ಸ್ವಾತಂತ್ರ್ಯ ಹೋರಾಟದ ವೇಳೆ ಬೇರ್ಪಟ್ಟ  ಕೇರಳ ದಂಪತಿ 72 ವರ್ಷಗಳ ಬಳಿಕ ಪುನರ್ಮಿಲನ!

ಕಣ್ಣೂರು: ಇದು ಬರೋಬ್ಬರಿ ಮುಕ್ಕಾಲು ಶತಮಾನದ ಬಳಿಕ ಒಂದಾದ ದಂಪತಿಯ ಅಪೂರ್ವ ಪುನರ್ಮಿಲನದ ಕಥೆ.

1946ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಕ್ಕೆ ಜೈಲು ಶಿಕ್ಷೆ ಅನುಭವಿಸಿದ್ದ ಇ.ಕೆ ನಾರಾಯಣ್ ಬರೋಬ್ಬರೀ 72 ವರ್ಷಗಳ ನಂತರ ತಮ್ಮ ಮೊದಲ ಪತ್ನಿಯನ್ನು ಭೇಟಿಯಾಗಿದ್ದಾರೆ. ನಾರಾಯಣ್ ನಂಬಿಯಾರ್ ಮತ್ತವರ ಪತ್ನಿ ಶಾರದಾ ದೇಶಕ್ಕಾಗಿ ತಮ್ಮ ಖಾಸಗಿ ಬದುಕನ್ನು ತ್ಯಾಗ ಮಾಡಿದ್ದರು. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ದಲ್ಲಿ ಧುಮುಕಿದ್ದ ನಂಬಿಯಾರ್ ಮದುವೆಯಾಗಿ 1 ವರ್ಷವಾಗುವಷ್ಟರಲ್ಲಿ ತಂದೆ ಜತೆ ಜೈಲು ಪಾಲಾಗಿದ್ದರು.

ಅದು 1946ರ ಸಮಯ. ದೇಶದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟ ಉತ್ತುಂಗದಲ್ಲಿತ್ತು, ಅದರ ಜತೆಗೆ ಊಳಿಗಮಾನ್ಯ ಪದ್ಧತಿಯ ವಿರುದ್ಧ ಸಹ ರೈತರು ಒಂದಾಗಿ ಹೋರಾಟ ಆರಂಭಿಸಿದ್ದರು. ಆಗಷ್ಟೇ ನಂಬಿಯಾರ್-ಶಾರದಾ ವಿವಾಹವಾಗಿತ್ತು. ಮದುವೆಯಾದಾಗ ನಂಬಿಯಾರ್‍ಗೆ 17 ವರ್ಷ ಮತ್ತು ಶಾರದಾಗೆ 13 ವರ್ಷ. ಎಳೆ ವಯಸ್ಸಿನ ದಂಪತಿ ಪರಸ್ಪರ ಮಾತಾಡಲು ಸಹ ಪ್ರಾರಂಭಿಸಿರಲಿಲ್ಲ. ಅಂದು 1946, ಡಿಸೆಂಬರ್ 30, ನಾರಾ ಯಣ್ ನಂಬಿಯಾರ್, ಅವರ ತಂದೆ ಥಲಿಯಾನ್ ರಾಮನ್ ನಂಬಿಯಾರ್ ಮತ್ತು ನೂರಾರು ಜನರು ಸ್ಥಳೀಯ ಭೂಮಾಲೀಕನ ವಿರುದ್ಧ ದಂಗೆದ್ದು, ಮರು ದಿನ ಆತನ ಮನೆಯ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರು. ಆದರೆ ಅದು ಕಾರ್ಯಗತವಾಗುವ ಮೊದಲೇ ಪೊಲೀಸರು ಸ್ಥಳಕ್ಕೆ ಬಂದು ಗುಂಡಿನ ದಾಳಿ ನಡೆಸಿದರು. ಘಟನೆಯಲ್ಲಿ 5 ಜನ ಕ್ರಾಂತಿಕಾರಿಗಳು ಸಾವನ್ನಪ್ಪಿ, ಅನೇಕರು ಗಾಯ ಗೊಂಡರು. ಅಲ್ಲಿಂದ ತಪ್ಪಿಸಿಕೊಂಡ ನಾರಾಯಣ್ ನಂಬಿಯಾರ್ ಮತ್ತ ವರ ತಂದೆ ಭೂಗತರಾದರು.

