ಲಾಕ್‍ಡೌನ್‍ನಲ್ಲಿ ಸದ್ದು ಮಾಡುತ್ತಿರುವ ಕಬ್ಜ

ಕನ್ನಡ ಚಿತ್ರರಂಗದಲ್ಲಿ ಸದ್ಯ ಲಾಕ್‍ಡೌನ್ ಟೈಂನಲ್ಲೂ ಸದ್ದು ಮಾಡುತ್ತಿರುವ ಕೆಲವೇ ಚಿತ್ರಗಳಲ್ಲಿ ಕಬ್ಜ ಚಿತ್ರವೂ ಒಂದು. ಸೂಪರ್‍ಸ್ಟಾರ್ ಉಪೇಂದ್ರ ಹಾಗೂ ಆರ್.ಚಂದ್ರು ಕಾಂಬಿನೇಷನ್‍ನಲ್ಲಿ ಹೊರ ಬರುತ್ತಿರುವ ತೃತೀಯ ಚಿತ್ರ ಇದಾಗಿದೆ.

ಒಂದು ರಿಯಾಲಿಸ್ಟಿಕ್ ವಿಚಾರವನ್ನು ಹೇಳುವಂಥ ಸಿನಿಮಾ ಇದಾಗಿದ್ದು, ಸ್ವತಂತ್ರ ಹೋರಾಟದ ಸಂದರ್ಭದಿಂದ 80ರ ದಶಕದವರೆಗೂ ನಡೆಯುವ ಘಟನೆಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನವಿದೆ. ದೇಶದ ಗಡಿ ಸಮಸ್ತ ಸ್ವಾತಂತ್ರ್ಯ ಹೋರಾಟದ ಸಂಬಂಧಿತ ಘಟನೆಗಳ ಹಿನ್ನೆಲೆಯಾಗಿಟ್ಟುಕೊಂಡು ಕಬ್ಜ ಕಥೆಯನ್ನು ನಿರ್ದೇಶಕ ಆರ್.ಚಂದ್ರು ತೆರೆಮೇಲೆ ಕಟ್ಟಿಕೊಡಲು ಹೊರಟಿದ್ದಾರೆ. ಈವರೆಗೆ ಅಂಡರ್ ವಲ್ರ್ಡ್ ಜಗತ್ತಿನ ಕಥೆ ಎಂದೇ ಹೇಳಿಕೊಂಡು ಬಂದಿದ್ದ ಚಂದ್ರು. ಈಗ ಅದನ್ನು ಮೀರಿ ತಾನು ಹೇಳ ಹೊರಟಿರುವ ಒಂದಷ್ಟು ವಿಚಾರಗಳನ್ನು ಪತ್ರಿಕೆಯೊಂದಿಗೆ ಮಾತನಾಡುತ್ತ ಹೊರ ಹಾಕಿದ್ದಾರೆ. ಈಗಾಗಲೇ 30 ಕೋಟಿ ವ್ಯಯಿಸಲಾಗಿರುವ ಕಬ್ಜ ಚಿತ್ರ ಕಂಪ್ಲೀಟ್ ಆಗುವ ವೇಳೆಗೆ ನೂರು ಕೋಟಿ ದಾಟುವ ನಿರೀಕ್ಷೆಯಿದೆ. ಸ್ವತಃ ಉಪೇಂದ್ರ ಅವರೇ ಚಂದ್ರು ಅವರ ಹಾರ್ಡ್‍ವರ್ಕ್ ಕಂಡು ಬೆರಗಾಗಿದ್ದಾರೆ. ಈವರೆಗೆ 25 ವರ್ಷ ಮುಗಿಸಿರುವ ಓಂ ಚಿತ್ರದ ಬಗ್ಗೆ ಜನ ಹೇಗೆ ನೆನಪಿಸಿಕೊಳ್ಳುತ್ತಿದ್ದಾರೋ. ಅದೇ ರೀತಿ ನನ್ನ ಮತ್ತೊಂದು ಚಿತ್ರವನ್ನು ಮುಂದಿನ ಎರಡು ದಶಕಗಳ ಕಾಲ ಜನ ನೆನಪಿಟ್ಟುಕೊಳ್ಳವಂಥ ಸಿನಿಮಾ ಮಾಡುತ್ತಿದ್ದೀರಿ ಎಂದು ಇತ್ತೀಚೆಗಷ್ಟೇ ಅಭಿನಂದಿಸಿದ್ದಾರೆ. ಕಬ್ಜ ಆರ್.ಚಂದ್ರು ಅವರ 5 ವರ್ಷಗಳ ಕನಸು. ಕನ್ನಡ, ತೆಲುಗು ಸೇರಿ ದಂತೆ 7 ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಇದಲ್ಲದೆ ಬಾಲಿವುಡ್‍ನ ಖ್ಯಾತ ನಟನೊಬ್ಬನನ್ನು ಕನ್ನಡಕ್ಕೆ ಕರೆತರುವ ಪ್ರಯತ್ನವನ್ನು ನಿರ್ದೇಶಕರು ನಡೆಸಿದ್ದಾರೆ. ಅಲ್ಲದೆ ಸಿನಿಮಾ ನೋಡುವಾಗ ಯಾವುದೇ ಒಂದು ಹಾಲಿವುಡ್ ಸಿನಿಮಾ ನೋಡುತ್ತಿರುವಂತೆ ಭಾಸವಾಗುತ್ತದೆ. ಹಾಗಾಗಿ ಬಾಲಿವುಡ್‍ಗೂ ಡಬ್ಬಿಂಗ್ ಆಗುವುದು ಕನ್‍ಫರ್ಮ ಆಗಿದೆ. ಇಂಥ ಚಿತ್ರಗಳಲ್ಲಿ ಹಿನ್ನೆಲೆ ಸಂಗೀತ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತೊಂದು ಹಿಟ್ ಕೊಡಲು ಸಿದ್ಧರಾಗಿದ್ದಾರೆ. ಇನ್ನು ಈ ಚಿತ್ರ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ರೆಡಿಯಾಗುತ್ತಿರುವುದರಿಂದ ಎಲ್ಲಾ ಭಾಷೆಯ ಪ್ರಮುಖ ಕಲಾವಿದರುಗಳೂ ಸಹ ಒಂದೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರಕ್ಕಾಗಿ ಚಂದ್ರು ಮಾಡಿಕೊಂಡಿರುವ ಪ್ರಿಪರೇಷನ್ ಕಂಡರೆ ಎಂಥವರಿ ಗಾದರೂ ಆಶ್ಚರ್ಯವಾಗದಿರದು. ಈ ಚಿತ್ರದ ಒಂದಷ್ಟು ಕಥೆ ಹೈದರಾಬಾದಿನಲ್ಲಿ ನಡೆಯುತ್ತ್ತದೆ. ಹಾಗಾಗಿ ಹೈದರಾಬಾದಿನ ನಿಜಾಮರ ಕಥೆ ಕೂಡ ಇಲ್ಲಿ ಹಾದು ಹೋಗುತ್ತದೆ. ಒಂದು ಹಂತದಲ್ಲಿ ಕೆಜಿಎಫ್ ಚಿತ್ರವನ್ನು ಮೀರಿಸುವಂತ ಸಿನಿಮಾ ಆಗುವ ಎಲ್ಲಾ ಸಾಧ್ಯತೆಯೂ ಈ ಚಿತ್ರಕ್ಕಿದೆ. ಯಾವುದೇ ಬಾಲಿವುಡ್, ಹಾಲಿವುಡ್ ಚಿತ್ರದಲ್ಲಿ ನೋಡಬಹುದು ಎಂದುಕೊಳ್ಳುವಂಥ ದೃಶ್ಯವೈಭವ ಉಪ್ಪಿ, ಚಂದ್ರು ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಕಬ್ಜ ಚಿತ್ರದಲ್ಲಿ ಕಾಣಬಹುದಾಗಿದೆ. ಈವರೆಗೆ ಚಂದ್ರು ಸುಮಾರು 14-15 ಚಿತ್ರಗಳನ್ನು ಮಾಡಿದ್ದರೂ ಆ ಎಲ್ಲಾ ಚಿತ್ರಗಳನ್ನು ಒಂದು ಕಥೆ ಇಟ್ಟರೆ, ಕಬ್ಜ ಚಿತ್ರವೇ ಹೆಚ್ಚು ತೂಗುತ್ತದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಇಡೀ ಭಾರತೀಯ ಚಿತ್ರರಂ ಗವೇ ಕನ್ನಡದತ್ತ ಮತ್ತೊಮ್ಮೆ ತಿರುಗಿ ನೋಡುವಂಥ ಚಿತ್ರವನ್ನಾಗಿ ಕಬ್ಜವನ್ನು ರೂಪಿಸಲು ಹೊರಟಿದ್ದಾರೆ. ನಿರ್ದೇಶಕ ಆರ್.ಚಂದ್ರು, ಇನ್ನು ಇಂಥ ಬಿಗ್ ಚಿತ್ರಗಳನ್ನು ಮಾಡುವಾಗ ಒಂದಷ್ಟು ಪ್ರಮುಖರ ಸಹಕಾರ ಅತ್ಯಗತ್ಯವಾಗಿರುತ್ತದೆ.

