ಆರಂಭಗೊಂಡಿದೆ ಸ್ವಚ್ಛ ಸರ್ವೇಕ್ಷಣೆ, ನಾಗರಿಕರಿಗೂ ಇದೆ ಹೊಣೆ

ಮೈಸೂರು: ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ 2015 ಮತ್ತು 2016 ರಲ್ಲಿ ನಂ.1 ಸ್ಥಾನಕ್ಕೇರಿದ್ದ ಮೈಸೂರು ನಗರ 2019ರಲ್ಲಿ ಮತ್ತೊಮ್ಮೆ ಸ್ವಚ್ಛ ಸರ್ವೇಕ್ಷಣೆಗೆ ಸಿದ್ಧವಾಗಿದ್ದು, ಈ ಸಾಲಿನಲ್ಲೂ ಮೊದಲ ಸ್ಥಾನ ಗಳಿಸಲು ಮೈಸೂರಿನ ಜನತೆ ಸಹ ಕಾರ ನೀಡಬೇಕೆಂದು ಮೇಯರ್ ಪುಷ್ಪಲತಾ ಜಗನ್ನಾಥ್ ಮನವಿ ಮಾಡಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪ್ರಸಕ್ತ ಸಾಲಿನ ಸರ್ವೇ ಸರ್ವೇಕ್ಷಣೆ ಜ.4ರಿಂದ ಆರಂಭವಾಗಿದ್ದು, ಜ.31 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಸರ್ವೇಕ್ಷಣಾ ತಂಡ ಮೈಸೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ.

2017ರಲ್ಲಿ 5ನೇ ಸ್ಥಾನ ಮತ್ತು 2018ರಲ್ಲಿ 3ರಿಂದ 10 ಲಕ್ಷದೊಳಗಿನ ಜನಸಂಖ್ಯೆ ಹೊಂದಿದ ಮಧ್ಯಮ ಗಾತ್ರದ ನಗರಗಳ ಪೈಕಿ ಮೈಸೂರು ಪ್ರಥಮ ಸ್ಥಾನ ಗಳಿಸಿತ್ತು. ನಾಗರಿಕರಿಂದ ಈ ಬಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಮತ್ತೆ ಮೈಸೂರು ಸ್ವಚ್ಛತೆಯಲ್ಲಿ ನಂ.1 ಸ್ಥಾನ ಪಡೆಯುವುದು ನಿಶ್ಚಿತ ಎಂದು ನುಡಿದರು.

ಮೂಲದಲ್ಲೇ ತ್ಯಾಜ್ಯ ವಿಂಗಡಣೆ: ನಗರದ ಎಲ್ಲಾ ಭಾಗಗಳಲ್ಲಿ ಅಗತ್ಯಕ್ಕನು ಗುಣವಾಗಿ ಸಾರ್ವಜನಿಕ ಹಾಗೂ ಸಮು ದಾಯ ಶೌಚಗೃಹಗಳನ್ನು ನಿರ್ಮಿಸ ಲಾಗಿದೆ. ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳ ಸುತ್ತಮುತ್ತ ಹಸಿ ಮತ್ತು ಒಣ ಕಸಕ್ಕಾಗಿಯೇ ಪ್ರತ್ಯೇಕ ಕಸದ ಬುಟ್ಟಿಗಳನ್ನು ಅಳವಡಿಸಲಾಗಿದೆ. ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಈ ಬಾರಿ ನಾಗರಿಕರ ಪ್ರತಿಕ್ರಿಯೆಗೆ 1,250 ಅಂಕಗಳನ್ನು ನಿಗದಿ ಮಾಡಿದ್ದು, ಒಟ್ಟು ಜನಸಂಖ್ಯೆಯ ಪೈಕಿ ಶೇ.1ರಷ್ಟು ಜನರ ಪ್ರತಿಕ್ರಿಯೆಯಾದರೂ ಅಗತ್ಯವಿದೆ. ಹೀಗಾಗಿ ನಾಗರಿಕರ ಪ್ರತಿಕ್ರಿಯೆ ಅತ್ಯಂತ ಮುಖ್ಯ. ಮೈಸೂರಿಗರು ಸ್ವಚ್ಛತಾ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಅಥವಾ 1969 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಅಭಿಪ್ರಾಯ ದಾಖಲಿಸಬಹುದು ಎಂದು ಮೇಯರ್ ತಿಳಿಸಿದರು.

