ಕಾಂಗ್ರೆಸ್‍ನಿಂದ ಕುರುಬ ಸಮುದಾಯ ಕಡಗಣನೆ: ಆರೋಪ

ತಿ.ನರಸೀಪುರ: ಲೋಕಸಭಾ ಚುನಾವಣೆಯಲ್ಲಿ ತಿ.ನರಸೀ ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುರುಬ ಸಮುದಾಯವನ್ನು ಕಡೆಗಣಿಸ ಲಾಗುತ್ತಿದ್ದು, ನಿರ್ಲಕ್ಷ್ಯದ ಭಾವನೆ ಹೀಗೆ ಮುಂದುವರೆದರೆ ಇನ್ನೆರಡು ದಿನಗಳಲ್ಲಿ ಚುನಾವಣೆಯಿಂದ ಸಮಸ್ತ ಸಮುದಾಯದ ಜನರು ತಟಸ್ಥರಾಗಬೇಕಾಗುತ್ತದೆ ಎಂದು ತಾಲೂಕು ಕುರುಬರ ಸಂಘದ ಗೌರವಾ ಧ್ಯಕ್ಷರೂ ಆದ ತಾಪಂ ಮಾಜಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನಸ್ವಾಮಿ ಎಚ್ಚರಿಸಿದರು.

ಪಟ್ಟಣದ ಎಂ.ಮರೀಗೌಡ ಸ್ಮಾರಕ ಸಮು ದಾಯ ಭವನದಲ್ಲಿ ನಡೆದ ತಾಲೂಕಿನ ಕುರುಬ ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಲೋಕ ಸಭಾ ಚುನಾವಣೆಯ ಪ್ರಚಾರ ಎಲ್ಲೆಡೆ ಬಿರುಸಿ ನಿಂದ ನಡೆಯುತ್ತಿದೆ. ಚುನಾವಣೆ ಪ್ರಕ್ರಿಯೆ ಆರಂಭಗೊಂಡು ಮತದಾನ ಸಮೀಪಿಸುತ್ತಿ ದ್ದರೂ ತಾಲೂಕಿನಲ್ಲಿ ಕುರುಬ ಸಮುದಾಯ ಮುಖಂಡರನ್ನು ಸೌಜನ್ಯಕ್ಕೂ ಸಭೆ, ಸಮಾರಂಭ, ಪ್ರಚಾರಕ್ಕೂ ಕರೆಯುತ್ತಿಲ್ಲ. ಎಂದು ವಿಷಾದಿಸಿ ದರು. ಮೈತ್ರಿ ಅಭ್ಯರ್ಥಿ ಆರ್.ಧ್ರುವನಾರಾ ಯಣ್ ಜೆಡಿಎಸ್ ಶಾಸಕರ ಜೊತೆ ಚುನಾ ವಣಾ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್‍ನ ಸಮ್ಮಿಶ್ರ ಸರ್ಕಾರ ವಿದ್ದರೂ ಇಲ್ಲಿನ ಯಾವೊಬ್ಬ ಮುಖಂಡರಿಗೂ ಯಾವುದೇ ಸ್ಥಾನ-ಮಾನ ನೀಡದೆ ಕಡೆಗಣಿಸಲಾಗಿದೆ ಎಂದು ದೂರಿದರು.

ಗ್ರಾಪಂ ಮಾಜಿ ಅಧ್ಯಕ್ಷ ವಾಟಾಳು ನಾಗೇಶ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ನರಸೀಪುರ ಕ್ಷೇತ್ರದಲ್ಲಿ ವಿಚಾರ ಗಳನ್ನು ಗಮನಿಸಿ ಸ್ಪಷ್ಟ ಸೂಚನೆ ನೀಡಬೇಕು. ಇಲ್ಲದಿದ್ದರೆ ಏ.17 ಸಭೆ ನಡೆಸಿ, ಚುನಾವಣೆಯ ವಿರುದ್ಧ ಕಠಿಣ ನಿಲುವು ತಾಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪುರಸಭಾ ಸದಸ್ಯ ಬಾದಾಮಿ ಮಂಜು, ಪಪಂ ಮಾಜಿ ಅಧ್ಯಕ್ಷ ಎನ್.ಮಹದೇವ ಸ್ವಾಮಿ, ತಲಕಾಡು ಗ್ರಾಪಂ ಉಪಾಧ್ಯಕ್ಷ ದೊಡ್ಡಮಲ್ಲೇಗೌಡ, ಸದಸ್ಯ ಶಿವಮೂರ್ತಿ, ಮಾಜಿ ಅಧ್ಯಕ್ಷರಾದ ಅಕ್ಕೂರು ಗುರು ಮೂರ್ತಿ, ಮಾದಾಪುರ ನಂಜುಂಡ ಸ್ವಾಮಿ, ಅಶೋಕ, ಮುಖಂಡರಾದ ಷಡಕ್ಷರಿ, ಪುಳ್ಳಾರಿ ಮಾದೇಶ, ಗುರುಮಲ್ಲಪ್ಪ, ಜೆ.ಅನೂಪ್‍ಗೌಡ, ಸೋಮು, ಬನ್ನೂರು ದೊರೆಸ್ವಾಮಿ, ಅಂಕನಹಳ್ಳಿ ನಿಂಗಣ್ಣ, ಮುದ್ದೇಗೌಡ, ಮುಸುವಿನಕೊಪ್ಪಲು ಮಹೇವಣ್ಣ, ಕೋಣಗಹಳ್ಳಿ ನಾಗರಾಜು, ಮಹದೇವಸ್ವಾಮಿ ಇನ್ನಿತರರಿದ್ದರು.