ಮೈಸೂರು: ಸಾವಿರಾರು ವರ್ಷಗಳ ಇತಿಹಾಸವಿರುವ ಸಂಸ್ಕೃತ ಸುಂದರ ಭಾಷೆ, ಅಷ್ಟೇ ಶ್ರೀಮಂತ ಭಾಷೆಯೂ ಹೌದು. ಇಂಥ ಭಾಷೆಗೆ ಮೀಸಲಾದ ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜನ್ನು 140 ವರ್ಷಗಳ ಹಿಂದೆಯೇ ಮೈಸೂರಿನ ಮಹಾರಾಜರು ಆರಂಭಿಸಿ, ಅಗತ್ಯ ಆಸರೆ ನೀಡಿ, ಉಳಿಸಿ, ಬೆಳೆಯುವಂತೆ ಮಾಡಿದ್ದಾರೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಇಂದಿಲ್ಲಿ ಅಭಿಪ್ರಾಯಪಟ್ಟರು.
ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ 2.68 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಿರುವ ವಿದ್ಯಾರ್ಥಿ ನಿಲಯ ಮತ್ತು ಶೈವ ಸಂಶೋಧನಾ ಸಂಸ್ಥೆಯ ನೂತನ ಕಟ್ಟಡಗಳ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಇಲ್ಲಿ ಕಲಿಯುವುದು, ಕಲಿಸುವುದು, ಸಂಶೋಧನೆ, ಪ್ರಕಟಣೆಗಳೆಲ್ಲವೂ ನಡೆದಿದೆ. ನೂರಾರು ವಿದ್ಯಾರ್ಥಿಗಳು ಇಲ್ಲಿ ಕಲಿತು ವಿದ್ವಾಂಸರಾಗಿದ್ದಾರೆ. ಅದೇ ರೀತಿ ಇದೀಗ ನಿರ್ಮಾಣವಾಗಲಿರುವ ಶೈವ ಸಂಶೋ ಧನಾ ಕೇಂದ್ರದ ಹೊಸ ಕಟ್ಟಡ ಬಹು ಬೇಗ ನಿರ್ಮಾಣಗೊಳ್ಳಲಿ. ಉತ್ಕøಷ್ಟ ಕಾರ್ಯ ಗಳು ಇಲ್ಲಿ ನಡೆಯಲಿ. ಸಂಸ್ಕೃತ ಸೌರಭ ಇಲ್ಲಿಂದ ವಿಶ್ವಾದ್ಯಂತ ಹರಡಲಿ. ಹೆಚ್ಚು ಹೆಚ್ಚು ಸಂಶೋಧನೆಗಳು ನಡೆಯುವಂತಾಗಲಿ ಎಂದು ಹಾರೈಸಿದರು.
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮೈಸೂರು ಮಹಾ ರಾಜರು ಸ್ಥಾಪಿಸಿದ ಮೈಸೂರಿನ ಸಂಸ್ಕೃತ ಪಾಠಶಾಲೆ ಎಂದರೆ ಒಂದು ಕಾಲದಲ್ಲಿ ವಿದ್ವಾಂಸರ ಗಣಿ ಎಂಬ ಮಾತು ಮತ್ತು ಗೌರವ ಈ ಸಂಸ್ಥೆಗಿತ್ತು. ಇಂತಹ ಸಂಸ್ಥೆ ಯಲ್ಲಿ ಶೈವ ಸಂಶೋಧನಾ ಕೇಂದ್ರ ಪ್ರಾರಂಭ ವಾಗಿ, ನೂತನ ಕಟ್ಟಡ ನಿರ್ಮಾಣವಾಗು ತ್ತಿರುವುದು ಶೈವ ಸಂಶೋಧನೆಗೆ ಹೆಚ್ಚು ಅವಕಾಶವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪದ್ಮಾ ಶೇಖರ್ ಮಾತನಾಡಿ, ಶೈವ ಸಿದ್ದಾಂತ ಕುರಿತು ಸಂಶೋಧನೆ ಮಾಡುವ ಅವಕಾಶ ಸಂಸ್ಕೃತ ದಲ್ಲಿದೆ. ಈ ಭಾಗದಲ್ಲಿ ಶೈವ ಮಠಗಳು ಹೆಚ್ಚಾ ಗಿರುವುದರಿಂದ ಇಲ್ಲಿ ಶೈವ ಸಂಶೋಧನಾ ಕೇಂದ್ರ ಮಾಡಿದ್ದಾಗಿ ತಿಳಿಸಿದರು.
