ಆ.15ರಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಕೆಎಸ್‍ಆರ್‍ಟಿಸಿ ವೋಲ್ವೋ ಬಸ್ ಸೇವೆ

ಮೈಸೂರು,ಜು.28(ಆರ್‍ಕೆ)-ಪ್ರತಿ ನಿತ್ಯ ಹಲವು ವಿಮಾನಗಳ ಹಾರಾಟ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರಯಾ ಣಿಕರಿಗೆ ಅನುಕೂಲವಾಗಲೆಂದು ಆಗಸ್ಟ್ 15ರಿಂದ ಮೈಸೂರು ನಗರದಿಂದ ಮಂಡ ಕಳ್ಳಿ ವಿಮಾನ ನಿಲ್ದಾಣಕ್ಕೆ ಕೆಎಸ್‍ಆರ್‍ಟಿಸಿ ವೋಲ್ವೋ ಬಸ್ ಸೇವೆ ಆರಂಭವಾಗಲಿದೆ.

ಬೆಂಗಳೂರು ನಗರದ ವಿವಿಧ ಸ್ಥಳ ಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಎಂಟಿಸಿಯು `ವಾಯು ವಜ್ರ’ ಹೆಸರಿನ ವೋಲ್ವೋ ಎಸಿ ಬಸ್ಸುಗಳನ್ನು ಓಡಿಸುವುದರ ಜೊತೆಗೆ ಮೈಸೂರು ನಗರದ ವಿವಿಧ ಭಾಗ ಗಳಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವೋಲ್ವೋ ಎಸಿ ಬಸ್ಸುಗಳ ಸೌಲಭ್ಯ ಕಲ್ಪಿಸಲು ಕೆಎಸ್‍ಆರ್‍ಟಿಸಿ ನಗರ ಸಾರಿಗೆ ವಿಭಾಗವು ಮುಂದಾಗಿದೆ.

ಈ ಸಂಬಂಧ `ಮೈಸೂರುಮಿತ್ರ’ನಿಗೆ ಮಾಹಿತಿ ನೀಡಿದ ಕೆಎಸ್‍ಆರ್‍ಟಿಸಿ ಮೈಸೂರು ನಗರ ವಿಭಾಗದ ವಿಭಾ ಗೀಯ ನಿಯಂತ್ರಕ ಕೆ.ವಿ.ಮಂಜುನಾಥ ಅವರು, ವಿಮಾನದಲ್ಲಿ ಪ್ರಯಾಣಿಸುವವರ ಅನುಕೂಲಕ್ಕಾಗಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಸಂಸ್ಥೆ ಮುಂದಾಗಿದೆ ಎಂದರು.

ಉಡಾನ್ ಯೋಜನೆಯಡಿ ಮೈಸೂ ರಿನಿಂದ ಬೆಂಗಳೂರು, ಚೆನ್ನೈ, ಕೊಚ್ಚಿ, ಹೈದರಾಬಾದ್ ಮತ್ತು ಗೋವಾ ನಗರ ಗಳಿಗೆ ವಿಮಾನ ಹಾರಾಟದ ವ್ಯವಸ್ಥೆ ಕಲ್ಪಿ ಸಲು ಮುಂದಾಗಿದ್ದು, ವಿಮಾನಗಳು ಆಗ ಮಿಸುವ ವೇಳೆ ಮತ್ತು ಹೊರಡುವ ವೇಳೆ ಗಿಂತ ಒಂದು ತಾಸು ಮುಂಚಿತವಾಗಿ (ಚೆಕ್ ಇನ್ ಪ್ರಕ್ರಿಯೆ ಇರುವುದರಿಂದ) ಮೈಸೂ ರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಸ್ಸುಗಳು ತೆರಳಲು ವೇಳಾಪಟ್ಟಿಯನ್ನು ನಿಗದಿಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಪ್ರಯಾಣಿಕರು ಮೈಸೂರು ನಗ ರದ ಹೋಟೆಲ್ ರ್ಯಾಡಿಸನ್ ಬ್ಲೂ, ಸದ ರನ್ ಸ್ಟಾರ್, ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಸೇರಿದಂತೆ ವಿವಿಧ ಭಾಗಗಳಿಂದ ಟ್ಯಾಕ್ಸಿಗಳಲ್ಲಿ ಮಂಡಕಳ್ಳಿ ವಿಮಾನ ನಿಲ್ದಾ ಣಕ್ಕೆ ಹೋಗುತ್ತಿದ್ದರೆ, ನಂಜನಗೂಡು ರಸ್ತೆ ಯಲ್ಲಿ ಸಂಚರಿಸುವ ಸಾರಿಗೆ ಬಸ್ಸುಗಳು ವಿಮಾನ ನಿಲ್ದಾಣ ಬಳಿ ನಿಲುಗಡೆ ಕೊಡು ತ್ತಿದ್ದವು. ಹೆಬ್ಬಾಳಿನ ಇನ್‍ಫೋಸಿಸ್, ವಿಪ್ರೋ ಸೇರಿದಂತೆ ಇನ್ನಿತರ ಐಟಿಬಿಟಿ ಕಂಪನಿಗಳಿಂದ ವಿಮಾನ ಪ್ರಯಾಣಿಕರು ಹೆಚ್ಚಾಗಿರುವುದರಿಂದ ಕೆಎಸ್‍ಆರ್‍ಟಿಸಿ ಸೇವೆ ಯನ್ನು ಹೆಬ್ಬಾಳು ಕೈಗಾರಿಕಾ ಬಡಾ ವಣೆಯಿಂದಲೂ ಒದಗಿಸಲಾಗುವುದು ಎಂದು ಮಂಜುನಾಥ್ ತಿಳಿಸಿದ್ದಾರೆ.

