ಅಂಗಡಿ-ಮುಂಗಟ್ಟು, ಸಂಘ-ಸಂಸ್ಥೆಗಳ ನಾಮಫಲಕ ಕನ್ನಡ ಕಡ್ಡಾಯ

ಮೈಸೂರು:  ರಾಜ್ಯದ ಎಲ್ಲಾ ಅಂಗಡಿ-ಮುಂಗಟ್ಟು, ಸಂಘ-ಸಂಸ್ಥೆಗಳ ನಾಮಫಲಕಗಳಲ್ಲಿ ಕಡ್ಡಾಯ ವಾಗಿ ಕನ್ನಡ ಭಾಷೆ ಬಳಕೆಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಜಿಲ್ಲಾ ನ್ಯಾಯಾಲಯದ ಎದುರಿನ ಗಾಂಧೀ ಪುತ್ಥಳಿ ಬಳಿ ಜಮಾ ಯಿಸಿದ ಪ್ರತಿಭಟನಾಕಾರರು, `ಕನ್ನಡ ನಾಮ ಫಲಕ ಇದ್ದರೆ ಶಾಂತಿ, ಇಲ್ಲದಿದ್ದರೆ ಕ್ರಾಂತಿ’ ಎಂಬಿತ್ಯಾದಿ ಕನ್ನಡ ಪರ ಘೋಷಣೆ ಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಯಾವ ಭಾಗಕ್ಕೆ ಹೋದರೂ ನಾಮಫಲಕಗಳಲ್ಲಿ ಅನ್ಯಭಾಷೆಗಳೇ ರಾರಾ ಜಿಸುತ್ತಿವೆ. ನಾಮಫಲಕಗಳು ಶೇ.60ರಷ್ಟು ಕನ್ನಡ ಭಾಷೆಯಿಂದಲೇ ಕೂಡಿರಬೇಕೆಂದು ಈ ಹಿಂದೆಯೇ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಈ ಆದೇಶವನ್ನು ರಾಜ್ಯದಲ್ಲಿ ಅನು ಷ್ಠಾನಕ್ಕೆ ತರುವಲ್ಲಿ ಆಯಾಯ ಜಿಲ್ಲಾಡಳಿತ ಗಳು ಹಾಗೂ ಸ್ಥಳೀಯ ಸಂಸ್ಥೆಗಳು ವಿಫಲ ವಾಗಿವೆ ಎಂದು ಆರೋಪಿಸಿದರು.
ಸ್ಥಳೀಯ ಸಂಸ್ಥೆಗಳು ವಾಣಿಜ್ಯ ಪರ ವಾನಗಿ ನೀಡುವ ಸಂದರ್ಭದಲ್ಲಿ ನಾಮಫಲಕ ಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವಂತೆ ಸೂಚನೆ ನೀಡಬೇಕು. ಈ ಸೂಚನೆಗೆ ಅನುಗುಣವಾಗಿ ನಡೆದುಕೊಳ್ಳ ದಿದ್ದರೆ, ವಾಣಿಜ್ಯ ಪರವಾನಗಿಯನ್ನೇ ರದ್ದುಪಡಿಸುವ ಗಂಭೀರ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.

ನಮ್ಮ ಸಂಘಟನೆ ವತಿಯಿಂದ ಮುಂಬ ರುವ ದಿನಗಳಲ್ಲಿ ಕನ್ನಡ ನಾಮಫಲಕಗಳ ಅಭಿಯಾನ ಹಮ್ಮಿಕೊಂಡಿದ್ದು, ಕನ್ನಡ ಭಾಷೆ ಉಳಿಸಿ, ಬೆಳೆಸಲು ಆಡಳಿತ ವರ್ಗ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಒತ್ತಾಯಿಸಿದರು. ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ನಗರಾಧ್ಯಕ್ಷ ಪಿ.ಪ್ರಜೀಶ್, ಆರ್.ಶಾಂತಮೂರ್ತಿ, ಸಿ.ಎಸ್.ನಂಜುಂಡಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.