30 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಗುದ್ದಲಿಪೂಜೆ

ಮೈಸೂರು, ಫೆ.2(ಪಿಎಂ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು.

ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್ ಜಂಕ್ಷನ್‍ನಿಂದ ಕಲಾಮಂದಿರ ಬಳಿಯ ಹುಣಸೂರು ರಸ್ತೆ ಜಂಕ್ಷನ್‍ವರೆಗಿನ (ರಂಗಾಯಣ) ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಎಸ್‍ಎಫ್‍ಸಿ (ರಾಜ್ಯ ಹಣಕಾಸು ಆಯೋಗ) ಅನುದಾನದ 20 ಲಕ್ಷ ರೂ. ವೆಚ್ಚದಲ್ಲಿ 350 ಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಇದಾಗಿದೆ. ಬಳಿಕ ಸರಸ್ವತಿಪುರಂನ ಸಿಗ್ಮಾ ಆಸ್ಪತ್ರೆ ಎದುರು 10 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೂ ಶಾಸ ಕರು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭ ಪಾಲಿಕೆ ಸದಸ್ಯೆ ವೇದಾ ವತಿ, ಮುಖಂಡರಾದ ಶಿವಶಂಕರ್, ರಮೇಶ್, ಶಿವಣ್ಣ, ಗೋಪಾಲ್, ಸೋಮಶೇಖರ್ ರಾಜೇ ಅರಸ್, ಗುತ್ತಿಗೆದಾರ ಮಹದೇವು, ಪಾಲಿಕೆ ಇಂಜಿನಿಯರ್‍ಗಳಾದ ಕೆ.ಆರ್. ಚಂದ್ರಶೇಖರ್, ಗುರುಸಿದ್ದಯ್ಯ, ವಲಯ ಕಚೇರಿ 4ರ ಅಭಿವೃದ್ಧಿ ಅಧಿಕಾರಿ ಸುನೀಲ್ ಮತ್ತಿತರರು ಹಾಜರಿದ್ದರು.