ಏಪ್ರಿಲ್ 3ನೇ ವಾರ ಚುನಾವಣೆ

ಬೆಂಗಳೂರು: ಒಂದೆರಡು ದಿನದಲ್ಲೇ ಲೋಕಸಭಾ ಚುನಾ ವಣಾ ದಿನಾಂಕ ಘೋಷಣೆಯಾಗ ಲಿದೆ ಎಂದಿರುವ ಸಂಸದೆ ಶೋಭಾ ಕರಂದ್ಲಾಜೆ, ಕರ್ನಾಟಕದ 28 ಕ್ಷೇತ್ರಗಳಿಗೆ ಏಪ್ರಿಲ್ ಮೂರನೇ ವಾರದಲ್ಲಿ ಚುನಾವಣೆ ಜರುಗಲಿದೆ ಎಂದು ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ 22 ಸ್ಥಾನಗಳಿಗೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲು ತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಜಂತಕಲ್ ಮೈನಿಂಗ್ ಪ್ರಕರಣ ದಲ್ಲಿ ಷರತ್ತಿನ ಜಾಮೀನಿನ ಮೇಲೆ ಹೊರ ಗಡೆ ಇದ್ದಾರೆ. ಹಾಗಿದ್ದರೂ ಕಾನೂನು ಉಲ್ಲಂಘಿಸಿ ಏಳೆಂಟು ಬಾರಿ ವಿದೇಶಕ್ಕೆ ಹೋಗಿ ಬಂದಿದ್ದಾರೆ ಎಂದರು. ಕೇಂದ್ರ ಸರ್ಕಾರ ನೀಡಿದ ಹಣವನ್ನು ರಾಜ್ಯ ಸರ್ಕಾರ ಪೂರ್ಣ ಬಳಕೆ ಮಾಡಿಕೊಳ್ಳುವಲ್ಲಿ ವಿಫಲ ವಾಗಿದೆ. ಮನ್ರೇಗಾ ಯೋಜನೆಯಡಿ ಭಾರೀ ಹಣ ದುರುಪಯೋಗ ಆಗಿರು ವುದರಿಂದ ರಾಜ್ಯಕ್ಕೆ ನೀಡಬೇಕಾದ ಪಾಲನ್ನು ಕೇಂದ್ರ ತಡೆ ಹಿಡಿದಿದೆ. ಬರ ಪರಿಹಾರ ಕಾಮಗಾರಿಗೆ ರಾಜ್ಯ ಸರ್ಕಾರ ಎಷ್ಟೇ ವೆಚ್ಚ ಮಾಡಿದರೂ ಕೇಂದ್ರ ಆ ಹಣವನ್ನು ನೀಡಲು ಸಿದ್ಧವಿದೆ. ಆದರೆ ಅದನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬಳಸಿಕೊಳ್ಳುವಲ್ಲಿ ವಿಫಲ ವಾಗಿದೆ ಎಂದರು. ತಿಲಕ ಇಡುವವ ರನ್ನು ಕಂಡರೆ ಭಯ ಎಂದು ಸಿದ್ದ ರಾಮಯ್ಯ ಹೇಳಿದ್ದಾರೆ, ಅವರು ಟಿಪ್ಪು ಭಕ್ತರು, ಅವರಿಗೆ ತಿಲಕ ಇಡುವವರನ್ನು ಕಂಡರೆ ಭಯವಾಗುವುದು ಸಹಜ ಎಂದು ಛೇಡಿಸಿದರು.

ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ಈ ಬಾರಿ ಗೆಲ್ಲುವುದಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಮೋದಿ ಅವರು ನಿನ್ನೆ ಆ ಕ್ಷೇತ್ರದಲ್ಲಿ ಕೈಗೊಂಡ ಚುನಾವಣಾ ರ್ಯಾಲಿಯಲ್ಲಿ ಖರ್ಗೆ ಹೆಸರು ಪ್ರಸ್ತಾಪಿಲಿಲ್ಲ.