ನಾಳೆ ಮೃಗಾಲಯದಲ್ಲಿ ಪಕ್ಷಿ ಸಂರಕ್ಷಣೆ, ಕಾಡ್ಗಿಚ್ಚು ಕುರಿತು ಉಪನ್ಯಾಸ

ಮೈಸೂರು, ಅ.14(ಎಂಟಿವೈ)- ಮೈಸೂರು ಮೃಗಾಲಯದಲ್ಲಿ 22ನೇ ಸಂರಕ್ಷಣಾ ನುಡಿ ಕಾರ್ಯಕ್ರಮದ ಅಂಗವಾಗಿ ಅ.16ರಂದು ಮಧ್ಯಾಹ್ನ 3ಕ್ಕೆ `ಪಕ್ಷಿಗಳ ಸಂರಕ್ಷಣೆ ಮತ್ತು ಕಾಡ್ಗಿಚ್ಚು: ಹಿಂದಿನ ಹಾಗೂ ಪ್ರಸ್ತುತ ಸನ್ನಿವೇಶ’ ಕುರಿತು ಉಪನ್ಯಾಸ ಆಯೋಜಿಸ ಲಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ.

ಅರಣ್ಯ ನಾಶ, ಪರಿಸರದ ಮೇಲೆ ಮಾನವನ ಹಸ್ತಕ್ಷೇಪದಿಂದಾಗಿ ಪಕ್ಷಿಗಳ ಸಂತತಿ ಗಣನೀಯವಾಗಿ ಕ್ಷೀಣಿಸುತ್ತಿದೆ. ಮುಂದಿನ ಪೀಳಿಗೆಗೆ ಪಕ್ಷಿ ಸಂತತಿ ಉಳಿಸಿ, ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಅರಿವು ಮೂಡಿಸಲು ಹಲವು ಕಾರ್ಯ ಕ್ರಮ ನಡೆಸಲಾಗುತ್ತಿದೆ. ಮೃಗಾಲಯ ದಲ್ಲಿ 22ನೇ ಸಂರಕ್ಷಣಾ ನುಡಿ ಕಾರ್ಯ ಕ್ರಮದ ಹಿನ್ನೆಲೆಯಲ್ಲಿ ಆಂಪಿಥಿಯೇಟರ್ ನಲ್ಲಿ ಅ.16ರಂದು ಮಧ್ಯಾಹ್ನ 3ಕ್ಕೆ `ಪಕ್ಷಿ ಗಳ ಸಂರಕ್ಷಣೆ ಮತ್ತು ಕಾಡ್ಗಿಚ್ಚು: ಹಿಂದಿನ ಹಾಗೂ ಪ್ರಸ್ತುತ ಸನ್ನಿವೇಶ’ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಪಕ್ಷಿ ಕುರಿತಂತೆ ಎಸ್.ವರ್ಷಿಣಿ ಮಾತನಾಡಿ ದರೆ, ಅಮೇಯ ಗೋಡೆ ಅವರು `ಕಾಡ್ಗಿಚ್ಚು: ಹಿಂದಿನ ಮತ್ತು ಪ್ರಸ್ತುತ ಸನ್ನಿವೇಶ’ ಕುರಿತು ಮಾತನಾಡಲಿದ್ದಾರೆ. ಈ ಸಂದರ್ಭ ದಲ್ಲಿ ನಿವೃತ್ತ ಹಿರಿಯ ಅರಣ್ಯಾಧಿಕಾರಿ ಎ.ಸಿ.ಲಕ್ಷ್ಮಣ್ ಅವರ `ಚಾಲೆಂಜಸ್ ಆಫ್ ಎ ಟ್ರೋಪಿಕಲ್ ಫಾರೆಸ್ಟ್ ಫಾರ್ ಎ ಸಸ್ಟೈನಬಲ್ ಡೆವಲಪ್‍ಮೆಂಟ್’ ಪುಸ್ತಕ ಬಿಡುಗಡೆ ಮಾಡಲಾಗುತ್ತದೆ. ಮುಖ್ಯ ಅತಿಥಿಗಳಾಗಿ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಪರಿಸರ ತಜ್ಞ ಕೃಪಾಕರ-ಸೇನಾನಿ ಪಾಲ್ಗೊಳ್ಳಲಿ ದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊ ಳ್ಳಲು ಬಯಸುವವರು ಮೊ.ಸಂಖ್ಯೆ 9686 668099 ಅಥವಾ zoomysore@ gmail. com ಹೆಸರನ್ನು ಶುಲ್ಕ ರಹಿತವಾಗಿ ನೋಂದಾಯಿಸಿಕೊಳ್ಳುವಂತೆ ಕೋರಿದ್ದಾರೆ.