ ಚಾರ್ಯ ಸ್ವಾಮೀಜಿಯವರ ಪುರ ಪ್ರವೇಶ ಸ್ವಾಗತ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಾ, ಬಿಎಸ್‍ಸಿ ಪದವೀಧರರಾದ ನೂತನ ಶ್ರೀಗಳು ಹೊಸದಾಗಿ ಮೂರ್ತಿ, ಬಸದಿಗಳ ನಿರ್ಮಾಣ ಮಾಡದೇ ಯುವಕರನ್ನು ವಿದ್ಯಾವಂತರನ್ನಾಗಿ ಮಾಡಿ, ಉದ್ಯೋಗ ದೊರೆಯುವಂತೆ ನೋಡಿ ಕೊಂಡು, ಸರ್ವರ ಹಿತಕ್ಕಾಗಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವುದರೊಂದಿಗೆ ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ್ಕೆ ನಿರಂತರವಾಗಿ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರದ ಅಭಿನಂದನೆ ಸ್ವೀಕರಿಸಿ ನೂತನ ಜಿನಸೇನ ಭಟ್ಟಾರಕ ಸ್ವಾಮೀಜಿ ಮಾತ ನಾಡುತ್ತಾ, ನಾವು ಆಚಾರ್ಯ ಸುನೀಲ ಸಾಗರ ಮಹಾರಾಜರಿಂದ ದೀಕ್ಷೆ ಪಡೆದು ಮುನಿ ಪರಂಪರೆಯಲ್ಲಿ ಸಾಗುವ ಇಚ್ಛೆಯನ್ನು ಹೊಂದಿದ್ದೆವು. ಆದರೆ ಈಗ ನಾಂದಣಿ ಕ್ಷೇತ್ರದ ಭಟ್ಟಾರಕರಾಗಿ ಸಮಾಜ ವಹಿಸಿರುವ ಜವಾಬ್ದಾರಿಯನ್ನು ಸರ್ವರ ಕಲ್ಯಾಣಕ್ಕಾಗಿ ಉತ್ತಮವಾಗಿ ನಿರ್ವ ಹಿಸುವುದಾಗಿ ಹೇಳಿದರು. ಉಪಾಧ್ಯಾಯ ಊರ್ಜಯಂತ ಸಾಗರ ಮಹಾರಾಜರು ಆಶೀರ್ವಚನ ನೀಡಿದರು.
ಕಾರ್ಯಕ್ರಮಕ್ಕೂ ಮೊದಲು ನಾಂದಣಿ ಮಠದ ಜಿನಸೇನ ಭಟ್ಟಾರಕ ಸ್ವಾಮೀಜಿ ಅವರನ್ನು ಅಲಂಕರಿಸಲ್ಪಟ್ಟ ಪಲ್ಲಕ್ಕಿಯಲ್ಲಿ ಪಟ್ಟಣದ ವಿದ್ಯಾನಂದ ನಿಲಯದಿಂದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಕರೆತಂದು ಸ್ವಾಗತಿಸಿ, ಪುಷ್ಪ ವೃಷ್ಠಿ ಮಾಡಿ ಮತ್ತು ಮಾಲಾರ್ಪಣೆ ಯೊಂದಿಗೆ ವೇದಿಕೆಗೆ ಬರಮಾಡಿಕೊಂಡರು. ನೂತನ ಶ್ರೀಗಳಿಗೆ ಅಷ್ಟವಿಧಾರ್ಚನೆ ಯೊಂದಿಗೆ ಸಮಾಜದ ಗಣ್ಯ ವ್ಯಕ್ತಿಗಳಿಂದ ಪಾದಪೂಜೆ ನೆರವೇರಿಸಲಾಯಿತು.
