ಕನ್ನಡ ಚಿತ್ರರಂಗದಲ್ಲಿ ಸದ್ಯ ಲಾಕ್‍ಡೌನ್ ಟೈಂನಲ್ಲೂ ಸದ್ದು ಮಾಡುತ್ತಿರುವ ಕೆಲವೇ ಚಿತ್ರಗಳಲ್ಲಿ ಕಬ್ಜ ಚಿತ್ರವೂ ಒಂದು. ಸೂಪರ್‍ಸ್ಟಾರ್ ಉಪೇಂದ್ರ ಹಾಗೂ ಆರ್.ಚಂದ್ರು ಕಾಂಬಿನೇಷನ್‍ನಲ್ಲಿ ಹೊರ ಬರುತ್ತಿರುವ ತೃತೀಯ ಚಿತ್ರ ಇದಾಗಿದೆ. ಒಂದು ರಿಯಾಲಿಸ್ಟಿಕ್ ವಿಚಾರವನ್ನು ಹೇಳುವಂಥ ಸಿನಿಮಾ ಇದಾಗಿದ್ದು, ಸ್ವತಂತ್ರ ಹೋರಾಟದ ಸಂದರ್ಭದಿಂದ 80ರ ದಶಕದವರೆಗೂ ನಡೆಯುವ ಘಟನೆಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನವಿದೆ. ದೇಶದ ಗಡಿ ಸಮಸ್ತ ಸ್ವಾತಂತ್ರ್ಯ ಹೋರಾಟದ ಸಂಬಂಧಿತ ಘಟನೆಗಳ ಹಿನ್ನೆಲೆಯಾಗಿಟ್ಟುಕೊಂಡು ಕಬ್ಜ ಕಥೆಯನ್ನು ನಿರ್ದೇಶಕ ಆರ್.ಚಂದ್ರು ತೆರೆಮೇಲೆ ಕಟ್ಟಿಕೊಡಲು ಹೊರಟಿದ್ದಾರೆ. ಈವರೆಗೆ…