ಸ್ವಚ್ಛ ಸರ್ವೇಕ್ಷಣೆಯಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ನಗರದ ನಾಗರಿಕರು ಭಾಗವಹಿಸಬೇಕೆಂಬ ಉದ್ದೇಶದಿಂದ ವಿವಿಧ ರೀತಿಯ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ನಗರದ ವಿವಿಧೆಡೆ ಅಳವಡಿಸಿರುವ ಡಿಜಿಟಲ್ ಬೋರ್ಡ್, ಮಾಹಿತಿ ಫಲಕ ಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಅಲ್ಲದೆ ಮನೆಗಳಿಗೆ ಸ್ವಚ್ಛ ಸರ್ವೇಕ್ಷಣೆಯ ಕರಪತ್ರ ಹಂಚಲಾಗಿದೆ. ಶಾಲಾ-ಕಾಲೇಜು ಸೇರಿದಂತೆ 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆ ಗಳಲ್ಲಿ ಸ್ವಚ್ಛತಾ ಸಮಿತಿ ರಚಿಸಲಾಗಿದೆ. ಪ್ರಚಾರಕ್ಕೆ ಸಾಮಾಜಿಕ ಜಾಲತಾಣದ ಪರಿಣಾಮಕಾರಿ ಬಳಕೆಗೆ ಆದ್ಯತೆ ನೀಡಿದ್ದು, ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ ಎಂದು ವಿವರಿಸಿದರು.

ಕನ್ನಡದಲ್ಲೂ ಪ್ರತಿಕ್ರಿಯೆಗೆ ಅವಕಾಶ: ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗ ರಾಜ್ ಮಾತನಾಡಿ, ಈ ಹಿಂದೆ ನಾಗರಿ ಕರು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರವೇ ಪ್ರತಿಕ್ರಿಯೆ ನೀಡಬೇಕಾಗಿತ್ತು. ಆದರೆ ಈ ಬಾರಿ ಕನ್ನಡ ಭಾಷೆಯಲ್ಲೂ ಪ್ರತಿಕ್ರಿಯೆ ನೀಡಲು ಅವಕಾಶವಿದೆ. ಜ.20 ರಂದು ಸರ್ವೇಕ್ಷಣೆ ತಂಡದ ಅಧಿಕಾರಿ ಗಳು ಮೈಸೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ 1969ಕ್ಕೆ ಕರೆ ಮಾಡಿ ಏಳು ಪ್ರಶ್ನೆಗಳಿಗೆ ಉತ್ತರಿಸಬೇಕು. ಕರೆ ಮಾಡಿದಾಗ ತಾವು ಸ್ವಚ್ಛತಾ ಸರ್ವೇಕ್ಷಣೆಯಲ್ಲಿ ಪಾಲ್ಗೊಂಡಿ ದ್ದೀರಾ?’ ಎಂಬ ಪ್ರಶ್ನೆಗೆಹೌದು’ ಎಂದು ಉತ್ತರಿಸಿದ ಕೂಡಲೇ ಕರೆ ಕಡಿತಗೊಳು ್ಳತ್ತದೆ. ಬಳಿಕ ಸರ್ವೇಕ್ಷಣೆ ಕಡೆಯಿಂದಲೇ ಕರೆ ಬರುತ್ತದೆ. ಆಗ ಸ್ಥಳೀಯ ಎಸ್‍ಟಿಡಿ ಕೋಡ್ ನಮೂದಿಸಿದರೆ ಅವರು ನಗರದ ಸರ್ವೇಕ್ಷಣೆಗೆ ಸಂಬಂಧಿಸಿದಂತೆ ಏಳು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಸೂಕ್ತ ಉತ್ತರ ನೀಡಬೇಕು ಎಂದರು.

ಇದಲ್ಲದೆ 1,250 ಅಂಕಗಳಿಗೆ ಸರ್ವೇ ಕ್ಷಣೆ ತಂಡ ನಗರದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತದೆ. ಖುದ್ದು ಪರಿಶೀಲನೆ ವೇಳೆ ಛಾಯಾಚಿತ್ರದೊಡನೆ ಎಲ್ಲಾ ಮಾಹಿತಿ ಕಲೆ ಹಾಕುತ್ತಾರೆ. ಉಳಿದ 1,250 ಅಂಕಗಳಿಗೆ ಅಗತ್ಯ ದಾಖಲಾತಿ ಸಲ್ಲಿಸಬೇಕಿ ರುತ್ತದೆ. ಈ ಸಂಬಂಧ ಪಾಲಿಕೆಯು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ವಿವರಿಸಿದರು.

ಉಪ ಮೇಯರ್ ಷಫಿ ಅಹಮದ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ನಗರ ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್ ಗೋಷ್ಠಿಯಲ್ಲಿದ್ದರು.