ಈ ಹಂತದಲ್ಲಿ ಮಾಜಿ ಶಾಸಕ ಎಂಟಿಬಿ ನಾಗರಾಜ ಅವರ ಸಹಕಾರ, ಪ್ರೋತ್ಸಾಹವನ್ನು ಚಂದ್ರು ಈ ಹಂತದಲ್ಲಿ ತುಂಬಾ ನೆನಪಿಸಿಕೊಳ್ಳುತ್ತಾರೆ. ಕಬ್ಜ ಮೂಲಕ ಚಂದ್ರು ಅವರ ಬಹುದಿನಗಳ ಕನಸು ನನಸಾಗಲಿದೆ. ಕನ್ನಡ ಚಿತ್ರರಂಗದಲ್ಲಿ ಬಹುಶಃ ಮುಂದೆ ಯಾರೂ ಇಂಥ ಪ್ರಯತ್ನಕ್ಕೆ ಕೈಹಾಕಲಾರರು, ಇದೇ ಮೊದಲು ಎನ್ನುವಂತೆ ಅಪೂತ ಪೂರ್ವ ದಾಖಲೆಗೆ ಕಾರಣವಾಗುವ ಚಿತ್ರ ಇದಾಗಲಿದೆ. ಅಲ್ಲದೆ ಈಗ ಒಂದಷ್ಟು ಬಿಡುವು ಸಿಕ್ಕಿರುವುದು ಮತ್ತಷ್ಟು ಇಂಪ್ರೂವ್ ಮೆಂಟ್ ಮಾಡಿಕೊಳ್ಳಲು ಸಹಕಾರಿಯಾಗಿದೆ.