ಸೋಮವಾರಪೇಟೆ ಬಳಿ ಕಳ್ಳಭಟ್ಟಿ ವಶ

ಮಡಿಕೇರಿ: ಸೋಮವಾರಪೇಟೆಯ ಬೆಂಬಳೂರು ಗ್ರಾಮದ ಹೊಳೆ ಜಾಗದಲ್ಲಿ ಕಳ್ಳಭಟ್ಟಿ ತಯಾರಿಸಲು ಸಂಗ್ರಹ ಮಾಡಲಾಗಿದ್ದ 45 ಲೀ. ಬೆಲ್ಲದ ಪುಳಗಂಜಿ ಮತ್ತು 3ಲೀ. ಕಳ್ಳ ಭಟ್ಟಿಯನ್ನು ಸೋಮವಾರಪೇಟೆ ಅಬಕಾರಿ ಇಲಾಖೆಯ ಅಧಿಕಾರಿ ಗಳು ಮತ್ತು ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. ಆದರೆ ಆರೋಪಿ ಗಳ ಸುಳಿವು ಲಭ್ಯವಾಗಿಲ್ಲ. 45 ಲೀ. ಬೆಲ್ಲದ ಕೊಳೆಯನ್ನು ಸಾಗಿಸಲು ಅಸಾಧ್ಯವಾದ ಹಿನ್ನಲೆಯನ್ನು ಅದನ್ನು ಸ್ಥಳದಲ್ಲೇ ನಾಶ ಪಡಿಸಲಾಗಿದೆ. ಕಳ್ಳಭಟ್ಟಿಯ ಸ್ಯಾಂಪಲ್‍ಅನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ಸದರಿ ದಿನದಂದು 1 ಘೋರ ಪ್ರಕರಣ, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ 9 ಪ್ರಕರಣ ಹಾಗೂ ಸನ್ನದ್ದುಗಳ ಮೇಲೆ 3 ಪ್ರಕರಣಗಳನ್ನು ದಾಖಲಿಸಿ 9 ಮಂದಿ ಆರೋಪಿಗಳ ವಿರುದ್ದ ಮೊಕದ್ದಮೆ ದಾಖಲಿಸಲಾಗಿದೆ. ಒಟ್ಟು 3.570ಲೀ. ಮದ್ಯ, 45ಲೀ. ಬೆಲ್ಲದ ಕೊಳೆ ಮತ್ತು 3 ಲೀ. ಕಳ್ಳಭಟ್ಟಿಯನ್ನು ವಶಕ್ಕೆ ಪಡೆಯಲಾಗಿದ್ದು, ಈ ಸ್ವತ್ತುಗಳ ಮೊತ್ತ 1,136ರೂ.ಗಳೆಂದು ಅಬಕಾರಿ ಇಲಾಖೆ ತಿಳಿಸಿದೆ.