ನಂತರ ಚಾರುಕೀರ್ತಿ ಶ್ರೀಗಳು ಕ್ಷೇತ್ರದ ವತಿಯಿಂದ ಅಭಿನಂದನಾ ಪತ್ರ, 40 ಸಂಪುಟಗಳ ಧವಲ ಗ್ರಂಥಗಳ ಶಾಸ್ತ್ರ, ಜ್ಞಾನದ ಸಂಕೇತವಾಗಿ ಜೋಡಿ ದೀಪಗಳು, ರಜತ ಕಳಸ ಮತ್ತು ವಸ್ತ್ರ, ಶ್ರೀಫಲ ಗಳೊಂದಿಗೆ ನೂತನ ಶ್ರೀಗಳನ್ನು ಗೌರವಿಸ ಲಾಯಿತು. ಬೆಂಗಳೂರಿನ ಕರ್ನಾಟಕ ಜೈನ ಅಸೋಸಿಯೇಷನ್, ಮೈಸೂರು, ಹಾಸನ, ಮಂಡ್ಯ, ಶ್ರವಣಬೆಳಗೊಳ, ಇಲ್ಲಿಯ ಶಿಕ್ಷಣ ಮುಖ್ಯಸ್ಥರು, ನೂತನ ಶ್ರೀಗಳನ್ನು ವಸ್ತ್ರ ಮತ್ತು ಶ್ರೀಫಲದೊಂದಿಗೆ ಗೌರವಿಸಿದರು.
ಅದ್ಧೂರಿ ಮೆರವಣಿಗೆಯಲ್ಲಿ ಕಲಾತಂಡ ಗಳಾದ ಡೊಳ್ಳು ಕುಣಿತ, ಕೊಂಬು ಕಹಳೆ, ಚಿಟ್ಟಿಮೇಳ, ಧರ್ಮ ಧ್ವಜ ಹಿಡಿದ ಬಾಲಕರು, ಮಂಗಲ ಕಲಶ ಹೊತ್ತ ಮಹಿಳೆಯರು, ಮಂಗಲ ವಾದ್ಯ, ಶ್ರಾವಕ ಶ್ರಾವಕಿಯರು ಇದ್ದರು.
ಕಾರ್ಯಕ್ರಮದಲ್ಲಿ ಆರ್ಯಿಕಾ ಸುಯೋಗ ಮತಿ ಮಾತಾಜಿ, ಮತ್ತು ಆರ್ಯಿಕಾ ಶಿವಮತಿ ಮಾತಾಜಿ ಸಂಘಸ್ಥ ತ್ಯಾಗಿಗಳು, ಕಂಬದಹಳ್ಳಿ ಜೈನ ಮಠದ ಭಾನುಕೀರ್ತಿ ಸ್ವಾಮೀಜಿ, ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್.ಜಿತೇಂದ್ರ ಕುಮಾರ್, ಸರಿತಾ ಮಹೇಂದ್ರಕುಮಾರ್, ವಿನೋದ್ ದೊಡ್ಡಣ್ಣನವರ್, ಸುರೇಶ್ ಪಾಟೀಲ್, ಟಿ.ಜಿ.ದೊಡ್ಡಮನಿ, ದೇವೇಂದ್ರ ಸ್ವಾಮಿ, ವಿನೋದ್‍ಕುಮಾರ್ ಬಾಕ್ಲಿವಾಲ್, ಜಿ.ಎಂ.ರಾವನ್ನವರ್, ಹೆಚ್.ಪಿ.ಅಶೋಕ್ ಕುಮಾರ್, ದೇವೇಂದ್ರಕುಮಾರ್, ಸತ್ಯನಾರಾ ಯಣ ಇದ್ದರು. ಪೂಜಾಷ್ಟಕಗಳನ್ನು ಸೌಮ್ಯ ಮತ್ತು ಸರ್ವೇಶ್ ಜೈನ್, ಪೂಜೆಯ ನೇತೃತ್ವವನ್ನು ಜಿನೇಶ್ ನಡೆಸಿಕೊಟ್ಟರು.