ಸಾಧಕರಿಗೆ `ಕೆಂಪೇಗೌಡ ಸೇವಾ ಭೀಷ್ಮ’ ಪ್ರಶಸ್ತಿ ಪ್ರದಾನ

ಮೈಸೂರು, ಜೂ.28(ಆರ್‍ಕೆಬಿ)- ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಮೈಸೂರಿನ ಪರಿ ವರ್ತನಂ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕ ರಿಗೆ ಕೆಂಪೇಗೌಡ ಸೇವಾ ಭೀಷ್ಮ ಪ್ರಶಸ್ತಿ ಪ್ರದಾನ ಮಾಡ ಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯ ಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಸಾಮಾಜಿಕ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸಿದ ಸಿ.ಜಿ.ಗಂಗಾಧರ್, ಎ.ಎನ್.ರಾಮು, ವಿಜಯಕುಮಾರ್, ಆರ್.ರವಿ ಕುಮಾರ್, ಪ್ರಸನ್ನ ಲಕ್ಷಣ್, ಬಿ.ಇ.ಗಿರೀಶ್‍ಗೌಡ,

ರವಿ, ಎ.ಸತೀಶ್‍ಗೌಡ, ಹಾಗೂ ಚರಣ್‍ರಾಜ್ ಅವರಿಗೆ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಕೆಂಪೇಗೌಡ ಸೇವಾ ಭೀಷ್ಮ ಪ್ರಶಸ್ತಿ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಪುಷ್ಪ ಲತಾ ಜಗನ್ನಾಥ್, ಮೈಸೂರು ಸಂಸ್ಥಾನದ ಸರ್ವ ತೋಮುಖ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆ ಯರ್ ಶ್ರಮಿಸಿದಂತೆ, ಬೆಂಗಳೂರಿನ ಸರ್ವತೋ ಮುಖ ಅಭಿವೃದ್ಧಿಗೆ ನಾಡಪ್ರಭು ಕೆಂಪೇಗೌಡರು ಶ್ರಮಿಸಿದ್ದಾರೆ. ಹಾಗಾಗಿ ಇವರಿಬ್ಬರ ಹೆಸರುಗಳು ಇಂದಿಗೂ ರಾರಾಜಿಸುತ್ತಿವೆ ಎಂದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ರಾಜ್ಯದ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗಾಗಿ ಅಪಾರ ಶ್ರಮಿಸಿದ ಕೆಂಪೇಗೌಡರ ದೂರದೃಷ್ಟಿಯೇ ಬೆಂಗ ಳೂರು ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಬೆಳೆಯಲು ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಸಮಾಜ ಸೇವಕ ರಘುರಾಂ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಯಶಸ್ವಿನಿ ಸೋಮ ಶೇಖರ್, ಬಿಎಸ್‍ಪಿ ನಗರಾಧ್ಯಕ್ಷ ಬಸವರಾಜು, ಜೀವಧಾರಾ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಗಿರೀಶ್, ಜೆಡಿಎಸ್ ಮುಖಂಡ ಪ್ರದೀಪ್‍ಗೌಡ, ಯುವ ಮುಖಂಡ ವಿಕ್ರಂ ಐಯ್ಯಂಗಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.