ಮೈಸೂರು ಕೊಡವ ಸಮಾಜದಲ್ಲಿ `ಕೊಡಗ್‍ರ ಸಿಪಾಯಿ’ ಚಿತ್ರ ಪ್ರದರ್ಶನ

ಮೈಸೂರು,ಅ.26(ವೈಡಿಎಸ್)- ವಿಜಯ ನಗರ 1ನೇ ಹಂತದಲ್ಲಿರುವ ಕೊಡವ ಸಮಾಜದಲ್ಲಿ ಕೊಡವ ಭಾಷೆಯ `ಕೊಡಗ್‍ರ ಸಿಪಾಯಿ’ ಚಲನಚಿತ್ರ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಕೂರ್ಗ್ ಕಾಫಿ ವುಡ್ ಮೂವೀಸ್‍ರವರ ಕೊಟ್ಟುಕತ್ತಿರ ಪ್ರಕಾಶ್ ಕಾರಿಯಪ್ಪರವರ ನಿರ್ದೆಶನದಲ್ಲಿ ಕೊಡವ ಭಾಷೆಯಲ್ಲಿ ಮೂಡಿ ಬಂದಿರುವ `ಕೊಡಗ್‍ರ ಸಿಪಾಯಿ’ ಚಿತ್ರವು ಶನಿವಾರ 2 ಪ್ರದರ್ಶನಗೊಂಡು ಜನರಿಂದ ಮೆಚ್ಚುಗೆ ಗಳಿಸಿತು.

ಸಿನಿಮಾ ಕಥೆ: ಸೇನೆಯಿಂದ ನಿವೃತ್ತಿ ಯಾದ ಸೈನಿಕನೊಬ್ಬ ಮರಳಿ ಮನೆಗೆ ತೆರಳಿ ದಾಗ ಮುಂದೇನು ಮಾಡುವುದೆಂದು ಆಲೋಚಿಸುತ್ತಿರುತ್ತಾನೆ. ಇದನ್ನು ಎಳೆ ಯನ್ನಾಗಿಟ್ಟುಕೊಂಡು ಉತ್ತಮ ಸಿನಿಮಾ ನಿರ್ಮಿಸುವಲ್ಲಿ ಕೊಟ್ಟುಕತ್ತಿರ ಪ್ರಕಾಶ್ ಕಾರಿಯಪ್ಪ ಯಶಸ್ವಿಯಾಗಿದ್ದಾರೆ.

ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು, ಅವು ಗಳ ಉಳಿವಿನ ಪ್ರಯತ್ನ, ಹೋಂ ಸ್ಟೇ ವ್ಯವಸ್ಥೆ ಯಲ್ಲಿನ ಸವಾಲುಗಳು. ತನ್ನಿಂದ ಇನ್ನೊ ಬ್ಬರಿಗೆ ಸಹಾಯವಾಗಬೇಕೆಂಬ ಮಾಜಿ ಸೈನಿ ಕನ ಕಳಕಳಿ ಮತ್ತಿತರೆ ಸನ್ನಿವೇಶಗಳನ್ನು ಕುರಿತು ಬೆಳಕು ಚೆಲ್ಲಲಾಗಿದ್ದು, ಇದೊಂದು ಕಾದಂಬರಿ ಆಧಾರಿತ ಚಿತ್ರವಾಗಿದೆ.

ಉತ್ತಮ ಪ್ರತಿಕ್ರಿಯೆ: ಚಿತ್ರದಲ್ಲಿ ಅಂತಾ ರಾಷ್ಟ್ರೀಯ ಅಥ್ಲೀಟ್, ಏಕಲವ್ಯ ಪ್ರಶಸ್ತಿ ಪುರ ಸ್ಕೃತ ತೀತಮಾಡ ಅರ್ಜುನ್ ದೇವಯ್ಯ ಅವರು ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದು, ನಾಯಕಿಯಾಗಿ ರೂಪದರ್ಶಿ ತೇಜಸ್ವಿನಿ ಶರ್ಮಾ ಅಭಿನಯಿಸಿದ್ದಾರೆ. ಇಬ್ಬರ ನಟನೆಯೂ ಉತ್ತಮವಾಗಿ ಮೂಡಿಬಂದಿದೆ. ಚಿತ್ರ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಸಭಾಂಗಣ ಭರ್ತಿಯಾಗಿತ್ತು.

