ರಾಜಕೀಯ ರಹಿತವಾಗಿ ಕೊಡವ ಸಮಾಜಗಳ ಕರ್ತವ್ಯ ನಿರ್ವಹಣೆ ಅಗತ್ಯ

ವಿರಾಜಪೇಟೆ: ಕೊಡವ ಸಂಸ್ಕøತಿ ಅಚಾರ ವಿಚಾರ ವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲಾ ಕೊಡವ ಸಮಾಜಗಳು ರಾಜಕೀಯ ರಹಿತವಾಗಿ ಕೆಲಸ ಮಾಡಬೇಕಾಗಿದೆ ಎಂದು ಮಾಜಿ ಕಾನೂನು ಸಚಿವ ಮೇರಿಯಂಡ ಸಿ.ನಾಣಯ್ಯ ಹೇಳಿದರು.

ವಿರಾಜಪೇಟೆ ಕೊಡವ ಸಮಾಜದಲ್ಲಿ ‘ಬೆಂದು-ಬಿಡಾರ’ ವನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಬಳಿಕ ಸಭಾ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಕೊಡವ ಸಮಾಜಗಳ ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕಿಯವನ್ನು ಬದಿಗೊತ್ತಿ ಕೆಲಸ ಮಾಡಬೇಕು. ಹಾಗೂ ಶಿಕ್ಷಣ ಮತ್ತು ಇತರ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಒಗ್ಗಟ್ಟಿನಿಂದ ಕೊಡವ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುವಂತಾಗಬೇಕು. ಹಿಂದೆ ಹಿರಿಯರು ಮಾಡಿದಂತ ಭೂಮಿಯನ್ನು ಯಾರು ಮಾರಾಟ ಮಾಡದೆ ಕೃಷಿಯನ್ನು ಬೆಳೆಯುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವಂತೆ ತಿಳಿ ಹೇಳಿದರು.
ಅತಿಥಿಯಾಗಿ ಭಾಗವಹಿಸಿದ್ದ ಕದ್ದಣಿಯಂಡ ಹರೀಶ್ ಬೋಪಣ್ಣ ‘ತೊರ್‍ಂದ ಮನೆ’ ಉದ್ಘಾಟಿಸಿ ಮಾತನಾಡಿ, ಕೊಡಗಿನವರು ಎಲ್ಲೇ ಇರಲಿ, ಹೇಗೆ ಇದ್ದರು ಕೊಡಗನ್ನು ಮರೆಯಬಾರದು. ಕೊಡವ ಸಮಾಜಗಳು ಶಿಕ್ಷಣ ಮತ್ತು ಕ್ರೀಡೆಗಳಿಗೆ ಫಂಡ್‍ನ್ನು ಇಟ್ಟು ವಿದ್ಯಾರ್ಥಿ ಗಳ ಕ್ರೀಡೆ ಇತರ ಚಟುವಟಿಕೆಗಳಿಗೆ ಬಳಸಬೇಕು. ಸಮಾಜ ಉತ್ತಮ ಕಾರ್ಯಗಳನ್ನು ಒಗ್ಗಟ್ಟಿನಿಂದ ಮಾಡಬೇಕಾಗಿದೆ. ಕೊಡಗಿನವರು ಭೂಮಿ ಯನ್ನು ಮಾರಾಟ ಮಾಡಬಾರದು ಕೊಡಗಿನಲ್ಲಿಯೇ ಇದ್ದು ಯುವ ಕರು ತಮ್ಮ ಆಸ್ತಿಯನ್ನು ಅಭಿವೃದ್ಧಿಗೊಳಿಸುವಂತಾಗಬೇಕು.

ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ಟಿ.ನಾಣಯ್ಯ (ವಿಠಲ) ಸಮಾರಂಭದ ಅಧ್ಯಕ್ಷತೆ ವಹಿಸಿ ಕೊಡವ ಸಮಾಜ ನಡೆದುಬಂದ ದಾರಿಯ ಬಗ್ಗೆ ವಿವರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಹ್ಮಣಿ ‘ಪೆದ ಬೋರ್ಡ್’ ಉದ್ಘಾಟಿಸಿ ಮಾತನಾಡಿ, ಎಲ್ಲಾ ಕೊಡವ ಸಮಾಜಗಳಲ್ಲಿಯು ವಿದ್ಯಾ ಸಂಸ್ಥೆಗಳು ಇರಬೇಕು. ಅಭಿವೃದ್ಧಿ ಕೆಲಸಗಳಲ್ಲಿ ರಾಜ ಕೀಯವನ್ನು ಬೆರೆಸಬಾರದು. ಕೊಡವ ಸಮಾಜಗಳು ಬೆಳೆಯಲು ಎಲ್ಲರ ಸಹಕಾರ ಅಗತ್ಯ ಎಂದರಲ್ಲದೆ, ಜಿಲ್ಲಾ ಪಂಚಾಯಿತಿ ಯಿಂದ ಸಮಾಜಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ದಾನಿಗಳಾದ ಮುಕ್ಕಾಟ್ಟಿರ ರಾಜ ಮಂದಪ್ಪ ಅವರು ಕೊಡವ ಸಮಾಜಗಳು ಅಭಿವೃದ್ಧಿಯತ್ತ ಸಾಗು ವಂತೆ ಶುಭ ಹಾರೈಸಿದರು. ಕಾರ್ಯದರ್ಶಿ ಕುಲ್ಲಚಂಡ ಜಯ ಪೂಣಚ್ಚ ಮಾತನಾಡಿದರು. ಸಮಾರಂಭದಲ್ಲಿ ‘ಯೂರೋಪ್ ಮೌಂಟ್ ಎಲ್ಬ್ರೆಸ್ ಹತ್ತಿದ ಸಾಹಸಿ ತೆಕ್ಕಡ ಭವಾನಿ ನಂಜುಂಡ, ಕಾರ್ಪೋರೇಟ್ ಕೋವುಲ್ ಅಂತರಾಷ್ಟ್ರೀಯ ್ರಮಟ್ಟದಲ್ಲಿ ಹೆಸರು ಪಡೆದ ಪುಗ್ಗೆರ ದಿನೇಶ್ ದೇವಯ್ಯ , ಏಕಲವ್ಯ ಪ್ರಶಸ್ತಿ ಪಡೆದ ಅಂತರಾಷ್ಟ್ರೀಯ ಹಾಕಿ ಆಟಗಾರ ಮೇಕೇರಿರ ನಿತಿನ್ ತಿಮ್ಮಯ್ಯ ಅವರುಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು. ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಸ್ವಾಗತಿ ಸಿದರು. ತಾತಂಡ ಪ್ರಭ ನಾಣಯ್ಯ ಮತ್ತು ಬೋವೆರಂಡ ಆಶಾ ಸುಬ್ಬಯ್ಯ ನಿರೂಪಿಸಿದರೆ, ಮೇವಡ ಚಿಣ್ಣಪ್ಪ ವಂದಿಸಿದರು.