ಮೈಸೂರು ನಗರ ಮತ್ತು ಮಂಡಕಳ್ಳಿ ವಿಮಾನ ನಿಲ್ದಾಣದ ನಡುವೆ 20 ಕಿ.ಮೀ ಅಂತರ (ಹೆಬ್ಬಾಳು ಕೈಗಾರಿಕಾ ಪ್ರದೇಶದಿಂದ ಮಾರ್ಗ ಸಿದ್ಧಪಡಿಸಿದಲ್ಲಿ) ಎಂಬುದನ್ನು ಗಮನದಲ್ಲಿರಿಸಿಕೊಂಡು ಒಂದು ಕಡೆ ಯಿಂದ ಒಬ್ಬರಿಗೆ 150 ರೂ. ಪ್ರಯಾಣ ದರ ನಿಗದಿ ಪಡಿಸಲು ಚಿಂತನೆ ನಡೆಸಲಾಗಿದ್ದು, ಮಾರ್ಗಮಧ್ಯೆ ಎಲ್ಲಿ ಇಳಿದು ಕೊಂಡರೂ 100 ರೂ. ಪಾವತಿಸಬೇಕಾಗುತ್ತದೆ ಎಂದೂ ಅವರು ತಿಳಿಸಿದರು.

42 ಆಸನಗಳ ಕೆಎಸ್‍ಆರ್‍ಟಿಸಿ ವೋಲ್ವೋ ಬಸ್‍ನಲ್ಲಿ ಶೇ.50ರಷ್ಟು ಅಂದರೆ 20 ರಿಂದ 25 ಮಂದಿ ಪ್ರಯಾಣಿಸಿದರೂ ಸಹಸಂಸ್ಥೆಗೆ ನಷ್ಟವಾಗುವುದಿಲ್ಲ. ಮುಂದೆ ವಿಮಾನಗಳ ಹಾರಾಟ ಸಂಖ್ಯೆ ಹೆಚ್ಚಿದಲ್ಲಿ ಬಸ್ಸಿನ ಬಹುತೇಕ ಆಸನಗಳು ಭರ್ತಿ ಯಾಗಬಹುದೆಂದು ನಿರೀಕ್ಷಿಸಲಾಗಿದೆ.

ಮೈಸೂರಿನ ಹೆಬ್ಬಾಳು, ಚಾಮುಂಡಿ ಬೆಟ್ಟ, ಕೆ.ಆರ್‍ಎಸ್ ಸೇರಿದಂತೆ ಹಲವು ಸ್ಥಳಗಳಿಗೆ 36 ವೋಲ್ವೋ ಬಸ್ಸುಗಳು ಸಂಚ ರಿಸುತ್ತಿದೆ. ಇದೀಗ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೂ ಸೇವೆಯನ್ನು ವಿಸ್ತರಿಸಲಾಗು ತ್ತಿದ್ದು, ಅದಕ್ಕಾಗಿ ಎಷ್ಟು ಮಂದಿ ಪ್ರಯಾ ಣಿಕರು ಲಭ್ಯವಿದ್ದಾರೆ ಎಂಬುದನ್ನು ತಿಳಿ ಯಲು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಮಂಜುನಾಥ ತಿಳಿಸಿದರು.

ಬೆಂಗಳೂರಿನಲ್ಲಿ `ವಾಯು ವಜ್ರ’ದಂತೆ ಮೈಸೂರಲ್ಲಿ ವಿಮಾನ ನಿಲ್ದಾಣ ನಡುವೆ ಸಂಚರಿಸುವ ವೋಲ್ವೋ ಬಸ್ಸುಗಳ ಕಾರ್ಯಾ ಚರಣೆಗೆ ಸೂಕ್ತ ಹೆಸರಿಡಲು ಪ್ರಯತ್ನಿ ಸುತ್ತಿರುವುದಾಗಿಯೂ ಅವರು ತಿಳಿಸಿದರು.