ವಕೀಲರಿಂದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ಮದ್ದೂರು:  ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿ ಕರ್ನಾಟಕದವರು ಬೆಳೆ ಪದ್ಧತಿ ಬದಲಾಯಿಸಬೇಕೆಂದು ಕಾವೇರಿ ಜಲಾನಯನ ಪ್ರದೇಶಕ್ಕೆ ಸೂಚಿಸಿರುವುದು ಸರಿಯಲ್ಲ ಎಂದು ಆರೋಪಿಸಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಬೆಳೆ ಪದ್ಧತಿ ಬಗ್ಗೆ ನಿರ್ಧಾರ ಮಾಡುವ ವರು ಆ ಭಾಗದ ರೈತರು. ಈ ಹಿನ್ನೆಲೆ ಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಕಾವೇರಿ ನಿರ್ವಹಣಾ ಮಂಡಳಿ ಪ್ರಸ್ತಾಪ ಹಿಂತೆಗೆದು ಕೊಳ್ಳಬೇಕು ಎಂದರು. ಕೃಷಿ, ವಿಜ್ಞಾನ ಕೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಖಾಸಗೀಕರಣ ಗೊಳಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿಗೆ ತನ್ನ ಸದಸ್ಯರನ್ನು ನೇಮಿಸದೇ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಈ ಕೂಡಲೇ ಸರ್ಕಾರ ತನ್ನ ಸದಸ್ಯರನ್ನು ನೇಮಿಸಿ ಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪಟ್ಟಿ ಸಲ್ಲಿಸಬೇಕು ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಸತ್ಯಪ್ಪ ಆಗ್ರಹಿಸಿ ದರು. ಪ್ರತಿಭಟನೆಯಲ್ಲಿ ವಕೀಲರಾದ ಶಿವಣ್ಣ, ಸಂಪತ್‍ಕುಮಾರ್, ಲೋಕೇಶ್, ಮಹೇಶ್, ಶೇಖರ್, ಕೆಂಪೇಗೌಡ, ಮಹೇಶ್, ವೆಂಕಟೇಶ್ ಇನ್ನಿತರರಿದ್ದರು.