ಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ

ಕೆ.ಆರ್.ಪೇಟೆ: ತಾಲೂಕಿನ ಜೀವನದಿ ಹೇಮಾವತಿ ನದಿ ತಪ್ಪಲಿನಲ್ಲಿ ಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆ ಹಾಗೂ ಪವಿತ್ರ ರಥಸಪ್ತಮಿ ಅಂಗವಾಗಿ ನಡೆದ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ 8.30ಕ್ಕೆ ತಹಶೀಲ್ದಾರ್ ಎಂ.ಶಿವಮೂರ್ತಿ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನಾಡಿನ ವಿವಿಧ ಭಾಗ ಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಉಘೇ.. ಗೋವಿಂದ, ಉಘೇ.. ವೆಂಕಟ ರಮಣ ಎಂಬ ಜಯಘೋಷ ಕೂಗುತ್ತಾ ಶ್ರೀರಥದಲ್ಲಿ ವಿರಾಜಮಾನವಾಗಿದ್ದ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಉತ್ಸವ ಮೂರ್ತಿ ಗೆ ಕೈಮುಗಿದು ಶ್ರೀರಥಕ್ಕೆ ಹಣ್ಣು ಜವನ ಎಸೆದು ತಮ್ಮ ಭಕ್ತಿಭಾವ ಸಮರ್ಪಿಸಿದರು.

ರಥೋತ್ಸವದ ನಂತರ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ಕಲ್ಯಾಣ ಮಂಟಪದ ಆವರಣದಲ್ಲಿ ಜಾತ್ರೆಯಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳು, ಹೋರಿಗಳು, ಕುರಿ, ಮೇಕೆಗಳಿಗೆ ಚಿನ್ನ ಮತ್ತು ಬೆಳ್ಳಿ ನಾಣ್ಯದ ಜೊತೆಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ವೇಳೆ ತಹಶೀಲ್ದಾರ್ ಶಿವಮೂರ್ತಿ ಮಾತನಾಡಿ, ಹಬ್ಬ ಹರಿದಿನಗಳು, ಜಾತ್ರೆ, ರಥೋತ್ಸವಗಳು ನಮ್ಮ ಸಂಸ್ಕøತಿಯ ಪ್ರತಿ ಬಿಂಬವಾಗಿವೆ. ಹಬ್ಬದ ಸಂಭ್ರಮದಲ್ಲಿ ಎಲ್ಲರೂ ತಮ್ಮ ದೈನಂದಿನ ಜಂಜಾಟಗಳನ್ನು ಮರೆತು ಒಂದಾಗಿ ರಥೋತ್ಸವದಲ್ಲಿ ಭಾಗ ವಹಿಸಿ ದೇವರ ಕೃಪೆಗೆ ಪಾತ್ರರಾದಾಗ ಸಿಗುವ ಸಮಾಧಾನ ಹಾಗೂ ನೆಮ್ಮದಿಯೇ ಬೇರೆ. ಇಂತಹ ಜಾತ್ರೆಗಳು ಸಮಾಜದಲ್ಲಿ ವಿವಿಧತೆಯಲ್ಲಿ ಏಕತೆ ಮೂಡಿಸಲು ನೆರವಾಗುತ್ತದೆ ಎಂದರು.

ರಾಸುಗಳ ಬಹುಮಾನಗಳ ಪ್ರಾಯೋಜಕ ರಾದ ಕೋರಮಂಡಲ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ರವಿರೆಡ್ಡಿ ಜಾತ್ರೆಯಲ್ಲಿ ಭಾಗವ ಹಿಸಿದ್ದ ಉತ್ತಮ ರಾಸುಗಳಿಗೆ ಚಿನ್ನ ಮತ್ತು ಬೆಳ್ಳಿ ನಾಣ್ಯವನ್ನು ಬಹುಮಾನ ವಿತರಿಸಿ ಮಾತ ನಾಡಿ, ರೈತರೊಂದಿಗೆ ಕೋರ ಮಂಡಲ್ ಸಕ್ಕರೆ ಕಾರ್ಖಾನೆ ಉತ್ತಮ ಬಾಂಧವ್ಯ ಹೊಂದಿದ್ದು, ರೈತರ ಎಲ್ಲಾ ಸಮಾಜಮುಖಿ ಚಟುವಟಿಕೆ ಗಳೊಂದಿಗೆ ಕೈ ಜೋಡಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಗಾಯತ್ರಿ, ಜಿಪಂ ಸದಸ್ಯ ಬಿ.ಎಲ್. ದೇವ ರಾಜು, ರಾಮದಾಸ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎಸ್.ರಾಜು, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್.ರಾಮೇ ಗೌಡ, ಅಶೋಕ್, ತಾಲೂಕು ಕಬ್ಬು ಬೆಳೆ ಗಾರರ ಸಂಘದ ಅಧ್ಯಕ್ಷ ಕುಮಾರ್, ಗೌರವಾಧ್ಯಕ್ಷ ಕೆ.ಜೆ.ಅಣ್ಣಯ್ಯ, ಮಂಡ್ಯದ ಶಬರಿ ಬುಕ್‍ಹೌಸ್ ಮಾಲೀಕ ಡಾ.ಕೆ.ವಿ. ರಾಮೇಗೌಡ ಮುಖಂಡರಾದ ಕೆ.ಟಿ. ಗಂಗಾಧರ್, ಶೇಷಾದ್ರಿ, ರಾಮೇಗೌಡ, ರಾಮೇಗೌಡ, ಪಿಡಿಓಗಳಾದ ಶಿವಕುಮಾರ್, ಬಿ.ಎಲ್.ಅರವಿಂದ್, ಕೋರಮಂಡಲ್ ಸಕ್ಕರೆ ಕಾರ್ಖಾನೆ ಕಬ್ಬು ವಿಭಾಗದ ಹಿರಿಯ ಅಧಿಕಾರಿ ಕೆ.ಬಾಬುರಾಜ್, ದೇವಸ್ಥಾನದ ಪ್ರಧಾನ ಅರ್ಚಕ ರಾಮಭಟ್ ಸೇರಿದಂತೆ ಸಾವಿರಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿಪಿಐ ಕೆ.ಎನ್.ಸುಧಾಕರ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಎಸ್‍ಐ ಆನಂದೇಗೌಡ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.