ಮೊಬೈಲ್ ಬಿಡಿ, ಆಟ ಆಡಿ…

ಮೈಸೂರು: ಕ್ರೀಡಾ ಪ್ರೇಮಿ ಗಳಿಂದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಸರ್ಕಾರಿ ಶಾಲೆಯಲ್ಲಿ ಮೊಬೈಲ್ ಬಿಡಿ ಆಟ ಆಡಿ ಎಂಬ ವಿನೂತನ ಕಾರ್ಯ ಕ್ರಮವನ್ನು ಗುರುವಾರ ಆಯೋಜಿಸಲಾ ಗಿತ್ತು. ಎಲ್ಲಾ ರೀತಿಯ ಕ್ರಿಕೆಟ್‍ಗೆ ಯುವ ರಾಜ್ ಸಿಂಗ್ ವಿದಾಯ ಹೇಳಿರುವ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ನೀಡಲಾಯಿತು.
ನಂತರ ಮಾತನಾಡಿದ ಹರೀಶ್ ನಾಯ್ಡು ಅವರು ಕ್ರಿಕೆಟ್ ಒಂದು ನಾಗರಿಕ ಕ್ರೀಡೆ ಯಾಗಿತ್ತು. ಅದರ ಗೌರವವನ್ನು ಹೆಚ್ಚಿಸು ವಲ್ಲಿ ಯುವರಾಜ್ ಸಿಂಗ್ ಅವರು ಬಹಳ ಶ್ರಮ ವಹಿಸಿದ್ದರು. ಕಳೆದ ವಿಶ್ವಕಪ್‍ನಲ್ಲಿ ಅವರ ಹೋರಾಟ ಅತ್ಯದ್ಭುತವಾಗಿತ್ತು ಎಂದು ಸ್ಮರಿಸಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ಕ್ರಿಕೆಟ್ ಆಡುವ ಬದಲು ವಿಡಿಯೋ ಬೆಟ್ಟಿಂಗ್ಗಾಗಿ ದಂಧೆ ನಡೆಸುತ್ತಿದ್ದಾರೆ ಇದಕ್ಕೆ ಸಂಬಂಧ ಪಟ್ಟ ಇಲಾಖೆಗಳು ಕಡಿವಾಣ ಹಾಕಿ ನಾಗ ರಿಕ ಕ್ರೀಡೆಯಾದ ಕ್ರಿಕೆಟ್‍ನ ಮರ್ಯಾದೆ ಉಳಿಸಬೇಕೆಂದು ಮನವಿ ಮಾಡಿ ನಂತರ ಮಕ್ಕಳಿಗೆ `ಮೊಬೈಲ್ ಬಿಡಿ, ಮೈದಾನಕ್ಕಿಳಿದು ಆಟ ಆಡಿ’ ಎಂದು ಸಲಹೆ ನೀಡಿದರು.

ನಂತರ ಮಾತನಾಡಿದ ಉದ್ಯಮಿ ಅಪೂರ್ವ ಸುರೇಶ್, ಯುವರಾಜ್ ಸಿಂಗ್ ಒಬ್ಬ ಸ್ಫೂರ್ತಿದಾಯಕ ಕ್ರಿಕೆಟ್ ಆಟಗಾರ. ತಮಗೆ ಬಂದಿದ್ದ ಮಾರಕ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಿ ಸಾವನ್ನು ಸಮೀಪ ದಲ್ಲಿ ಇಟ್ಟುಕೊಂಡಿದ್ದರೂ ಶೌರ್ಯದಿಂದ ಹೋರಾಡಿ ಕ್ರೀಡೆಯಲ್ಲೂ ಗೆದ್ದು ಸಾವನ್ನು ಸಹ ಗೆದ್ದಿದ್ದಾರೆ. ಹೀಗಾಗಿ ಅವರೊಬ್ಬ ಮಹಾನ್ ಕ್ರೀಡಾ ಹೋರಾಟಗಾರ ಎಂದು ಬಣ್ಣಿಸಿದರು. ಅಲ್ಲದೇ ಹಲವಾರು ಚಾರಿ ಟಬಲ್ ಮೂಲಕ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಸಹಾಯ ಮಾಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಹರೀಶ್ ನಾಯ್ಡು, ಅಪೂರ್ವ ಸುರೇಶ್, ಕಡಕೊಳ ಜಗದೀಶ್, ಜಯ ಸಿಂಹ ಶ್ರೀಧರ್, ಚಕ್ರಪಾಣಿ, ಸುಚೀಂದ್ರ ಹಾಗೂ ಶಾಲಾ ಮುಖ್ಯ ಶಿಕ್ಷಕರು ಶ್ರೀಮತಿ ಸುಗುಣವತಿ ಪುಷ್ಪಾ ಮತ್ತು ಶಿಕ್ಷಕ ವೃಂದ ದವರು ಹಾಜರಿದ್ದರು.