ಮೈಸೂರು ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಲಿಫ್ಟ್ ಸೌಲಭ್ಯ

ಮೈಸೂರು: ನೂರು ವರ್ಷಕ್ಕೆ ಕಾಲಿಡುತ್ತಿ ರುವ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಪಾರಂಪರಿಕ ಕಟ್ಟಡಕ್ಕೆ ಲಿಫ್ಟ್ ಸೌಲಭ್ಯ ಒದಗಿಸ ಲಾಗುತ್ತಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಸಂಸ್ಥೆಯ ಡೀನ್ ಅಂಡ್ ಡೈರೆಕ್ಟರ್ ಕಚೇರಿ, ಮುಖ್ಯ ಆಡಳಿತಾಧಿಕಾರಿ ಕಚೇರಿ, ಆಡಳಿತ ಕಚೇರಿ ಸೇರಿದಂತೆ ಹಲವು ವಿಭಾಗಗಳ ತರಗತಿ ಕೊಠಡಿ, ಲ್ಯಾಬೋರೇಟರಿ, ಸಭಾಂಗಣ ಇರುವುದ ರಿಂದ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಮೊದಲ ಮಹಡಿಗೆ ಹೋಗಲು ಅನುಕೂಲ ವಾಗುವಂತೆ ಕಟ್ಟಡಕ್ಕೆ ಪ್ರಧಾನ ಪ್ರವೇಶ ದ್ವಾರದ ಬಳಿ ಲಿಫ್ಟ್ ಅಳವಡಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ವತಿ ಯಿಂದ ಎಂಎಂಸಿಆರ್‍ಐನ ಮುಖ್ಯ ದ್ವಾರದ ಎಡಭಾಗದಲ್ಲಿ ಲಿಫ್ಟ್ ಅಳವಡಿಸುವ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಸಿವಿಲ್ ಕಾಮಗಾರಿಗೆ 11 ಲಕ್ಷ ರೂ, ಲಿಫ್ಟ್ ಮತ್ತು ಎಲೆಕ್ಟ್ರಿಕಲ್ ಕಾಮಗಾರಿಗೆ 36 ಲಕ್ಷ ರೂ.ಗಳಿಗೆ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದೆ.

ಲಿಫ್ಟ್ ಕಾಮಗಾರಿ ಪ್ರಗತಿಯಲ್ಲಿದ್ದು, ಒಂದು ತಿಂಗಳೊಳ ಗಾಗಿ ಪೂರ್ಣಗೊಳಿಸಲಾಗುವುದೆಂದು ಲೋಕೋಪಯೋಗಿ ಇಲಾಖೆ ಎಲೆಕ್ಟ್ರಿಕಲ್ ವಿಭಾಗದ ಮೂಲಗಳು ತಿಳಿಸಿವೆ.