ಶಿವ ಆರಾಧನೆಯ ನಾನಾ ಮಜಲು ಗಳನ್ನು ಇಲ್ಲಿ ಕಲಿಯಲು ಅವಕಾಶವಿದೆ. ಸಂಸ್ಕೃತ ಅಧ್ಯಯನ ಮಾಡಿದವರಿಗೆ ಉದ್ಯೋಗ ಸೃಷ್ಟಿಸುವ ಪ್ರಯತ್ನ ನಡೆದಿದ್ದು, ಸಂಸ್ಕೃತ ಕೇವಲ ಮಂತ್ರ ಕಲಿಕೆಗಷ್ಟೇ ಸೀಮಿತ ವಾಗದೆ ಉದ್ಯೊಗ ಮತ್ತು ಬದುಕು ಕಟ್ಟಿ ಕೊಳ್ಳಲು ಅವಕಾಶವಾಗಬೇಕು ಎಂಬುದು ತಮ್ಮ ಉದ್ಧೇಶವಾಗಿದೆ ಎಂದರು.
ಜೂ.3ರಂದು ಹಲವು ಕಟ್ಟಡ ಉದ್ಘಾಟನೆ: ತಾವು ಕುಲಪತಿಯಾದಾಗ ಬೆಂಗಳೂರಿ ನಲ್ಲಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾ ಲಯದಲ್ಲಿ ಸರಿಯಾದ ಕಟ್ಟಡ, ಕೊಠಡಿ, ಸಭಾಂಗಣ, ಕುಲಪತಿ ಕೊಠಡಿ ಇತ್ಯಾದಿ ಏನೊಂದು ಸೌಲಭ್ಯವೂ ಇರಲಿಲ್ಲ. ಬಳಿಕ ತಾವು ಸಂಸ್ಕೃತ ವಿವಿಯನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ವಿವಿಯ ಅನುದಾನ ಸೇರಿದಂತೆ ಬೇರೆ ಬೇರೆ ಅನುದಾನ ಬಳಸಿ ವಿವಿಯಲ್ಲಿ ಇದೀಗ 1.55 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸಿಂಡಿ ಕೇಟ್ ಸಭಾಂಗಣ, ಮಿನಿ ಸಭಾಂಗಣ, ಭೇಟಿ ನೀಡುವ ಗಣ್ಯರ ಕೊಠಡಿ, ಉಪನ್ಯಾಸಕರ ಕೊಠಡಿ, ತರಗತಿ ಕೊಠಡಿಗಳನ್ನು ನಿರ್ಮಿಸ ಲಾಗಿದೆ. ಇದರ ಉದ್ಘಾಟನೆಯನ್ನೂ ಜೂ. 3ರಂದು ನಡೆಸಲು ಉದ್ದೇಶಿಸಿದ್ದು, ರಾಜ್ಯ ಪಾಲರು ಮತ್ತು ಶಿಕ್ಷಣ ಸಚಿವರು ಭಾಗವ ಹಿಸಲಿದ್ದಾರೆ ಎಂದು ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಪ್ರೊ. ಪದ್ಮಾ ಶೇಖರ್ ತಿಳಿಸಿದರು. ಮೇಲುಕೋಟೆಯಲ್ಲಿ 45 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಿ ರುವ ರಾಮಾನುಜಾಚಾರ್ಯರ ಸಹಸ್ರಮಾ ನೋತ್ಸವ ಭವನ ಸಹ ಉದ್ಘಾಟನೆಗೆ ಸಿದ್ದವಾಗಿದೆ ಎಂದು ಹೇಳಿದರು. ಕಾರ್ಯ ಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿವಿ ಹಣ ಕಾಸು ಅಧಿಕಾರಿ ಡಾ.ಪ್ರಕಾಶ್ ಆರ್. ಪಾಗೋಜಿ, ಮಹಾರಾಜ ಸಂಸ್ಕೃತ ಕಾಲೇಜು ಪ್ರಾಚಾರ್ಯ ಪ್ರೊ. ಕೆ.ಎಂ. ಮಹದೇವಯ್ಯ, ಶೈವ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಶರತ್‍ಚಂದ್ರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು