ಕುಶಾಲನಗರ: ಶ್ರದ್ಧಾಭಕ್ತಿಯ ವೈಕುಂಠ ಏಕಾದಶಿ

ಕುಶಾಲನಗರ, ಜ.6- ನಗರದ ರಥ ಬೀದಿಯಲ್ಲಿರುವ ಶ್ರೀಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈಕುಂಠ ಏಕಾದಶಿ ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ಆರ್ಯವೈಶ್ಯ ಮಂಡಳಿಯಿಂದ ನಡೆದ ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಭಕ್ತರು ಪಾಲ್ಗೊಂಡು ಶ್ರೀನಿವಾಸನ ದರ್ಶನ ಪಡೆದು ಪುನೀತರಾದರು.

ಬೆಳಿಗ್ಗೆ 7.30ಕ್ಕೆ ಮಹಾಸಂಕಲ್ಪದೊಂ ದಿಗೆ ಪೂಜಾ ಕೈಂಕರ್ಯಗಳು ಆರಂಭ ಗೊಂಡವರು. ಅರ್ಚಕ ಪ್ರಮೋದ್ ಭಟ್ ನೇತೃತ್ವದ ತಂಡದಿಂದ ಪೂಜಾ ವಿಧಿಗಳು ನೆರವೇರಿದವು. ಪಂಚಾಮೃತ ಅಭಿಷೇಕ, ಮಹಾಮಂಗಳಾರತಿಯೊಂದಿಗೆ ಮಧ್ಯಾಹ್ನ 12.30ಕ್ಕೆ ಸ್ವರ್ಗದ ಬಾಗಿಲು ಅನಾವರಣ ಗೊಳಿಸಲಾಯಿತು. ದೇವಾಲಯ ಆವರಣ ದಲ್ಲಿ ನಿರ್ಮಿಸಿದ್ದ ಏಳು ದ್ವಾರಗಳ ಮೂಲಕ ಸರದಿ ಸಾಲಿನಲ್ಲಿ ಆಗಮಿಸಿದ ಭಕ್ತರು ದೇವಾ ಲಯದೊಳಗೆ ವೈಕುಂಠ ದ್ವಾರದಲ್ಲಿ ಅಳವಡಿ ಸಿದ್ದ ಶ್ರೀನಿವಾಸ, ಪದ್ಮಾವತಿ, ಅಲ ಮೇಲಮ್ಮ ದೇವರ ಮೂರ್ತಿಗಳ ದರ್ಶನ ಪಡೆದರು. ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವಿ.ಪಿ. ನಾಗೇಶ್ ಮಾತನಾಡಿ, ಕುಶಾಲನಗರದ ಗೋಲ್ಡನ್ ಟೆಂಪಲ್ ಎಂದು ಖ್ಯಾತಿ ಪಡೆ ದಿರುವ ಶ್ರೀಕನ್ನಿಕಾ ಪರಮೇಶ್ವರಿ ದೇವಾ ಲಯದಲ್ಲಿ ಹಲವು ವರ್ಷಗಳಿಂದ ನಿರಂ ತರವಾಗಿ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗು ತ್ತಿದೆ. ದೇವಾಲಯಕ್ಕೆ ಆಗಮಿಸುವ ಭಕ್ತಾದಿ ಗಳಿಗೆ ಶ್ರೀನಿವಾಸನ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಆರ್ಯವೈಶ್ಯ ಮಂಡಳಿ ಪ್ರಮುಖರಾದ ಎಸ್.ಎನ್.ನರಸಿಂಹ ಮೂರ್ತಿ, ವಿ.ಎನ್.ವಸಂತಕುಮಾರ್, ಸತ್ಯ ನಾರಾಯಣ, ವಿ.ಆರ್.ಮಂಜುನಾಥ್ ಸೇರಿ ದಂತೆ ಮಂಡಳಿಯ ಪದಾಧಿಕಾರಿಗಳು ಇದ್ದರು.