ಲೋಕಸಭಾ ಚುನಾವಣೆ: 6ನೇ ಹಂತದಲ್ಲಿ ಶೇ.63.3 ಮತದಾನ

ನವದೆಹಲಿ: ಲೋಕಸಭಾ ಚುನಾವಣೆಯ 6ನೇ ಹಂತದಲ್ಲಿ ಶೇ. 63.3 ರಷ್ಟು ಮತದಾನವಾಗಿದೆ. ದೇಶದ 7 ರಾಜ್ಯಗಳ 59 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಿತು.

ಉತ್ತರಪ್ರದೇಶದ 14, ಹರಿಯಾಣದ 10, ಪ.ಬಂಗಾಳ, ಬಿಹಾರ, ಮಧ್ಯ ಪ್ರದೇಶದ ತಲಾ 8 ಕ್ಷೇತ್ರ, ದೆಹಲಿಯ 7 ಮತ್ತು ಜಾರ್ಖಂಡ್‍ನ 4 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಹಾರದಲ್ಲಿ ಶೇ.59.29, ಹರಿಯಾಣದಲ್ಲಿ ಶೇ.68.17, ಮಧ್ಯಪ್ರದೇಶ ದಲ್ಲಿ ಶೇ.64.55, ಉತ್ತರ ಪ್ರದೇಶದಲ್ಲಿ ಶೇ. 54.72, ಪಶ್ಚಿಮ ಬಂಗಳಾದಲ್ಲಿ ಶೇ.80.35, ಜಾರ್ಖಂಡ್‍ನಲ್ಲಿ ಶೇ.64.50, ದೆಹಲಿಯಲ್ಲಿ ಶೇ.59.74ರಷ್ಟು ಮತದಾನ ನಡೆದಿದೆ.

ಇಂದು ನಡೆದ ಚುನಾವಣೆಯಲ್ಲಿ ಕ್ರಿಕೆಟಿಗ ಗೌತಮ್ ಗಂಭೀರ್, ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್, ಬಾಕ್ಸರ್ ವಿಜೇಯಂದರ್ ಸಿಂಗ್, ಕೇಂದ್ರ ಸಚಿವ ಹರ್ಷವರ್ಧನ್, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್, ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮಾರ್ ಇತರರು ಅದೃಷ್ಟ ಪರೀಕ್ಷೆ ನಡೆಸಿದ್ದಾರೆ.