ಮೈಸೂರು: ಕನ್ನಡ ಸಾಹಿತ್ಯ ಕೃಷಿಗೆ ಕ್ಲಿಷ್ಟಕರ ವಾತಾವರಣ ವಿದ್ದು, ಕ್ರೀಡೆ ಹಾಗೂ ಸಿನಿಮಾಗೆ ದೊರಕು ತ್ತಿರುವ ಮಾನ್ಯತೆ ಸಾಹಿತ್ಯಕ್ಕೆ ದೊರೆಯು ತ್ತಿಲ್ಲ ಎಂದು ಸಾಹಿತಿ ಹಾಗೂ ಕನ್ನಡ ಚಳವಳಿಗಾರ ಜಾಣಗೆರೆ ವೆಂಕಟ ರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಕನ್ನಡ ಅಭಿವೃದ್ಧಿ ಪ್ರತಿ ಷ್ಠಾನ ಮತ್ತು ಶಿವಮಯ ಪ್ರಕಾಶನ ಆಯೋ ಜಿಸಿದ್ದ ಸಾಹಿತಿ ಹಲ್ಲೇಗೆರೆ ಶಂಕರ್ ಅವರ `ನುಡಿ ಮಲ್ಲಿಗೆ’ ಧ್ವನಿ ಮುದ್ರಿಕೆ ಹಾಗೂ ಕವನ ಸಂಕಲನ ಬಿಡುಗಡೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಕಾಲಘಟ್ಟ ವಿಚಿತ್ರವಾಗಿದ್ದು, ಒಂದು ಕಾರ್ಯಕ್ರಮ ರಾಜ್ಯಕ್ಕೆ ತಲುಪಿ ಸುವುದು ಕಷ್ಟಕರವಾಗಿದೆ. ಸಾಹಿತ್ಯ ಕೃಷಿಗೆ ಪ್ರಾಶಸ್ತ್ಯ ನೀಡಲು ಹೊಸ ಹಾದಿ ಹುಡುಕ ಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕವನ ಸಂಕಲನದಲ್ಲಿ ನಾಡ ಒಲವಿನ ಗೀತೆ ಮತ್ತು ಕವಿತೆಗಳಿವೆ. ಶಂಕರ್ ಇನ್ನೂ ಹೆಚ್ಚಿನ ಕೃತಿಗಳನ್ನು ರಚಿಸಲಿ ಎಂದು ಹಾರೈ ಸಿದರು. ಕರ್ನಾಟಕ ನೃತ್ಯ, ಸಂಗೀತ ಅಕಾ ಡೆಮಿ ಸದಸ್ಯ ಆನಂದ ಮಾದಲಗೆರೆ ಮಾತ ನಾಡಿ, ಕ್ಷಿಪ್ರವಾಗಿ ಪ್ರವರ್ಧಮಾನದಲ್ಲಿ ಬೆಳೆ ಯುತ್ತಿರುವ ಸುಗಮ ಸಂಗೀತಕ್ಕೆ ಪಠ್ಯವಿಲ್ಲ. ಹೀಗಾಗಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯನ್ನು ಒಬ್ಬೊಬ್ಬರು ಒಂದೊಂದು ಧಾಟಿಯಲ್ಲಿ ಹಾಡುವ ಮೂಲಕ ಅವಮಾನ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ನಿರ್ದಿಷ್ಟ ಧಾಟಿಯನ್ನು ನಿಗದಿಪಡಿಸಿ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಶಾಸ್ತ್ರೀಯ ಸಂಗೀತ ಸೇರಿದಂತೆ ಎಲ್ಲಾ ಸಂಗೀತ ಪ್ರಾಕಾರಗಳಿಗೆ ಪಠ್ಯವಿದೆ. ಆದರೆ ಅದರಿಂದ ಸೂಕ್ತ ಪಠ್ಯವನ್ನು ಸುಗಮ ಸಂಗೀತಕ್ಕೆ ನಿಗದಿ ಮಾಡಬೇಕು ಎಂದು ಮನವಿ ಮಾಡಿದರು. ಲೇಖಕ ಹಲ್ಲೇಗೆರೆ ಶಂಕರ್ ಮಾತನಾಡಿ, 10 ಗೀತೆಗಳ ಧ್ವನಿ ಮುದ್ರಿಕೆಯಲ್ಲಿ ಪುತ್ತೂರು ನರಸಿಂಹ ನಾಯಕ್ ಸಂಗೀತ ನೀಡಿದ್ದಾರೆ. ಗಾಯಕ ರಾದ ಎಸ್.ಪಿ.ನಾಗಸುಬ್ರಹ್ಮಣ್ಯಂ, ಎಂ.ಡಿ. ಪಲ್ಲವಿ, ವೆಂಕಟೇಶಮೂರ್ತಿ ಶಿರೂರು, ಪುತ್ತೂರು ನರಸಿಂಹ ನಾಯಕ್, ಕೆ.ಎಸ್. ಸುರೇಖಾ ಗೀತೆಗಳನ್ನು ಹಾಡಿದ್ದಾರೆ ಎಂದರು. ಈ ಸಿಡಿಯ ಹಾಡುಗಳನ್ನು ಕೇಳಿ ಕೂಪನ್ ತುಂಬಿಸಿ ಕಳುಹಿಸಿದವರಿಗೆ ಕ್ರಮ ವಾಗಿ 50,000, 30,000 ಮತ್ತು 20,000 ರೂ. ಬಹುಮಾನ ನೀಡಲಾಗುವುದು. ನ.1ರಂದು ಡ್ರಾ, ನ.29ರಂದು ಬಹುಮಾನ ವಿತರಿಸಲಾಗುವುದು ಎಂದರು. ಕಾರ್ಯ ಕ್ರಮದಲ್ಲಿ ವಿಮರ್ಶಕ ಹಿರಿಯ ಸಾಹಿತಿ ಹಿ.ಶಿ.ರಾಮಚಂದ್ರೇಗೌಡ, ಡಾ.ಬೈರ ಮಂಗಲ ರಾಮೇಗೌಡ, ಗಾಯಕ ವೆಂಕ ಟೇಶ್‍ಮೂರ್ತಿ ಶಿರೂರು ಉಪಸ್ಥಿತರಿದ್ದರು.