ವೇದಿಕೆ ಕಾರ್ಯಕ್ರಮ: ಮೊದಲ ಪ್ರದರ್ಶ ನದ ನಂತರ ನಡೆದ ವೇದಿಕೆ ಕಾರ್ಯಕ್ರಮ ದಲ್ಲಿ `ಕೊಡಗ್‍ರ ಸಿಪಾಯಿ’ ಚಿತ್ರ ತಂಡ ವನ್ನು ಅಭಿನಂದಿಸಲಾಯಿತು. ಈ ವೇಳೆ `ಸ್ಟಾರ್ ಆಫ್ ಮೈಸೂರ್’ ಹಾಗೂ `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಮಾತನಾಡಿ, ಕೊಡವ ಭಾಷೆಯ `ಕೊಡಗ್‍ರ ಸಿಪಾಯಿ’ ಸಿನಿಮಾ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗಿರುವುದು ಸಂತೋಷ ತಂದಿದೆ. ಇದಕ್ಕೆ ಪ್ರಶಸ್ತಿ ಲಭಿ ಸಲಿ ಎಂದು ಹಾರೈಸಿದರು.

ನಟ ಅರ್ಜುನ್ ದೇವಯ್ಯ ಮಾತನಾಡಿ, ಸಿನಿಮಾದಲ್ಲಿ ಬರುವ ಉತ್ತಮ ವಿಚಾರ ಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳ ಬೇಕು. ಹಾಗೆಯೇ ಏನಾದರೂ ಲೋಪ ದೋಷಗಳಿದ್ದರೆ ಚಿತ್ರ ಮುಗಿದ ನಂತರ ನನಗೆ ತಿಳಿಸುವಂತೆ ಮನವಿ ಮಾಡಿದ ಅವರು, ಚಿತ್ರ ತಂಡವನ್ನು ಪರಿಚಯಿಸಿದರು.

ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರಿ ಯಪ್ಪ ಮಾತನಾಡಿ, ನಿಮ್ಮೆಲ್ಲರ ಸಹಕಾರ ದಿಂದ `ಕೊಡಗ್‍ರ ಸಿಪಾಯಿ’ ಸಿನಿಮಾ 50ನೇ ಪ್ರದರ್ಶನ ಕಾಣುತ್ತಿದ್ದು, ಈ ಸಿನಿಮಾ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‍ಗೆ ಆಯ್ಕೆ ಯಾಗಿರುವುದು ಸಂತೋಷ ತಂದಿದೆ ಎಂದರು. ಇದೇ ವೇಳೆ ನಿರ್ದೇಶಕ ಕೊಟ್ಟು ಕತ್ತಿರ ಪ್ರಕಾಶ್ ಕಾರಿಯಪ್ಪ ಅವರು ನಟ ಅರ್ಜುನ್ ದೇವಯ್ಯ ಅವರಿಗೆ ಕೊಡಗಿನ ಸಾಂಪ್ರದಾಯಿಕ ಆಭರಣವಾದ ಪೀಚೆಕತ್ತಿ ಯನ್ನು ನೀಡಿದರು. ಮೈಸೂರು ಕೊಡವ ಸಮಾಜ ಅಧ್ಯಕ್ಷ ಕೇಕಡ ಬೆಳ್ಳಿಯಪ್ಪ, ಮಾಜಿ ಅಧ್ಯಕ್ಷ ಡಾ.ಅದೆಂಗಡ ಕುಟ್ಟಪ್ಪ, ವಿರಾಜ ಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ವಿಠಲ್ ನಾಣಯ್ಯ, ಕೊಡಗು ಪತ್ರಕರ್ತರ ಭವನದ ಅಧ್ಯಕ್ಷ ರಮೇಶ್ ಕುಟ್ಟಪ್ಪ, ಕೊಡವ ಮಕ್ಕಳ ಕೂಟದ ಅಧ್ಯಕ್ಷ ಬೊಳ್ಳ್ಳಜಿರ ಅಯ್ಯಪ್ಪ, ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ನಾಣಯ್ಯ ಇತರರು ಉಪಸ್ಥಿತರಿದ್ದರು.