ಈ ಬಾರಿ10 ದಿನ ಮುಂಚಿತವಾಗಿ ಅ.8ಕ್ಕೆ ಜಂಬೂ ಸವಾರಿ

ಮೈಸೂರು: 2019ರ ಸಾಲಿನಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 10 ದಿನಗಳು ಮುಂಚಿತವಾಗಿ ಆರಂಭವಾಗಲಿದೆ. ಈ ಬಾರಿ ಅಕ್ಟೋ ಬರ್ 8 ರಂದು ಮಂಗಳವಾರ ವಿಜಯ ದಶಮಿ ಮೆರವಣಿಗೆ ನಡೆಯಲಿದೆ. ಸಾಮಾನ್ಯ ವಾಗಿ ಅಕ್ಟೋಬರ್ 3 ಅಥವಾ ನಾಲ್ಕನೇ ವಾರ ದಸರಾ ಉತ್ಸವ ನಡೆಯುತ್ತಿತ್ತು. ಆದರೆ ಈ ವರ್ಷ 10 ದಿನ ಮುಂಚಿತವಾಗಿ ನಾಡಹಬ್ಬ ಆರಂಭವಾಗಲಿದೆ.

ಸೆಪ್ಟೆಂಬರ್ 28 ರಂದು ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ 2019ರ ದಸರಾ ಮಹೋ ತ್ಸವಕ್ಕೆ ಚಾಲನೆ ನೀಡಲಿದ್ದು, ಅಕ್ಟೋಬರ್ 8 ರಂದು ವೈಭವೋಪೇತ ವಿಜಯದಶಮಿ ಮೆರವಣಿಗೆ ನಡೆಯಲಿದೆ. ಜುಲೈ ಮೊದಲ ವಾರದಲ್ಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆ ಯಲ್ಲಿ ದಸರಾ ಉನ್ನತ ಮಟ್ಟದ ಸಭೆ ಯನ್ನು ಬೆಂಗಳೂರಲ್ಲಿ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ತದನಂತರ ಸಭೆಯ ತೀರ್ಮಾನದಂತೆ ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಪ್ರವಾ ಸೋದ್ಯಮ ಇಲಾಖೆ, ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆ, ಮೈಸೂರು ಮಹಾ ನಗರಪಾಲಿಕೆ, ಮುಡಾ ಅಧಿಕಾರಿಗಳು ದಸರೆ ಸಿದ್ಧತೆಯನ್ನು ಜುಲೈ ಮೊದಲು ಅಥವಾ ಎರಡನೇ ವಾರದಿಂದಲೇ ಆರಂಭಿಸಲಿದ್ದಾರೆ.

ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ತರಾತುರಿಯಲ್ಲಿ ರುವ ಅಧಿಕಾರಿಗಳು, ಅದರ ಬೆನ್ನಲ್ಲೇ ಆಷಾಢ ಶುಕ್ರವಾರದ ಧಾರ್ಮಿಕ ಕೈಂಕರ್ಯಕ್ಕೆ ತಯಾರಿ ನಡೆಸಬೇಕಾಗುತ್ತದೆ. ನಂತರ ದಸರಾ ಮಹೋತ್ಸವದ ಕಾಮಗಾರಿಗಳು, ಕಟ್ಟಡ ಗಳಿಗೆ ಸುಣ್ಣ ಬಣ್ಣ ಸೇರಿದಂತೆ ಸಿವಿಲ್ ಕೆಲಸ ಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸಬೇಕಾ ಗುತ್ತದೆ. ದಸರೆ ಸಮೀಪಿಸಿದಾಗ ರಸ್ತೆ ರಿಪೇರಿ, ಗುಂಡಿ ಮುಚ್ಚುವ ಹಾಗೂ ಡಾಂಬ ರೀಕರಣ ಕಾಮಗಾರಿಗಳನ್ನು ಆತುರಾತುರ ವಾಗಿ ನಡೆಸುವುದರಿಂದ ಕಳಪೆ ಕೆಲಸ ವಾಗುತ್ತದೆ ಎಂಬ ಆರೋಪ ಕೇಳಿಬರುತ್ತಿವೆ ಯಾದ್ದರಿಂದ ಈ ಬಾರಿ ಮುಂಚಿತ ವಾಗಿಯೇ ದಸರಾ ಸಿವಿಲ್ ಕಾಮಗಾರಿ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಅಭಿ ರಾಂ ಜಿ. ಶಂಕರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಮುಂಚಿತವಾಗಿಯೇ ಉನ್ನತ ಮಟ್ಟದ ಸಭೆಗೆ ದಿನಾಂಕ ನಿಗದಿಪಡಿಸು ವಂತೆ ತಾವು ತಕ್ಷಣವೇ ಸರ್ಕಾರಕ್ಕೆ ಪತ್ರ ಬರೆಯುವುದಾಗಿಯೂ ಅವರು ತಿಳಿಸಿದ್ದಾರೆ.