ಆದರೆ ಅವರು ಮನೆಯಲ್ಲೇ ಅಡಗಿ ಕುಳಿತಿದ್ದಾರೆ ಎಂದು ಕೊಂಡ ಪೊಲೀಸರು ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು ಮತ್ತು ಶಾರದಾ ಸಹಿತ ಅಲ್ಲಿದ್ದ ಮಹಿಳೆಯರಿಗೆ ಬೆದರಿಕೆ ಹಾಕಿದರು. ಹೀಗಾಗಿ ಮನೆಯವರು ಶಾರದಾಳನ್ನು ತವರಿಗೆ ಕಳುಹಿಸಿದರು. ಆಕೆಯ ಪತಿ ಮತ್ತು ಮಾವ ಬಂಧನಕ್ಕೊಳಗಾಗಿ ಜೈಲು ಸೇರಿದರು. ಪತಿಯ ಬಗ್ಗೆ ಶಾರದಾ ಮತ್ತವರ ತವರು ಮನೆಯವರಿಗೆ ಮಾಹಿತಿ ಸಿಗಲೇ ಇಲ್ಲ. ಆಕೆಯ ತವರು ಮನೆಯವರು ಬಲವಂತವಾಗಿ ಆಕೆಗೆ ಬೇರೊಂದು ಮದುವೆ ಮಾಡಿಸಿದರು. ಇತ್ತ ನಾರಾಯಣನ್ ಕೂಡ ಬೇರೊಂದು ಮದುವೆಯಾದರು.

ಒಂದು ದಿನ ಶಾರದಾ ಅವರ ಮಗ ಭಾರ್ಗವನ್ ಆಚಾನಕ್ ಆಗಿ ನಾರಾಯಣನ್ ಅವರ ಸಂಬಂಧಿಕರನ್ನು ಭೇಟಿಯಾದರು. ಮನೆ ಮನೆತನದ ಬಗ್ಗೆ ಮಾತನಾಡುತ್ತಿರುವಾಗ ಈ 2 ಕುಟುಂಬಗಳು ಪರಸ್ಪರ ಸಂಬಂಧ ಹೊಂದಿರುವ ವಿಷಯ ತಿಳಿಯಿತು. ಹಾಗಾಗಿ ತನ್ನ ಅಮ್ಮ ಮತ್ತು ಆಕೆಯ ಮೊದಲ ಪತಿ ಭೇಟಿ ಮಾಡಿಸಲು ಭಾರ್ಗವನ್ ಮುಂದಾದರು. ನಾರಾ ಯಣನ್ ತನ್ನ ಮೊದಲ ಪತ್ನಿ ಶಾರದಾಳನ್ನು ನೋಡಲಿ ಕ್ಕಾಗಿ ಭಾರ್ಗವನ್ ಮನೆಗೆ ಬಂದಿದ್ದರು. ಅವರ ಜೊತೆಗೆ ಸಂಬಂಧಿಕರು ಇದ್ದರು. ಮೊದಲು ನಾರಾಯ ಣನ್ ಅವರ ಜೊತೆ ಮಾತನಾಡಲು ಅಮ್ಮ ಹಿಂದೇಟು ಹಾಕಿದರು, ಆಮೇಲೆ ಒತ್ತಾಯ ಮಾಡಿ ಹೊರಗೆ ಕರೆ ತಂದೆ, ಭೇಟಿ ಮಾಡಿದಾಗ ಇಬ್ಬರು ಭಾವುಕರಾದರು.