ಲೋಕಸಭಾ ಚುನಾವಣೆ:31 ರೌಡಿಗಳ ಪರೇಡ್

ಮೈಸೂರು: 2019ರ ಲೋಕಸಭಾ ಚುನಾವಣೆ ಹಿನ್ನೆಲೆ ಯಲ್ಲಿ ಮೈಸೂರು ನಗರದಲ್ಲಿ ಅಪರಾಧ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ 31 ರೌಡಿಗಳನ್ನು ಸಿಸಿಬಿ ಪೊಲೀಸರು ಬುಧವಾರ ಪರೇಡ್ ನಡೆಸಿದ್ದಾರೆ.

ಮೈಸೂರಿನ ಮಂಜೇಶ, ಶ್ರೀನಿವಾಸ @ ಕುಂಡ ಸೀನ, ಹೇಮಂತಕುಮಾರ್, ಅಬೀದ್ ಪಾಷ @ ಅಬೀದ್, ಭರತ್ @ ಬಾಲು, ಅಶೋಕ @ ಪಾಲ್‍ಸಿಂಗ್, ಭರತ್ @ ಭಟ್ಟ, ಸ್ವಾಮಿ @ ಆಮಿ, ರವಿ, ಅಶೋಕ, ಸತೀಶ @ ಪಾಲಹಳ್ಳಿ ಸತೀಶ, ಭಾಗ್ಯ @ ಭಾಗ್ಯಮ್ಮ ಕಾರ್ತಿಕ್ @ ಕೆ.ಕೆ., ಸ್ಯಾಂಸನ್ @ ಸಂಜು, ರಾಕೇಶ್ @ ರಾಕಿ, ಕುಮಾರ @ ಕಪಾಲಿ, ಅಯೂಬ್ ಖಾನ್ @ ಗ್ಯಾಸ್ ಅಯ್ಯೂಬ್, ಹಮೀದ್ ಖಾನ್, ಮಹ್ಮದ್ ಹನೀಫ್, ಶಿವನಿಶ್ಚಿತ್, ರಮೇಶ್ @ ಪಲ್ಲಿ ಸೇರಿದಂತೆ ಒಟ್ಟು 31 ಜನ ರೌಡಿಗಳನ್ನು ವಿಚಾರಣೆಗೊಳ ಪಡಿಸಲಾಗಿದೆ ಎಂದು ಸಿಸಿಬಿ ಎಸಿಬಿ ವಿ.ಮರಿ ಯಪ್ಪ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಅಲ್ಲದೆ, ಮಾಜಿ ರೌಡಿಶೀಟರ್‍ಗಳ ದಿನನಿತ್ಯದ ಚಟುವಟಿಕೆಗಳ ಮೇಲೂ ನಿಗಾವಹಿಸಿ, ಯಾವುದೇ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ವಹಿಸಲಾಗಿದೆ. ಅಲ್ಲದೆ, ಪದೇಪದೆ ಎಚ್ಚರಿಕೆ ನೀಡಿದ್ದರೂ ಅಪರಾಧ ಕೃತ್ಯ ಗಳಿಂದ ದೂರವಿರದ ವಿವಿಧ ಠಾಣಾ ವ್ಯಾಪ್ತಿಯ 14 ಮಂದಿ ರೌಡಿ ಶೀಟರ್ ಗಳನ್ನು 110 ಕಲಂ ಅಡಿಯಲ್ಲಿ ಬಂಧನಕ್ಕೂ ಆದೇಶಿಸಲಾಗಿದೆ ಎಂದು ತಿಳಿಸಿದರು.

ಚುನಾವಣಾ ಸಂದರ್ಭದಲ್ಲಿ ಮತ ದಾರರಿಗೆ ಬೆದರಿಕೆ ಒಡ್ಡುವುದು, ಪಕ್ಷಗಳ ಪರವಾಗಿ ಮತ ಕೇಳುವುದು ಸೇರಿದಂತೆ ಯಾವುದೇ ಅಪರಾಧ ಕೃತ್ಯದಲ್ಲಿ ತೊಡಗಿಸಿ ಕೊಳ್ಳುವಂತೆ ಎಚ್ಚರಿಕೆ ನೀಡಿ, ರೌಡಿಗಳ ವಿಳಾಸ ಪಡೆದು ವಾಪಸ್ ಕಳುಹಿಸಿ ಕೊಡಲಾಗಿದೆ ಎಂದು ತಿಳಿಸಿದರು.
ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರ ಆದೇಶದ ಮೇರೆಗೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತರಾಜು ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ವಿ.ಮರಿಯಪ್ಪ ನೇತೃತ್ವದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಸಿ.ಕಿರಣ್ ಕುಮಾರ್, ಹರೀಶ್‍ಬಾಬು, ಎನ್.ಜಿ. ಕೃಷ್ಣಪ್ಪ ಹಾಗೂ ರೌಡಿ ಪ್ರತಿಬಂಧಕ ದಳದ ಸಿಬ್ಬಂದಿಗಳಾದ ರಾಜು, ಶ್ರೀನಿವಾಸ ಪ್ರಸಾದ, ಎಂ.ಆರ್.ಗಣೇಶ್, ಪುರು ಷೋತ್ತಮ, ಜೋಸೆಫ್ ನರೋನ, ಅರುಣ್‍ಕುಮಾರ್ ಹಾಗೂ ಇತರರಿದ್ದರು.