ಪ್ರೊಫೆಸರ್ ಹುದ್ದೆಗೆ ಬಡ್ತಿ ಆಗ್ರಹಿಸಿ ಏಕಾಂಗಿ ಧರಣಿ

ಮೈಸೂರು: ಅರ್ಹತೆ ಇದ್ದರೂ ಪ್ರೊಫೆಸರ್ ಆಗಿ ಬಡ್ತಿ ನೀಡುತ್ತಿಲ್ಲ ಎಂದು ಆರೋಪಿಸಿ ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಿಶ್ವನಾಥ್ ಮಾನಸಗಂಗೋತ್ರಿಯ ಗಾಂಧಿ ಭವನದ ಗಾಂಧಿ ಪುತ್ಥಳಿ ಬಳಿ ಬುಧವಾರ ಏಕಾಂಗಿ ಪ್ರತಿ ಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, 31 ವರ್ಷ ಸೇವೆ ಸಲ್ಲಿಸಿದ್ದು, ಪ್ರೊಫೆಸರ್ ಆಗಿ ಬಡ್ತಿ ನೀಡಲು ಎಲ್ಲಾ ಅರ್ಹತೆ ಹೊಂದಿದ್ದೇನೆ. ಈ ಬಗ್ಗೆ ಕುಲ ಪತಿಗಳಿಗೂ ಮನವಿ ಸಲ್ಲಿಸಿದ್ದು, ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋ ಪಿಸಿದರು. 2007ರಲ್ಲೇ ಪ್ರೊಫೆಸರ್ ಆಗಿ ಬಡ್ತಿ ನೀಡಬೇಕಿತ್ತು. ಆದರೆ ನೀಡಲಿಲ್ಲ. ಆ ಸಂದರ್ಭ ದಲ್ಲಿ ಅಕ್ರಮವಾಗಿ ನೇಮಕಾತಿ ಆದವರಿಗೆಲ್ಲಾ ಪ್ರೊಫೆಸರ್ ಆಗಿ ಬಡ್ತಿ ನೀಡಲಾಗಿದೆ. ಆದರೆ ನಾನು ಲಿಂಗಾಯತ ಸಮುದಾಯದವನು ಎಂಬ ಕಾರಣಕ್ಕೆ ತುಳಿಯಲಾಗುತ್ತಿದೆ. ಬಡ್ತಿ ನೀಡಲು ಹೈಕೋರ್ಟ್‍ನಿಂದಲೂ ಆದೇಶ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೇಡಿಕೆ ಈಡೇ ರಿಸುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆ ಸುವುದಾಗಿ ಅವರು ತಿಳಿಸಿದರು.