ರಂಗ ಸಾಧಕಿ ಅನಿತಾ ಕಾರ್ಯಪ್ಪಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ

ಬೆಂಗಳೂರು,ಮಾ.9-ಕೊಡಗು ಜಿಲ್ಲೆಯ ರಂಗ ಭೂಮಿ ಸಾಧಕಿ ಶ್ರೀಮತಿ ಅನಿತಾ ಕಾರ್ಯಪ್ಪ ಅವರು ಭಾನುವಾರ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅವ ರಿಂದ `ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ ಸ್ವೀಕರಿಸಿದರು.

ಕೊಡಗಿನಲ್ಲಿ ಕನ್ನಡ ಮತ್ತು ಕೊಡವ ಭಾಷೆಯ ಬಾಂಧವ್ಯ ವೃದ್ಧಿಯ ಕೊಂಡಿಯಾಗಿ 40 ವರ್ಷಗಳ ರಂಗಭೂಮಿ ಸೇವೆಗೆ ಇವರು ಈ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. ಪ್ರಶಸ್ತಿ 25 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ಇವರು ಸೇರಿದಂತೆ ರಾಜ್ಯದ 22 ಜನ ಮಹಿಳಾ ಸಾಧಕಿಯರಿಗೆ ವಿಶ್ವ ಮಹಿಳಾ ದಿನಾಚರಣೆ ಸಂದರ್ಭ `ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ ನೀಡಿ, ಪುರಸ್ಕರಿಸಲಾಯಿತು. ಅನಿತಾ ಕಾರ್ಯಪ್ಪ ಅವರನ್ನು ಸಮಾರಂಭ ಮುಕ್ತಾಯದ ನಂತರ ಸಚಿವೆ ಶಶಿಕಲಾ ಜೊಲ್ಲೆ ಆತ್ಮೀಯವಾಗಿ ಅಭಿನಂದಿಸಿದರು. ಶ್ರೀಮತಿ ಅನಿತಾ ಅವರು ಹಿರಿಯ ರಂಗಕರ್ಮಿ ಹಾಗೂ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರ ಪತ್ನಿ.